More

    ಲಾಕ್​ಡೌನ್​ ಬಗ್ಗೆ 8-10 ದಿನದಲ್ಲಿ ನಿರ್ಧಾರ; ಎಲ್ಲದಕ್ಕೂ ಸಿದ್ಧರಾಗಿರಿ

    ಮುಂಬೈ: ದೇಶದಲ್ಲಿ ಕರೊನಾ ಪ್ರಮಾಣ ತಗ್ಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಸೋಂಕು ಮತ್ತೊಮ್ಮೆ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಲಾಕ್​ಡೌನ್​ ನಡೆಸಲು ಆಯಾ ರಾಜ್ಯಗಳು ಚಿಂತನೆ ನಡೆಸುತ್ತಿವೆ.

    ಇದನ್ನೂ ಓದಿ: ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?

    ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಕಳೆದ ವಾರಗಳಲ್ಲಿ ಭಾರಿ ಪ್ರಮಾಣದಲ್ಲಿ ತಗ್ಗಿತ್ತು. ಆದರೆ ಇದೀಗ ಮತ್ತೊಮ್ಮೆ ಏರಿಕೆಯಾಗುತ್ತಿದೆ. ಅದೇ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಮಾಡಬಹುದು ಎನ್ನುವ ಸುದ್ದಿಗಳು ಹರಿದಾಡಿದೆ. ಈ ವಿಚಾರವಾಗಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಅಲ್ಲಿನ ಸರ್ಕಾರ ಕೂಡ ತಿಳಿಸಿದೆ.

    ದೀಪಾವಳಿ ಹಬ್ಬದ ಸಮಯದಲ್ಲಿ ಅತಿ ಹೆಚ್ಚು ಜನ ಗುಂಪು ಸೇರಿದ್ದಾರೆ. ಗಣೇಶ ಚತುರ್ಥಿಯ ಸಮಯದಲ್ಲಿಯೂ ಇದೇ ರೀತಿಯಲ್ಲಿ ಆಗಿತ್ತು. ರಾಜ್ಯದಲ್ಲಿ ಸೋಂಕಿನ ಎರಡನೇ ಅಲೆ ಆರಂಭವಾಗುವ ಸೂಚನೆಯಿದೆ. ಮುಂದಿನ ಎಂಟರಿಂದ ಹತ್ತು ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ನಂತರ ಲಾಕ್​ಡೌನ್​ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್​ ಪವಾರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ

    ಎರಡನೇ ಹಂತದ ಲಾಕ್​ಡೌನ್​ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 17.5 ಲಕ್ಷಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ. (ಏಜೆನ್ಸೀಸ್​)

    ಪಾಕಿಸ್ತಾನದಲ್ಲಿ ತಳ್ಳದೆ ಬಸ್​ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್​ ಆಗುತ್ತಿದೆ ಈ ವಿಚಾರ

    ಅಮ್ಮನ ಅಸ್ಥಿಪಂಜರೊಂದಿಗೇ ಬದುಕಿದ ಮಗಳು; ಮನೆಯಲ್ಲಿ ಕೇಳುತ್ತಿತ್ತು ವಿಚಿತ್ರ ಸದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts