ರಾತ್ರಿ ಬೆತ್ತಲೆಯಾಗಿ ಮಾಡೆಲ್​ ಮನೆಗೆ ನುಗ್ಗಿದ ವ್ಯಕ್ತಿ: ಗದ್ದಲ ಕೇಳಿ ಎಚ್ಚರಗೊಂಡವಳಿಗೆ ಕಾದಿತ್ತು ಶಾಕ್!

America Model
Published on

ಕ್ಯಾಲಿಫೋರ್ನಿಯಾ: ಸೂಪರ್​ ಮಾಡೆಲ್​ ಕೆಂಡಾಲ್​ ಜೆನ್ನರ್​ ಎರಡು ಭಾರಿ ಭದ್ರತಾ ಬೆದರಿಕೆಯನ್ನು ಎದುರಿಸಿದ ಘಟನೆ ನಡೆದಿದೆ. ಬೆತ್ತಲೆ ವ್ಯಕ್ತಿಯೊಬ್ಬ ಕೆಂಡಾಲ್​ ಜೆನ್ನರ್ ಅವರ​​ ಸ್ವಿಮ್ಮಿಂಗ್​ ಫೂಲ್​ ನುಗ್ಗಲು ಯತ್ನಿಸಿದ ಘಟನೆ ಒಂದೆಡೆಯಾದರೆ, ಮತ್ತೊಬ್ಬ ಆಕೆಯನ್ನು ಕೊಲ್ಲಲು ದೇಶವೆಲ್ಲ ಸುತ್ತಾಡಿದ್ದಾನೆ.

ಸೋಮವಾರ ಮಲಿಕ್​ ಬೌಕರ್​ (24) ಎಂಬಾತ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 25 ವರ್ಷದ ಮಾಡೆಲ್​ ಕೆಂಡಾಲ್​ ಜೆನ್ನರ್​ಳನ್ನು ಕೊಲೆ ಮಾಡಲು ಅಕ್ರಮ ಶಸ್ತ್ರಾಸ್ತ್ರ ಖರೀದಿಸಿದ್ದ. ಹಿಂದಿನ ದಿನ ಭಾನುವಾರ 27 ವರ್ಷದ ವ್ಯಕ್ತಿಯೊಬ್ಬ ಕ್ಯಾಲಿಫೋರ್ನಿಯಾದ ವೆಸ್ಟ್​ ಹಾಲಿವುಡ್​ನಲ್ಲಿರುವ ಮಾಡೆಲ್​​ ಮನೆಗೆ ನುಗ್ಗಿ ತನ್ನ ಬಟ್ಟೆಯೆಲ್ಲ ಕಳಚಿ ಪೂರ್ತಿ ಬೆತ್ತೆಲೆಯಾಗಿ ಆಕೆ ಮುಂದೆ ಸ್ವಿಮ್​ ಮಾಡಲು ಸ್ವಿಮ್ಮಿಂಗ್​ ಪೂಲ್​ಗೆ ನುಗ್ಗಲು ಯತ್ನಿಸಿದ. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ತಡೆದು ವಶಕ್ಕೆ ಪಡೆದುಕೊಂಡರು.

ಆರೋಪಿ ಬೌಕರ್​ನನ್ನು ತಾತ್ಕಾಲಿಕವಾಗಿ ಲಾಸ್​ ಏಂಜಲೀಸ್​ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಬಂಧಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಆತನನ್ನು ಬಿಡುಗಡೆ ಮಾಡಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೌಕರ್​ನನ್ನು ಜೆನ್ನರ್​ ಎಂದಿಗೂ ಭೇಟಿಯಾಗಿಲ್ಲವಂತೆ. ಆದರೆ, ಆತ ತನ್ನನ್ನು ಕೊಲ್ಲಲು ಏಕೆ ಯತ್ನಿಸುತ್ತಿದ್ದಾನೆಂಬುದು ಆಕೆಗೆ ಭಯವಾಗಿದೆಯಂತೆ.

ಬಿಡುಗಡೆಯಾದರೆ ನನ್ನನ್ನು ಕೊಲ್ಲಲು ಮತ್ತೆ ಪ್ರಯತ್ನ ಮಾಡಬಹುದು ಎಂಬುದೇ ಆಕೆಗೆ ಈಗಿರುವ ಭಯ. ಸದ್ಯ ನ್ಯಾಯಾಲಯ ಜೆನ್ನರ್​ಗೆ ಸ್ವಲ್ಪ ತಾತ್ಕಾಲಿಕ ರಿಲೀಫ್​ ನೀಡಿದ್ದು, ಬೌಕರ್​ ಎಲ್ಲ ಸಮಯದಲ್ಲೂ ಜೆನ್ನರ್​ ಅವರಿಂದ ಸುಮಾರು 100 ಯಾರ್ಡ್​ ದೂರದಲ್ಲಿ ಉಳಿಯಬೇಕೆಂದು ಆದೇಶಿಸಿದೆ.

ಮತ್ತೊಬ್ಬ ಆರೋಪಿ ಭಾನುವಾರ ಬೆಳಗ್ಗೆ 2 ಗಂಟೆಗೆ ಲಾಸ್​ ಏಂಜಲೀಸ್​ನಲ್ಲಿರುವ ಮಾಡೆಲ್​ ಮನೆಗೆ ನುಗ್ಗಿ ಕಿಟಕಿಯನ್ನು ಬಡಿದು ಹೆಸರಿಡಿದು ಕರೆದಿದ್ದಾನೆ. ಈ ವೇಳೆ ಮಾಡೆಲ್​ ಅಲ್ಲಿಯೇ ಇದ್ದರು. ವ್ಯಕ್ತಿ ಕೂಗಾಡುವುದನ್ನು ನೋಡಿ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದರು. ಅಷ್ಟರಲ್ಲಾಗಲೇ ಆರೋಪಿ ತನ್ನ ಬಟ್ಟೆಯನ್ನೆಲ್ಲ ಕಳಚಿ ಬೆತ್ತಲೆಯಾಗಿ ಸ್ವಿಮ್ಮಿಂಗ್​ ಫೂಲ್​ಗೆ ನುಗ್ಗಲು ಯತ್ನಿಸಿದ್ದ.

ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ ಕರೆದೊಯ್ದರು. ಆರು ಗಂಟೆಗಳ ಬಳಿಕ ಆತನನ್ನುಮ ಬಿಡುಗಡೆ ಮಾಡಿದರು. ಈ ಎರಡು ಘಟನೆಯಿಂದ ಭಯಗೊಂಡಿರುವ ಜೆನ್ನರ್​, ಮತ್ತಷ್ಟು ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net