More

    ದೆಹಲಿಯಲ್ಲಿ ಭೀಕರ ಮಳೆ; ನೀರಲ್ಲಿ ಮುಳುಗಿ ಮೂವರು ಮಕ್ಕಳ ದುರಂತ ಅಂತ್ಯ…

    ನವದೆಹಲಿ: ಯಮುನಾ ನದಿಯ ನೀರಿನ ಮಟ್ಟವು ವೇಗವಾಗಿ ಏರುತ್ತಿದ್ದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಸ್ಥಿತಿ ಭೀಕರವಾಗಿದೆ. ಈಗಾಗಲೇ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುಂದಿನ 4-5 ದಿನಗಳವರೆಗೆ ದೆಹಲಿಯಲ್ಲಿ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ದೆಹಲಿಯಲ್ಲಿ ಭೀಕರ ಮಳೆ; ನೀರಲ್ಲಿ ಮುಳುಗಿ ಮೂವರು ಮಕ್ಕಳ ದುರಂತ ಅಂತ್ಯ…

    ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಯಮುನಾ ನದಿಯು ಅಪಾಯದ ಮಟ್ಟಕ್ಕಿಂತ 3 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಈ ಮೂಲಕ 45 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.

    ದೆಹಲಿಯಲ್ಲಿ ಭೀಕರ ಮಳೆ; ನೀರಲ್ಲಿ ಮುಳುಗಿ ಮೂವರು ಮಕ್ಕಳ ದುರಂತ ಅಂತ್ಯ…

    ಯಮುನಾದಲ್ಲಿ ಅಪಾಯದ ಮಟ್ಟ 205.33 ಆಗಿದ್ದರೆ, ಯಮುನಾದಲ್ಲಿ ನೀರಿನ ಮಟ್ಟವು ಪ್ರಸ್ತುತ 208.12ರಷ್ಟಿದೆ. ಅದೃಷ್ಟವಶಾತ್, ನೀರಿನ ಮಟ್ಟವು ಕಡಿಮೆಯಾಗಲು ಪ್ರಾರಂಭಿಸಿದೆ. ಆದರೂ, ದೆಹಲಿಯ ತಗ್ಗು ಪ್ರದೇಶಗಳ ನಿವಾಸಿಗಳು ಮತ್ತೆ ಭಾರಿ ಮಳೆಯ ಮುನ್ಸೂಚನೆ ಬಂದಿರುವುದರಿಂದ ಚಿಂತಿತರಾಗಿದ್ದಾರೆ.

    ದೆಹಲಿಯಲ್ಲಿ ಭೀಕರ ಮಳೆ; ನೀರಲ್ಲಿ ಮುಳುಗಿ ಮೂವರು ಮಕ್ಕಳ ದುರಂತ ಅಂತ್ಯ…

    ಮೂವರ ದುರಂತ ಅಂತ್ಯ…

    ದೆಹಲಿಯಲ್ಲಿ ಭೀಕರ ಮಳೆ; ನೀರಲ್ಲಿ ಮುಳುಗಿ ಮೂವರು ಮಕ್ಕಳ ದುರಂತ ಅಂತ್ಯ…

    ದೆಹಲಿ ಪ್ರವಾಹದ ಈವರೆಗೆ ಮೂವರು ಮಕ್ಕಳನ್ನು ಬಲಿ ಪಡೆದಿದೆ. ವಾಯುವ್ಯ ದೆಹಲಿಯ ಮುಕುಂದಪುರ ಪ್ರದೇಶದಲ್ಲಿ  ಜು.13 ರಂದು (ಶುಕ್ರವಾರ) 12ರಿಂದ 15 ವರ್ಷದೊಳಗಿನ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದೆಹಲಿಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ವಿಪತ್ತು ಪ್ರತಿಕ್ರಿಯೆ ಪಡೆ ತಂಡಗಳನ್ನು ನಿಯೋಜಿಸಲಾಗಿದ್ದು ಅವರು ತಗ್ಗು ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿದ್ದಾರೆ.

    ದೆಹಲಿಯಲ್ಲಿ ಭೀಕರ ಮಳೆ; ನೀರಲ್ಲಿ ಮುಳುಗಿ ಮೂವರು ಮಕ್ಕಳ ದುರಂತ ಅಂತ್ಯ…

    ಯಮುನೆಯ ಸಿಟ್ಟಿನ ಮಟ್ಟ ಏರಿದ್ಯಾಕೆ?

    “ದೆಹಲಿ ಮಾತ್ರವಲ್ಲ, ಉತ್ತರ ಭಾರತದ ಇತರ ರಾಜ್ಯಗಳಲ್ಲೂ ಪರಿಸ್ಥಿತಿ ಭೀಕರವಾಗಿದೆ. ಭಾರಿ ಮಳೆ ಮತ್ತು ಭೂಕುಸಿತವು ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹರಿಯಾಣದ ಹಟ್ನಿಕುಂಡ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ ಪರಿಣಾಮವಾಗಿ, ಯಮುನಾದಲ್ಲಿನ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಮೂರು ಮೀಟರ್ ಹೆಚ್ಚಾಗಿದೆ. ಅದಲ್ಲದೇ ನವದೆಹಲಿಯ ಅನೇಕ ಪ್ರಮುಖ ರಸ್ತೆಗಳು  ಮಳೆ ನೀರಿನ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ ನೀರು ನಿಂತಿರುವ ಕಾರಣ ಕೆಲ ಪ್ರದೇಶಗಳು ನಡುಗಡ್ಡೆಯ ರೀತಿ ಪರಿವರ್ತನೆ ಆಗಿವೆ. (ಏಜೆನ‍್ಸೀಸ್‍)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts