ಸತ್ತವರನ್ನು ಬದುಕಿಸುವ ತಂತ್ರ ಗೊತ್ತೆಂದು ತಂದೆ ಮಗನನ್ನು ಕೊಂದೇ ಬಿಟ್ಟ; ವಾಮಾಚಾರಕ್ಕೆ ಬಲಿಯಾಯ್ತು ಕುಟುಂಬ

black magic
Published on

ಪ್ರಯಾಗ್​ರಾಜ್​: ವಾಮಾಚಾರವೆನ್ನುವ ಅನಿಷ್ಟ ಪದ್ಧತಿ ಬಗ್ಗೆ ನಿಮಗೆ ಗೊತ್ತಿರುತ್ತದೆ. ಏನೇನೋ ತಂತ್ರಗಳನ್ನು ಬಳಸಿಕೊಂಡು ಮುಗ್ಧ ಜನರನ್ನು ಬಲಿ ತೆಗೆದುಕೊಳ್ಳುವಲ್ಲಿ ವಾಮಾಚಾರ ಮಾಡುವವರು ಎತ್ತಿಕ ಕೈ. ನನಗೆ ಸತ್ತವರನ್ನು ಬದುಕಿಸುವ ತಂತ್ರ ಗೊತ್ತು ಎಂದು ಹೇಳಿ ತಂದೆ, ಮಗನ ಮೇಲೆ ವಾಮಾಚಾರ ಮಾಡಲು ಹೋಗಿ ಅವರನ್ನು ಸಾಯಿಸಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ.

ವಕೀಲ್​ ಹೆಸರಿನ ಟೈಲರ್​ ತನ್ನ ಪತ್ನಿ ಗುಲ್ಜನ್​ ಮತ್ತು ಮಗ ಅರ್ಹಾಮ್​ ಜತೆ ಸುಂದರ ಸಂಸಾರ ನಡೆಸುತ್ತಿದ್ದ. ಈ ಸುಖ ಸಂಸಾರಕ್ಕೆ ಕೆಲ ದಿನಗಳ ಹಿಂದೆ ಸಫ್ದಾಲ್​ ಅಲಿ ಅಲಿಯಾಸ್​ ಬಬ್ಲು ಎಂಟ್ರಿಯಾಗಿದೆ. ವಾಮಾಚಾರಿ ಎಂದು ಹೇಳಿಕೊಂಡಿದ್ದ ಈತ ತನಗೆ ಸತ್ತವರನ್ನು ಬದುಕಿಸುವ ತಂತ್ರ ಗೊತ್ತು ಎಂದು ವಕೀಲ್​ಗೆ ಹೇಳಿದ್ದೇನೆ. ನೀನು ಕೆಲವು ತಂತ್ರಗಳನ್ನು ಕಲಿಯಬಹುದು, ಮೊದಲು ವ್ರತ ಪಾಲಿಸು ಎಂದು ಆತನಿಗೆ ವಿಚಿತ್ರ ವ್ರತ ಹೇಳಿಕೊಡಲಾರಂಭಿಸಿದ್ದಾನೆ.

ವ್ರತದ ಹೆಸರಿನಲ್ಲಿ ವಕೀಲ್​ ಕುಟುಂಬ ನಾಲ್ಕು ದಿನದಿಂದ ಉಪವಾಸ ಜೀವಿಸಿದೆ. ಹೊಟ್ಟೆಗೆ ಊಟ ಸಿಗದ ಹಿನ್ನೆಲೆಯಲ್ಲಿ ವಕೀಲ್​ ಮತ್ತು ಆತನ ಮಗ ಸಾವನ್ನಪ್ಪಿದ್ದಾರೆ. ಆತನ ಪತ್ನಿಯೂ ಅಸ್ವಸ್ಥಳಾಗಿದ್ದಾಳೆ. ಸತ್ತವರನ್ನು ಬದುಕಿಸಲು ಪ್ರಯತ್ನಿಸಿ, ವಿಫಲನಾದ ಬಬ್ಲು ವಕೀಲ್​ ಮನೆಯಿಂದ ಕಾಲ್ಕಿತ್ತಿದ್ದಾನೆ.

ಸ್ಥಳೀಯರಿಗೆ ವಿಚಾರ ತಿಳಿದಿದ್ದು, ಅವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಗುಲ್ಜನ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವಕೀಲ್​ ಮತ್ತು ಆತನ ಮಗನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಬಬ್ಲುವನ್ನು ಹುಡುಕಿ ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net