

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರೇ ಕಾರು ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
ಆತ್ಮಹತ್ಯೆಗೆ ಪ್ರಯತ್ನಿಸಿರುವ ವ್ಯಕ್ತಿಯನ್ನು ರಾಮನಗರ ಮೂಲದ ಕಾರು ಚಾಲಕ ಎನ್ನಲಾಗಿದೆ. ಈತ ವಿಮಾನ ನಿಲ್ದಾಣದ ಡ್ರಾಪ್ ಮತ್ತು ಪಿಕ್ಅಪ್ ಪಾಯಿಂಟ್ ಬಳಿ ಕಾರು ನಿಲ್ಲಿಸಿಕೊಂಡು, ಕಾರಿನಲ್ಲೇ ಕುಳಿತು ಬೆಂಕಿ ಹಚ್ಚಿಕೊಂಡಿದ್ದಾನೆ. ಕಾರಿನಿಂದ ದಟ್ಟ ಹೊಗೆ ಹೊರಬರುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.