ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ 21 ವರ್ಷದ ಥಾಯ್ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ.
ಇದನ್ನೂ ಓದಿ:ಮೋದಿ ಉದ್ಘಾಟಿಸಲಿರುವ ಭಾರತದ ಅತ್ಯಂತ ಉದ್ದದ ಸಮುದ್ರ ಸೇತುವೆ ವೈಶಿಷ್ಟ್ಯಗಳೇನು?
ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ, ಆಫ್ರಿಕಾದ ಅಡಿಸ್ ಅಬಾಬದಿಂದ ಆಗಮಿಸಿದ ಮಹಿಳೆಯನ್ನು ಬಂಧಿಸಿದ್ದಾರೆ.
ಆಕೆಯನ್ನು ಪರೀಕ್ಷೆ ಮಾಡಿದಾಗ ಯಾವುದೇ ಅನುಮಾನ ಬಂದಿರಲಿಲ್ಲ. ಅವರ ಟ್ರಾಲಿ ಬ್ಯಾಗ್ನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಬಿಳಿ ಪುಡಿಯಂತಹ ವಸ್ತು ಹೊಂದಿರುವ ಅನೇಕ ಪ್ಯಾಕೆಟ್ಗಳು ಪತ್ತೆಯಾಗಿವೆ. ನಂತರ ಅದನ್ನು ಪರೀಕ್ಷಿಸಿದಾಗ ಕೊಕೇನ್ ಎಂದು ದೃಢಪಟ್ಟಿದೆ.
ಅಂದಾಜು 40 ಕೋಟಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಹೊಂದಿದೆ ಎಂದು ಕಂದಾಯ ನಿರ್ದೇಶನಾಲಯ ತಿಳಿಸಿದೆ. ಬಂಧಿತ ಮಹಿಳೆಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಚುನಾವಣೆ ಚಾಣಕ್ಯ ಸುನೀಲ್ ಕನುಗೋಲು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಲಭ್ಯ