ಡಾ.ಕೆ.ಕೃಷ್ಣಮೂರ್ತಿ ನವೋದಯ ಸಂಸ್ಕೃತ ಯುಗದ ಹರಿಕಾರ: ಪ್ರೊ.ಶ್ರೀನಿವಾಸ ವರಖೇಡಿ

SK
Published on

ಬೆಂಗಳೂರು: ಕನ್ನಡ, ಸಂಸ್ಕೃತ ಹಾಗೂ ಇಂಗ್ಲೀಷ್​ ಸಾಹಿತ್ಯದ ಕುರಿತು ಡಾ.ಕೆ.ಕೃಷ್ಣಮೂರ್ತಿ ಅವರು ಹೊಸಬಗೆಯ ವಿದ್ವತ್​ ಪರಂಪರೆಯ ತಳಹದಿ ಹಾಕಿದರು. ನವೋದಯ ಸಂಸ್ಕೃತ ಯುಗದ ಹರಿಕಾರರಾಗಿದ್ದ ಅವರು, ಅಲಂಕಾರ ಶಾಸ್ತ್ರಕ್ಕೆ ಸಿಮಿತವಾಗದೆ ವಿವಿಧ ವಿಷಯಗಳ ಕುರಿತು ಗದ್ಯ-ಪದ್ಯಗಳನ್ನು ರಚಿಸಿರುತ್ತಾರೆ ಎಂದು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಹೇಳಿದ್ದಾರೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಡಾ.ಕೆ.ಕೃಷ್ಣಮೂರ್ತಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ನವದೆಹಲಿಯ ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸೋಮವಾರ ನಗರದ ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ಆಯೋಜಿಸಿದ್ದ 'ಅಲಂಕಾರಶಾಸ್ತ್ರಕ್ಕೆ ಡಾ.ಕೆ.ಕೃಷ್ಣಮೂರ್ತಿ ಅವರ ಕೊಡುಗೆ' ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್​.ಆರ್​.ನಿರಂಜನ ಮಾತನಾಡಿ, ಡಾ.ಕೆ.ಕೃಷ್ಣಮೂರ್ತಿ ಅವರು ಗ್ರಾಮೀಣ ಪ್ರದೇಶದಿಂದ ಬಂದು, ಸಂಸ್ಕೃತ, ಕನ್ನಡ ಹಾಗೂ ಇಂಗ್ಲೀಷ್​ ಸಾಹಿತ್ಯಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ ಎಂದರು.

ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಪ್ರಸಿದ್ಧ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ. ಒಟ್ಟು ಐದು ಅಧಿವೇಶನಗಳಿಂದ ಕೂಡಿರುವ ವಿಚಾರ ಸಂಕಿರಣದಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು,ಅಧ್ಯಾಪಕರು, ವಿವಿಧ ವಿ.ವಿ. ಪ್ರಾಧ್ಯಾಪಕರು ಸಂಶೋಧನ ಲೇಖನವನ್ನು ಮಂಡಿಸಲಿದ್ದಾರೆ.

ಡಾ. ಕೆ.ಕೃಷ್ಣಮೂರ್ತಿ ಸಂಶೋಧನ ಪ್ರತಿಷ್ಠಾನದ ಸಂಸ್ಥಾಪಕ ನಿರ್ದೇಶಕಿ ಡಾ.ಕೆ.ಲೀಲಾ ಪ್ರಕಾಶ್​, ಕರ್ನಾಟಕ ಸಂಸತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್​.ಅಹಲ್ಯಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net