More

    ಚಂದ್ರಯಾನದ ಮೂರನೇ ಮಿಷನ್ ಏಕೆ ನಾಲ್ಕು ಸೆಕೆಂಡುಗಳಷ್ಟು ವಿಳಂಬವಾಯಿತು? ಇಸ್ರೋ ಉತ್ತರಿಸಿದೆ…

    ನವದೆಹಲಿ: ಕಳೆದ ವರ್ಷದ ಚಂದ್ರಯಾನ 3 ಮಿಷನ್ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ, ಬಾಹ್ಯಾಕಾಶ ಅವಶೇಷಗಳು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು 4 ಸೆಕೆಂಡ್​ಗಳ ವಿಳಂಬದೊಂದಿಗೆ ಮಿಷನ್ ಅನ್ನು ಪ್ರಾರಂಭಿಸಲಾಯಿತು. ಈ ವಿಷಯ ಭಾರತೀಯ ಬಾಹ್ಯಾಕಾಶ ಜಾಗೃತಿ ವರದಿ 2023 ರಲ್ಲಿದೆ. ಕಳೆದ ವರ್ಷ ಜೂನ್‌ನಲ್ಲಿ ಚಂದ್ರಯಾನ 3 ನೇ ಮಿಷನ್​ ಸಂಬಂಧದ ರಾಕೆಟ್​ ಉಡಾವಣೆ ಮಾಡಲಾಗಿತ್ತು.

    ಇದನ್ನೂ ಓದಿ: ಚುನಾವಣೆ ನಂತರ ಕಾಂಗ್ರೆಸ್ ಧೂಳಿಪಟ: ಯಡಿಯೂರಪ್ಪ

    ಚಂದ್ರಯಾನ-೩ರ ಸಂಯೋಜಿತ ಘಟಕ. ಸಿಲಿಂಡರ್ ಆಕಾರದ ಆರ್ಬಿಟರ್, ಅದರ ಮೇಲೆ ವಿಕ್ರಮ್ ಲ್ಯಾಂಡರ್ ಇತ್ತು. ಇದು ಆಗಸ್ಟ್ ೨೩, ೨೦೨೩ರಂದು ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿ, ಚಂದ್ರನ ದಕ್ಷಿಣ ಧ್ರುವದಲ್ಲಿ‌ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊಟ್ಟಮೊದಲ ದೇಶವಾಗಿತ್ತು.

    ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಮಾರ್ಕ್-3 (ಎಲ್‌ವಿಎಂ3) ರಾಕೆಟ್ ಬಳಸಿ ಉಡಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು, 2019 ರಲ್ಲಿ ಚಂದ್ರಯಾನ 2 ಉಡಾವಣೆಯು ಉಪಗ್ರಹ ವಿಕ್ರಮ್ ಎಂಬ ಲ್ಯಾಂಡರ್ ಮತ್ತು ಪ್ರಗ್ಯಾನ್ ಎಂಬ ರೋವರ್ ಅನ್ನು ಹೊಂದಿತ್ತು. ಕಾರ್ಯಾಚರಣೆ ಭಾಗಶಃ ಯಶಸ್ವಿಯಾಗಿತ್ತು. ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ಅನ್ನು ಇಳಿಸುವ ಭಾರತದ ಕನಸು ನನಸಾಗಿರಲಿಲ್ಲ.

    ಆದರೆ ಚಂದ್ರಯಾನ 3 ಕಾರ್ಯಾಚರಣೆಯು ಲ್ಯಾಂಡರ್ ಮತ್ತು ರೋವ‌ರ್ ಅನ್ನು ಒಳಗೊಂಡಿತ್ತು. ಲ್ಯಾಂಡ‌ರ್ ಅನ್ನು ರಚನಾತ್ಮಕ ಮಾರ್ಪಾಡುಗಳೊಂದಿಗೆ ಹೆಚ್ಚು ದೃಢವಾಗಿ ಅಭಿವೃದ್ಧಿಪಡಿಸಲಾಗಿತ್ತು. ಹೊಸ ಲ್ಯಾಂಡರ್ ವಿಕ್ರತ್‌ಗಿಂತಲೂ ಬಲವಾದ ಕಾಲುಗಳನ್ನು ಹೊಂದಿತ್ತು. ಚಂದ್ರಯಾನ 3 ಈ ಸವಾಲಿನ ಲ್ಯಾಂಡಿಂಗ್ ಮಿಷನ್ ಅನ್ನು ಸಾಧಿಸುವುದರೊಂದಿಗೆ, ಭಾರತವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ ಸಾಧಿಸಿದ ನಾಲ್ಕನೇ ದೇಶವಾಯಿತು. ಯುಎಸ್, ರಷ್ಯಾ ಮತ್ತು ಚೀನಾ ಇಂತಹ ಸಾಧನೆಗೈದ ದೇಶಗಳಾಗಿದ್ದವು.

    ಭೂಮಿಯ ಸುತ್ತ ಏಳೂವರೆ ಲಕ್ಷಕ್ಕೂ ಹೆಚ್ಚು(ಕೃತಕ ಉಪಗ್ರಹಗಳೂ ಸೇರಿ) ಲೋಹದ ಭಾಗಗಳು ಸುತ್ತುತ್ತಿವೆ ಎಂದು ಅಂದಾಜಿಸಲಾಗಿದೆ, ಇತ್ತೀಚಿನವರೆಗೂ ಭೂಮಿಯ ಒಳಗೆ ಮತ್ತು ವಾತಾವರಣದಲ್ಲಿ ತ್ಯಾಜ್ಯದ ಬಗ್ಗೆ ಹೇಳಲಾಗುತ್ತಿತ್ತು. ಆದರೆ ಚಂದ್ರಯಾನ 3 ಕಾರ್ಯಾಚರಣೆ ವಿಳಂಭಕ್ಕೆ ಬಾಹ್ಯಾಕಾಶದಲ್ಲಿನ ಅವಶೇಷಗಳು ಕಾರಣ ಎಂಬುದು ಆಘಾತಕಾರಿ ವಿಚಾರವೇ ಆಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆಯೂ ಜಗತ್ತು ಎಚ್ಚರಿಕೆ ವಹಿಸಬೇಕಾಗಿದೆ.

    ದುಬೈನಲ್ಲಿ ನಿರ್ಮಾಣಗೊಳ್ಳುತ್ತಿದೆ ವಿಶ್ವದಲ್ಲೇ ಅತಿದೊಡ್ಡ ಏರ್ಪೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts