More

    ಪಾಕಿಸ್ತಾನದಲ್ಲಿ ತಳ್ಳದೆ ಬಸ್​ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್​ ಆಗುತ್ತಿದೆ ಈ ವಿಚಾರ

    ಪೇಶಾವರ: ಭಯೋತ್ಪಾದಕರನ್ನು ಸಲಹುತ್ತಿರುವ ಪಾಕಿಸ್ತಾನ ಅಭಿವೃದ್ಧಿಯತ್ತ ಹೆಚ್ಚಿನ ಮಹತ್ವವನ್ನೇನು ಕೊಟ್ಟಿಲ್ಲ. ತೀರಾ ಇತ್ತೀಚೆಗೆ ಆರಂಭವಾದ ಯೋಜನೆಗಳೂ ಕೂಡ ವಿಫಲವಾಗಿ ಪಾಕಿಸ್ತಾನ ಪೇಚಿಗೆ ಸಿಲುಕಿದೆ. ಅದೇ ರೀತಿಯಲ್ಲಿ ಇದೀಗ ಹೊಸದೊಂದು ಯೋಜನೆಯು ವಿಫಲವಾಗಿದ್ದು, ಟ್ರೋಲಿಗರ ಕಣ್ಣಿಗೆ ಸಿಕ್ಕಿದೆ.

    ಇದನ್ನೂ ಓದಿ: ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ

    ಪೇಶಾವರದದಲ್ಲಿ ಕಳೆದ ಆಗಸ್ಟ್​ನಲ್ಲಿ ಪೆಶಾವರ ಬಸ್​ ರ್ಯಾಪಿಡ್​ ಟ್ರಾನ್ಸಿಟ್​ (ಬಿಆರ್​ಟಿ) ಯೋಜನೆಯನ್ನು ಆರಂಭಿಸಲಾಗಿದೆ. ನಗರದ ಜನರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ಆರಂಭಿಸಲಾದ ಈ ಯೋಜನೆ ಮೂಲಕ ಹಲವಾರು ಬಸ್ಸುಗಳನ್ನು ರಸ್ತೆಗಿಳಿಸಲಾಗಿದೆ. ಆದರೆ ಈ ಬಸ್ಸುಗಳು ಕೇವಲ ಮೂರೇ ತಿಂಗಳಲ್ಲಿ ಹಾಳಾಗಿವೆ ಎನ್ನಲಾಗಿದೆ.

    ಇದನ್ನೂ ಓದಿ: ಲೈಂಗಿಕ ಕಿರುಕುಳ ನೀಡಿದ ಅಪರಾಧಿಗಳಿಗೆ ನಡುರಸ್ತೆಯಲ್ಲಿ ಬಸ್ಕಿ ಹೊಡೆಯುವ ಶಿಕ್ಷೆ; ಕೋರ್ಟ್​ಗೆ ಹೋಗುವುದರೊಳಗೆ ಹೈರಾಣಾದ ಅಪರಾಧಿಗಳು

    ಬಿಆರ್​ಟಿ ಬಸ್ಸೊಂದನ್ನು ಜನರು ತಳ್ಳುವ ಫೋಟೋ ಇದೀಗ ಸಕತ್​ ವೈರಲ್​ ಆಗಿದೆ. ಅಂದ ಹಾಗೆ ಈ ಬಸ್ಸು ಪೇಶಾವರದ ಅದ್ಬಾರ ಬಳಿ ಶುಕ್ರವಾರ ಕೆಟ್ಟು ನಿಂತಿದೆ. ಅದರಲ್ಲಿದ್ದ ಪ್ರಯಾಣಿಕರೇ ಇಳಿದು ಬಸ್ಸನ್ನು ತಳ್ಳಿದ್ದಾರೆ. ಈ ಫೋಟೋಕ್ಕೆ ಟ್ರೋಲಿಗರು ಅನೇಕ ರೀತಿಯ ವ್ಯಾಖ್ಯಾನ ಬರೆಯಲಾರಂಭಿಸಿದ್ದಾರೆ. ಪಾಕಿಸ್ತಾನದ ವಿರೋಧ ಪಕ್ಷದವರೂ ಕೂಡ ಈ ವಿಚಾರದಲ್ಲಿ ಟ್ರೋಲ್​ ಮಾಡಲಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿ ಆಡಳಿತ ಪಕ್ಷ ಶಕ್ತಿ ಕಳೆದುಕೊಂಡಾಗ ಈ ರೀತಿ ಮಾನವ ಶಕ್ತಿ ಬಳಸಬೇಕಾಗುತ್ತದೆ ಎಂದು ಅನೇಕರು ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

    ಅಮ್ಮನ ಅಸ್ಥಿಪಂಜರೊಂದಿಗೇ ಬದುಕಿದ ಮಗಳು; ಮನೆಯಲ್ಲಿ ಕೇಳುತ್ತಿತ್ತು ವಿಚಿತ್ರ ಸದ್ದು

    ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts