More

    ಚುನಾವಣೆ ಚಾಣಕ್ಯ ಸುನೀಲ್​ ಕನುಗೋಲು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಲಭ್ಯ

    Election,Chanakya,Sunil,Kanugolu,Lok,Sabha,Elections,Congress

    ನವದೆಹಲಿ: ತಮ್ಮ ತಂತ್ರಗಾರಿಕೆ ಮೂಲಕ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆಲುವಿನ ವ್ಯಾಪಕ ಕೊಡುಗೆ ನೀಡಿದ ಸುನೀಲ್​ ಕನುಗೋಲು ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪ್ರಚಾರ ಕೈಗೊಳ್ಳುವುದಿಲ್ಲ.

    ಕಾಂಗ್ರೆಸ್‌ನ ‘ಟಾಸ್ಕ್ ಫೋರ್ಸ್ 2024’ ರ ಭಾಗವಾಗಿ ಅವರು ಈಗ ಕಾಂಗ್ರೆಸ್​ನ ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಪ್ರಚಾರದ ಮೇಲೆ ಕೇಂದ್ರೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಎರಡು ವರ್ಷಗಳ ಹಿಂದೆ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪಾಳಯದಿಂದ ಹೊರನಡೆದಿದ್ದರು.
    ತದನಂತರ ಕಾಂಗ್ರೆಸ್ ಜತೆ ಕೈಜೋಡಿಸಿ ಕನುಗೋಲು ಅವರು ಎರಡನೇ ಉನ್ನತ ಮಟ್ಟದ ಚುನಾವಣಾ ಮಾಸ್ಟರ್ ಮೈಂಡ್ ಎಂದೇ ಪರಿಣಿತರಾಗಿದ್ದಾರೆ.

    ಕನುಗೋಲು ಅವರು ಈಗಾಗಲೇ ತಮ್ಮ ತಂಡಗಳನ್ನು ಈ ಎರಡೂ ರಾಜ್ಯಗಳಲ್ಲಿ ತಂಡಗಳನ್ನು ನಿಯೋಜಿಸಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
    ಕಳೆದ ವರ್ಷ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕನುಗೋಲು ಅವರ ಚುನಾವಣೆ ತಂತ್ರಗಾರಿಕೆ ನೆರವಿನೊಂದಿಗೆ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಹಾಗೂ ತೆಲಂಗಾಣದಲ್ಲಿ ಬಿ.ಆರ್.ಎಸ್. ವಿರುದ್ಧ ಕಾಂಗ್ರೆಸ್​ ದೊಡ್ಡ ಪ್ರಮಾಣದ ಗೆಲುವು ಗಳಿಸಿದೆ.

    ಕನುಗೋಲು ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ. ಅಲ್ಲಿ ಅವರು ಈಗ ಕ್ಯಾಬಿನೆಟ್ ದರ್ಜೆ ಸ್ಥಾನಮಾನದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಥಮಿಕ ಸಲಹೆಗಾರರಾಗಿದ್ದಾರೆ.

    ಕಳೆದ ವರ್ಷದ ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಪ್ರದರ್ಶನ ನೀಡಿದೆ. ಕನುಗೋಲು ಅವರು ಆ ರಾಜ್ಯಗಳಲ್ಲಿನ ನಾಯಕರೊಂದಿಗೆ ಆರಂಭಿಕ ಮಾತುಕತೆ ನಡೆಸಿದ್ದರು. ಆದರೆ ಅಲ್ಲಿ ನಾಯಕರಾಗಿದ್ದ ಕಮಲ್ ನಾಥ್ ಅಶೋಕ್ ಗೆಹ್ಲೋಟ್, ಕನುಗೋಲು ಅವರ ಬೇಡಿಕೆಗಳನ್ನು ಒಪ್ಪಲಿಲ್ಲ ಎನ್ನಲಾಗಿದೆ.

    ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಆದರೆ, ಕರ್ನಾಟಕ ಮತ್ತು ತೆಲಂಗಾಣದಲ್ಲಿನ ಗೆಲುವುಗಳು ಕಣುಗೋಲು ಅವರಿಗೆ ಪ್ರತಿಯೊಂದರಲ್ಲೂ ತಂತ್ರಗಾರಿಕೆ ಕೈಗೊಳ್ಳಲು ಮುಕ್ತ ಅವಕಾಶ ನೀಡಿದ ಪರಿಣಾಮ ಬಂದಿವೆ ಎಂದು ಮೂಲಗಳು ಹೇಳುತ್ತವೆ.

    ಕಾಂಗ್ರೆಸ್‌ನ ಲೋಕಸಭಾ ಚುನಾವಣಾ ಪ್ರಚಾರದ ಹಿಂದಿನ ಗಣಿತವು ಹೆಚ್ಚು ಜಟಿಲವಾಗಿದೆ. ವಿಶೇಷವಾಗಿ ಇಂಡಿಯಾ ಮೈತ್ರಿಕೂಟದಲ್ಲಿನ ಅನೇಕ ಮಿತ್ರಪಕ್ಷಗಳ ಜತೆಗೆ ಸೀಟುಗಳನ್ನು ಹಂಚಿಕೊಳ್ಳಬೇಕಿದೆ.
    ಕನುಗೋಲು ಅವರು ಇಂಡಿಯಾ ಮಿತ್ರಪಕ್ಷಗಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಗೆ ಡಿಎಂಕೆ ಜತೆ ಅವರು ಕೆಲಸ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪಕ್ಷವು ರಾಜ್ಯದ 39 ಲೋಕಸಭಾ ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿದೆ. ಅವರು ಬಿಜೆಪಿಯೊಂದಿಗೂ ಕೆಲಸ ಮಾಡಿದ್ದಾರೆ. 2014 ರಲ್ಲಿ ಅವರು ಬಿಜೆಪಿಯ ಪ್ರಚಾರ ತಂತ್ರದ ಭಾಗವಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts