More

    ಟೊಮ್ಯಾಟೋ ತಿನ್ನುವುದನ್ನು ಬಿಟ್ಟರೆ ಬೆಲೆ ಕಡಿಮೆಯಾಗುತ್ತದೆ ಎಂದ ಯುಪಿ ಸಚಿವೆ

    ಹರ್ದೊಯಿ: ದೇಶಾದ್ಯಂತ ಟೊಮ್ಯಾಟೋ ಬೆಲೆಯಲ್ಲಿ ತೀವ್ರ ಏರಿಕೆಯನ್ನು ಕಂಡಿದ್ದು ಈ ನಡುವೆ, ಟೊಮ್ಯಾಟೋ ದುಬಾರಿಯಾಗಿದ್ದರೆ ತಿನ್ನುವುದನ್ನು ನಿಲ್ಲಿಸಿ ಅಥವಾ ಮನೆಯಲ್ಲಿಯೇ ಬೆಳೆಯಿರಿ ಎಂದು ಉತ್ತರ ಪ್ರದೇಶದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಪೋಷಣೆ ಸಚಿವೆ ಪ್ರತಿಭಾ ಶುಕ್ಲಾ ಹೇಳಿದ್ದಾರೆ.

    ಇದನ್ನೂ ಓದಿ: ಭಾರತದಿಂದ ಪಾಕಿಸ್ತಾನಕ್ಕೆ ಸ್ನೇಹಿತನನ್ನು ಭೇಟಿಯಾಗಲು ಹೋದ ವಿವಾಹಿತ ಮಹಿಳೆ!

    ದುಬಾರಿ ವಸ್ತುಗಳ ಮೇಲೆ ಕಡಿವಾಣ ಹಾಕಿ ಯಾರೂ ಖರೀದಿಸದೇ ಇದ್ದರೇ ಸ್ವಾಭಾವಿಕವಾಗಿ ಬೆಲೆಗಳು ಕಡಿಮೆಯಾಗುತ್ತದೆ. ಯಾರೂ ಅವುಗಳನ್ನು(ಟೊಮ್ಯಾಟೋ) ಖರೀದಿಸದಿದ್ದರೆ, ವ್ಯರ್ಥವಾಗುವುದನ್ನು ತಡೆಯಲು ಅದರ ವೆಚ್ಚವನ್ನು ಕಡಿಮೆ ಮಾಡಲಾಗುತ್ತದೆ ಎಂದು ಶುಕ್ಲಾ ತಿಳಿಸಿದ್ದಾರೆ.

    ಟೊಮ್ಯಾಟೋಗಳಿಗೆ ಪರ್ಯಾಯವಾಗಿ ನಿಂಬೆಹಣ್ಣು ಬಳಸಬಹುದು ಎಂದು ಹೇಳಿದ ಸಚಿವರು, ಟೊಮ್ಯಾಟೋ ದುಬಾರಿಯಾಗಿದ್ದರೆ ಮನೆಯಲ್ಲೇ ಬೆಳೆಯಬೇಕು. ಕುಂಡಗಳಲ್ಲಿ ಸಸಿಗಳನ್ನು ನೆಡಬೇಕು. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಹಿತ್ತಲದಲ್ಲಿ ಅನೇಕ ತರಕಾರಿಗಳ ಜತೆಗೆ ಚಿಕ್ಕ ಉದ್ಯಾನವನ್ನಾಗಿ ಮಾಡಿರುತ್ತಾರೆ. ಅವರು ತರಕಾರಿಗಳನ್ನು ಖರೀದಿಸುವ ಅಗತ್ಯ ಕಡಿಮೆ ಎಂದಿದ್ದಾರೆ.

    ಟೊಮ್ಯಾಟೋ ಬೆಲೆಯಲ್ಲಿನ ಹಠಾತ್ ಮತ್ತು ತೀವ್ರ ಏರಿಕೆಯು ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಬೆಲೆ ಏರಿಕೆಯನ್ನು ದೃಷ್ಟಿಕೋನದಿಂದ ಹೇಳುವುದಾದರೆ, ಕೆಲವು ತಿಂಗಳ ಒಂದು ಕೆಜಿ ಟೊಮ್ಯಾಟೋಗೆ ಇದ್ದ ಬೆಲೆ ಪ್ರಸ್ತುತ ಒಂದು ಟೊಮ್ಯಾಟೋಗೆ ಇದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts