ಹಣ ಅಕ್ರಮ ವರ್ಗಾವಣೆ; ಇ.ಡಿ ಎದುರು ಹಾಜರಾದ ಕಾರ್ತಿ ಚಿದಂಬರಂ

karthi
Published on

ನವದೆಹಲಿ: 2011ರಲ್ಲಿ ಕೆಲವು ಚೀನಾ ಪ್ರಜೆಗಳಿಗೆ ವೀಸಾ ನೀಡಿದ್ದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಶುಕ್ರವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಪ್ರಕರಣ ಸಂಬಂಧ ಒಂದು ತಿಂಗಳೊಳಗೆ ಕಾರ್ತಿ ಚಿದಂಬರಂ ಅವರು ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ. ಕಾರ್ತಿ ಅವರು 2023ರ ಡಿ.23 ಮತ್ತು ಜ. 2ರಂದು ಇ.ಡಿ ಎದುರು ವಿಚಾರಣೆಗೆ ಹಾಜರಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಲ್ಲಿ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದರು.

ಕಾರ್ತಿಕ್​ ಅವರು ತಮ್ಮ ತಂದೆ ಪಿ.ಚಿದಂಬರಂ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಚೀನಾದ 263 ಪ್ರಜೆಗಳಿಗೆ ವೀಸಾ ನೀಡಲು ಕಿಕ್​ಬ್ಯಾಕ್​ ರೂಪದಲ್ಲಿ 50 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎಂಬ ಆರೋಪವಿದೆ.

ಪಂಜಾಬ್‌ನಲ್ಲಿ ಸ್ಥಾಪನೆಯಾಗಿದ್ದ ‘ವೇದಾಂತ್‌ ಗ್ರೂಪ್‌ ಕಂಪನಿ ತಾಲವಂಡಿ ಸಾಬೋ ಪಾವರ್‌ ಲಿಮಿಟೆಡ್‌’ನ ವಿದ್ಯುತ್‌ ಯೋಜನೆಯೊಂದರಲ್ಲಿ ಚೀನೀಯರು ಕೆಲಸ ಮಾಡಬೇಕಾಗಿತ್ತು. ಅವರ ಪರವಾಗಿ ಕಂಪನಿಯ ಅಧಿಕಾರಿಗಳು ಕಾರ್ತಿಗೆ ಹಣ ಸಂದಾಯ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ತಿ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಒಂದು ತಿಂಗಳೊಳಗೆ ಕಾರ್ತಿ ಚಿದಂಬರಂ ಅವರು ಮೂರನೇ ಬಾರಿಗೆ ದೆಹಲಿಯ ಇಡಿ ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net