More

    ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ: ಡಿಕೆಶಿ ವಾಗ್ದಾಳಿ

    ಮುಂಡಗೋಡ: ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರುಳು ಮಾಡಿದೆ. ಅತಿಕ್ರಮಣದಾರರ ವಿಚಾರದಲ್ಲಿಯೂ ರಾಜಕೀಯ ಮಾಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಅರ್ಜುನನ ಸಮಾಧಿ ಕುರಿತಂತೆ ಧ್ವನಿ ಎತ್ತಿದ ದಾಸ; ಸರ್ಕಾರಕ್ಕೆ ನಟ ದರ್ಶನ್​ ಕೋರಿಕೆ ಏನು?

    ಇಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅರಣ್ಯ ಅತಿಕ್ರಮಣದಾರರಿಗೆ ಪಟ್ಟ ಕೊಡಿಸಲಿದೆ.‌ ಈ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ. ಅರಣ್ಯ ಅತಿಕ್ರಮಣದಾರರ ಪರ ಹೋರಾಟ ನಡೆಸುತ್ತಿರುವ ರವೀಂದ್ರ ನಾಯ್ಕರಿಗೆ ಸಹ ಸೂಕ್ತ ಸ್ಥಾನಮಾನ ನೀಡಲಿದೆ” ಎಂದರು.

    “ರಾಜ್ಯದಲ್ಲಿ ಬರ ಬಂದಿದೆ. ‌200 ತಾಲೂಕುಗಳಲ್ಲಿ ಬರಗಾಲ ಇದೆ. ಬರ ಪರಿಹಾರದಲ್ಲಿ ಕೇಂದ್ರ ಸರಕಾರ, ರಾಜ್ಯಕ್ಕೆ ಸಹಾಯ ಮಾಡಿಲ್ಲ. ಕೇಂದ್ರ ಸರಕಾರ ಸತ್ತು‌ ಹೋಗಿದೆ. ಕೊರೋನಾ ಸಂದರ್ಭದಲ್ಲಿ ಕೇಂದ್ರದ ಮುಂದೆ ಹೋಗಿ ಪರಿಹಾರ ಕೇಳಿದ್ದೆವು. ಆದರೆ ಆಗಲೂ ಇವರ ಸರಕಾರ ಸಹಾಯ ಮಾಡಿಲ್ಲ. ಕಾಂಗ್ರೆಸ್ ಸರಕಾರದಿಂದ ಬಡವರಿಗೆ ಭಾರೀ ಸಹಾಯವಾಗಿದೆ” ಎಂದರು.

    ಇದನ್ನೂ ಓದಿ: SC/ST ಹಣದಲ್ಲಿಯೂ ಸಹ ಸಿದ್ದರಾಮಯ್ಯ ಲೂಟಿ ಹೊಡೆದಿದ್ದಾರೆ: ಆರ್​. ಅಶೋಕ್​

    “ನಾವೇನು ದೇವಸ್ಥಾನ ಕಟ್ಟಿಲ್ವಾ? ನಾವೆಲ್ಲರು ಹಿಂದು. ಬಿಜೆಪಿ ಹಿಂದುತ್ವದ ರಾಜಕಾರಣ ಮಾಡುತ್ತಿದೆ. ಬಂಗಾರಪ್ಪರ ಕಾಲದಲ್ಲೇ ನಾವು ನೂರಾರು ದೇವಸ್ಥಾನ ಕಟ್ಟಿದ್ದೇವೆ. ಧರ್ಮದಲ್ಲಿ ರಾಜಕಾರಣ ಮಾಡುವ ಬಿಜೆಪಿಗೆ ಹಿಂದುತ್ವ ರಾಜಕಾರಣ ಮಾಡುವ ಹಕ್ಕಿಲ್ಲ. ಕಾಂಗ್ರೆಸ್ ರೈತರಿಗೆ ಉಚಿತ ವಿದ್ಯುತ್ ನೀಡಿತು. ಬಡವರಿಗಾಗಿ ನರೇಗಾ ಅಡಿ ಉದ್ಯೋಗ ನೀಡಿತು. ನಾವು ಅಧಿಕಾರಕ್ಕೆ ಬಂದ ನಂತರ ನರೇಗಾ ಕೂಲಿಯನ್ನು ಮತ್ತಷ್ಟು ಹೆಚ್ಚಿಸುತ್ತೇವೆ. ಕೊರೊನಾ ಸಂದರ್ಭದಲ್ಲಿ 22 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿತು.‌ ಆದರೆ ಯಾವುದೇ ಹಣ ಬರಲಿಲ್ಲ” ಎಂದರು.

    ಇದನ್ನೂ ಓದಿ: ಹೈಕೋರ್ಟ್​ ಟೆರೇಸ್​ ಮೇಲೆ ಮಹಿಳೆಗೆ ಚುಂಬಿಸಿದ ವಕೀಲ! ವಿಡಿಯೋ ವೈರಲ್​ ಆದ ಬಳಿಕ ದೂರು ದಾಖಲು

    “ರಾಜ್ಯದಲ್ಲಿ ಐದು ಸಾವಿರ ಹಣ ಕೊಡುತ್ತೇವೆಂದು ನಾಲ್ಕೈದು ಜನಕ್ಕೆ ನೀಡಿ ಸುಮ್ಮನಾದರು. ಕೋವಿಡ್ ವ್ಯಾಕ್ಸಿನ್​ನಿಂದ ದೇಹಕ್ಕೆ ಸಮಸ್ಯೆಯಾಗುತ್ತಿದೆ ಎಂಬ ವರದಿ ನೋಡಿದೆ. ಇದಕ್ಕೆ ಹೊಣೆ ಯಾರು? ಔಷಧಿ ನೀಡಿದ ಕಂಪನಿ ಎಲೆಕ್ಷನ್ ಬಾಂಡ್​ನಲ್ಲಿ ಬಿಜೆಪಿಗೆ ಹಣ ನೀಡಿದೆ. ಆ ಮೂಲಕ ಕೊರೋನಾದಲ್ಲೂ ಮಾಫಿಯಾ ಮಾಡಿದ್ದಾರೆ” ಎಂದು ಆರೋಪಿಸಿದರು.

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts