More

    Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…

    ಬೆಂಗಳೂರು: ಟೊಮ್ಯಾಟೋ ಖರೀದಿಸುವಾಗ ಮಾತ್ರವಲ್ಲದೆ ಅವುಗಳನ್ನು ಅಡುಗೆಗೆ ಬಳಸುವಾಗ ಕೂಡಾ ಕಣ್ಣಲ್ಲಿ ನೀರು ಬರುತ್ತದೆ. ಸದ್ಯ ಟೊಮ್ಯಾಟೋ ಬೆಲೆ ದೇಶಾದ್ಯಂತ ಒಂದು ಕೆಜಿಗೆ 160 ರೂ.-200ರೂ. ಕ್ಕೆ ಮಾರಾಟವಾಗುತ್ತಿದೆ. ‘ಯಾಕೆ..ಇಷ್ಟು ಬೆಲೆ ಕೊಡಬೇಕು? ಟೊಮ್ಯಾಟೋ ಇಲ್ಲದೇ ತಿನ್ನಲಾರೆ ಎನ್ನುವಷ್ಟು ನಮ್ಮ ಆಹಾರ ಪದ್ಧತಿಯಲ್ಲಿ ಟೊಮ್ಯಾಟೋ ಬಳಕೆ ಮಾಡುತ್ತಿದ್ದೇವೆ. ಹೀಗಿರುವಾಗ ನಾವು ಇಂದು ನಿಮಗೆ ಟೊಮ್ಯಾಟೋ ಬದಲಾಗಿ ಯಾವ ಪದಾರ್ಥಗಳನ್ನು ನಿಮ್ಮ ಅಡುಗೆಯಲ್ಲಿ ಬಳಸಿಕೊಳ್ಳಬಹುದು ಎನ್ನುವುದನ್ನು ತಿಳಿಸಿ ಕೊಡುತ್ತೇವೆ.

    Tomato Crop

    ಇದನ್ನೂ ಓದಿ:  ದೋಸೆಯೊಂದಿಗೆ ಸಾಂಬಾರ್ ಕೊಡಲಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಗ್ರಾಹಕ; ತೀರ್ಪು ಕೇಳಿ ಜನರಿಗೆ ಅಚ್ಚರಿಯೋ ಅಚ್ಚರಿ…!

    ಹುಣಸೆಹಣ್ಣು ದಕ್ಷಿಣ ಭಾರತದ ಅಡುಗೆಗಳಾದ ತರಕಾರಿ ಸಾಂಬಾರ್ ರಸಂ ಸೇರಿದಂತೆ ಕೆಲವು ನಿತ್ಯ ಸೇವಿಸುವ ಆಹಾರಗಳಿಗೆ ಟೊಮ್ಯಾಟೋ ಗಿಂತ ಹುಣಸೆಹಣ್ಣಿನ ರಸ ಬಳಸುವ ಅಭ್ಯಾಸವಿದೆ. ಟೊಮ್ಯಾಟೋವನ್ನೇ ಬಳಸಬೇಕು ಅಂತ ಏನು ಇಲ್ಲ ಈಗಿನ ಪರಿಸ್ಥಿತಿಯಲ್ಲಿ ಟೊಮ್ಯಾಟೋವನ್ನು ಮರೆತು ಹುಣಸೆ ಮೊರೆ ಹೋದರೆ ಆರೋಗ್ಯಕ್ಕೂ ಒಳ್ಳೆಯದಾಗಿದೆ.

    Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…

    ಇದನ್ನೂ ಓದಿ: ಒಂದು ಸೀರೆ ತಯಾರಿಸಲು ಬೇಕಾಯ್ತು 2 ವರ್ಷ; ಇದರ ಬೆಲೆ ಬರೋಬ್ಬರಿ 21.9 ಲಕ್ಷ ರೂ.!

    ಟೊಮ್ಯಾಟೋ ಬದಲಿಗೆ ನಿಂಬೆಹಣ್ಣು ಬಳಸಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಸೇರಿದಂತೆ ಹಲವು ಪೋಷಕಾಂಶಗಳು ಹೇರಳವಾಗಿದ್ದು,ಆರೋಗ್ಯಕ್ಕೂ ಒಳ್ಳೆಯದು.

    ಇದನ್ನೂ ಓದಿ:  ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…

    ಮೊಸರನ್ನು ಟೊಮ್ಯಾಟೋ ಬದಲಿಗೆ ಬಳಸಲಾಗುತ್ತದೆ. ಗ್ರೇವಿಗಳಿಗೆ ಮೊಸರನ್ನು ಬಳಸಿದರೆ ರೆಸ್ಟೋರೆಂಟ್ ಶೈಲಿಯಲ್ಲಿ ಗ್ರೇವೀ ರೆಡಿಯಾಗುತ್ತೆ. ಮಾಂಸಹಾರಿ ಖಾದ್ಯಗಳಿಗೂ ಉಳಿಯಾಗಿ ಮೊಸರನ್ನು ಬಳಸಿದರೆ ರುಚಿ ಹೆಚ್ಚಾಗುತ್ತೆ.

    Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ…

    ಇದನ್ನೂ ಓದಿ: Kannada Serial TRP: ಕನ್ನಡದ ಟಾಪ್ ಸೀರಿಯಲ್‌ಗಳಿಗೆ ಟಕ್ಕರ್ ಕೊಡಲು ಸಜ್ಜಾಯ್ತು ಈ ಧಾರಾವಾಹಿ! 
    ಟೊಮ್ಯಾಟೋ ಬದಲಿಗೆ ಮಾವು ಬಳಸಬಹುದು. ಮಾವು ಹೆಚ್ಚು ಸಿಗುವ ದಿನಗಳಲ್ಲಿ ಒಣಗಿಸಿ ಆಮ್ ಚೂರ್ ತಯಾರಿಸುತ್ತಾರೆ. ಹಾಗಾಗಿ ಕರಿಗಳಲ್ಲಿ ಮಾವಿನ ಹಣ್ಣಿನ ತಿರುಳು ಮತ್ತು ಆಮ್ ಚೂರ್ ಅನ್ನು ಸಾರು, ಕರಿ, ರಸಂ, ಸಾಂಬಾರ್‌ಗಳಲ್ಲಿ ಬಳಸಬಹುದು.

    ಮಾವಿನ ಕಾಯಿ, ಬೆಟ್ಟದ ನೆಲ್ಲಿಕಾಯಿ ಇದು ಕೂಡ ಈಗ ಸೀಸನ್ ನಲ್ಲಿದೆ.ಇದನ್ನು ಅಡುಗೆಯಲ್ಲಿ ಬಳಸಿದರೆ ರುಚಿಕರವಾಗಿರುತ್ತದೆ.

    ನಯನತಾರಾ ಪತಿಗೆ ಎಚ್ಚರಿಕೆ ನೀಡಿದ ಶಾರುಖ್ ಖಾನ್, ವಿಘ್ನೇಶ್ ಶಿವನ್ ಪ್ರತಿಕ್ರಿಯೆ ಹೀಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts