

ಶ್ರೀಹರಿಕೋಟಾ: ಭಾರತ ಕಾತರದಿಂದ ಕಾಯುತ್ತಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ-3 ಯೋಜನೆ ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಯೋಜನೆಯ ನಿರ್ದೇಶಕಿ 'ರಾಕೆಟ್ ಮಹಿಳೆ' ವಿಜ್ಞಾನಿ ರಿತು ಶ್ರೀವಾಸ್ತವ.
ವಿಜ್ಞಾನಿ ರಿತು ಶ್ರೀವಾಸ್ತವ ಯಾರು?:ಇಸ್ರೋ ವಿಜ್ಞಾನಿಯಾಗಿರುವ ರಿತು, ಚಂದ್ರಯಾನ-3 ಯೋಜನೆಯ ನಿರ್ದೇಶಕಿಯೂ ಹೌದು. ಉತ್ತರ ಪ್ರದೇಶದ ಲಖನ್ ಮೂಲದವರಾದ ಇವರು, ಮಂಗಳಯಾನ ಯೋಜನೆಯಲ್ಲೂ ಉಪನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಚಂದ್ರಯಾನ-3 ಯೋಜನೆಯ ಹೊಣೆಯನ್ನು ರಿತು ಅವರಿಗೆ ಇಸ್ರೋ ವಹಿಸಿದೆ.
ಶಿಕ್ಷಣ: ರಿತು ಕರಿಧಾಳ್ ಅವರು ಲಖನೌ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹೆಚ್ಚಿನ ವ್ಯಾಸಂಗ ನಡೆಸಿದರು. ಏರೋಸ್ಪೇಸ್ ವಿಷಯದಲ್ಲಿ ವಿಶೇಷ ಪರಿಣತಿ ಪಡೆದಿರುವ ಇವರನ್ನೇ ಈ ಯೋಜನೆಗೆ ಇಸ್ರೋ ಆಯ್ಕೆ ಮಾಡಿದೆ.
ಪ್ರಶಸ್ತಿಗಳು: 1997ರಿಂದ ಇಸ್ರೋದಲ್ಲಿರುವ ರಿತು, ಭಾರತದ ರಾಕೇಟ್ ಮಹಿಳೆ ಎಂದೇ ಗುರುತಿಸಿಕೊಂಡಿದ್ದಾರೆ. ರಿತು ಅವರಿಗೆ ಯುವ ವಿಜ್ಞಾನಿ ಪ್ರಶಸ್ತಿ, ಇಸ್ರೋ ಟೀಂ ಪ್ರಶಸ್ತಿ, ಎಎಸ್‌ಐ ಟೀಂ ಪ್ರಶಸ್ತಿ, ಭಾರತೀಯ ವಾಯುನೆಲೆ ತಂತ್ರಜ್ಞಾನದ ಹಾಗೂ ಸಂಸ್ಥೆಯ “ಏರೋಸ್ಪೇಸ್ ವುಮೆನ್' ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಸುಮಾರು 42 ದಿನಗಳ ನಂತರ ಚಂದ್ರಯಾನ-3ರ ಲ್ಯಾಂಡ ಮತ್ತು ರೋವರ್ ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿಯಲಿವೆ. ಯೋಜನೆ ಯಶಸ್ವಿಯಾದಲ್ಲಿ ಚಂದ್ರನ ಅಂಗಳವನ್ನು ಯಶಸ್ವಿಯಾಗಿ ತಲುಪಿದ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ. ಈವರೆಗೆ ಅಮೆರಿಕ, ಚೀನಾ ಮತ್ತು ರಷ್ಯಾ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹವನ್ನು ಲ್ಯಾಂಡ್ ಮಾಡಿವೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿದೆ.