ದಾವಣಗೆರೆ: ಹಾಡು ಹಗಲಲ್ಲೇ ಮಹಿಳೆಯೊಬ್ಬಳು ಲಾಂಗ್ ಹಿಡಿದುಕೊಂಡು ಮಾರುಕಟ್ಟೆಯಲ್ಲಿ ಓಡಾಡಿರುವ ಘಟನೆ ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ನಿವಾಸಿ ರುಕ್ಮಿಣಿ (34) ಲಾಂಗ್ ಹಿಡಿದು ಓಡಾಡಿದ ಮಹಿಳೆ. ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗಿದ್ದು, ಈಕೆಗೆ 3 ಮಕ್ಕಳಿದ್ದಾರೆ. ಲಾಂಗ್ ಹಿಡಿದು ಓಡಾಡಿದ್ದನ್ನು ಕಂಡು ಚನ್ನಗಿರಿ ಪಟ್ಟಣದ ಜನ ದಿಕ್ಕಾಪಾಲಾಗಿ ಓಡಿದ ಪ್ರಸಂಗವೂ ಜರುಗಿತು.
ಇದನ್ನೂ ಓದಿರಿ: VIDEO| ಚುನಾವಣಾ ಪ್ರಚಾರದ ಕೊನೆಯ ದಿನ ರಾಷ್ಟ್ರಗೀತೆಗಾಗಿ ವ್ಹೀಲ್ಚೇರ್ನಿಂದ ಎದ್ದು ನಿಂತ ದೀದಿ..!
ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಜರ್ಕಿನ್ ಧರಿಸಿ ಬೀದಿ ಬೀದಿಗಳಲ್ಲಿ ಲಾಂಗ್ ಹಿಡಿದುಕೊಂಡು ಮಹಿಳೆ ಅಡ್ಡಾಡಿದ್ದಾಳೆ. ಜೋಗಿ ಚಲನಚಿತ್ರದ ನಾಯಕನಂತೆ ಮಹಿಳೆ ಫೋಸ್ ನೀಡುತ್ತಿದ್ದಳು. ಆಟೋ ಚಾಲಕರು ಉಪಾಯವಾಗಿ ಮಹಿಳೆಯಿಂದ ಲಾಂಗ್ ಪಡೆದುಕೊಂಡರು.
ಇದಾದ ಬಳಿಕ ಆಕೆಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
Web Exclusive | ಎಲ್ಲಿ ಹೋದಳು ಅಮ್ಮ?: 3 ಮರಿಗಳನ್ನು ಬಿಟ್ಟು ಹೋದ ತಾಯಿ ಹುಲಿ ಹುಡುಕಾಟದಲ್ಲಿ ಅರಣ್ಯ ಇಲಾಖೆ