ವಿಧಾನ ಪರಿಷತ್ ಹೈಡ್ರಾಮಾ ಬಗ್ಗೆ ಯಾರು ಏನು ಹೇಳಿದ್ರು

Karnataka Leglislative council
Published on

ಬೆಂಗಳೂರು: ಸಭಾಪತಿ ಪತ್ರಾಪಚಂದ್ರ ಶೆಟ್ಟಿ ಅವರ ವಿರುದ್ಧದ ಅವಿಶ್ವಾಸ ವಿಚಾರ ವಿಧಾನಪರಿಷತ್​ನಲ್ಲಿ ಇಂದು ಹೈಡ್ರಾಮಾಕ್ಕೆ ಕಾರಣವಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಮಾಧುಸ್ವಾಮಿ, ಸಭಾಪತಿ ಸ್ಥಾನದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಸಭಾಪತಿ ಸ್ಥಾನದಲ್ಲಿ ಉಪಸಭಾಪತಿ ಕುಳಿತಾಗ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿಯನ್ನು ಅವರು ಖಂಡಿಸಿದ್ದಾರೆ.

ರಾಜ್ಯಪಾಲರಿಗೆ ಮೊರೆ ಹೋಗುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ. - ಲಕ್ಷ್ಮಣ ಸವದಿ ಡಿಸಿಎಂ ವಿಧಾನ ಪರಿಷತ್ ನಲ್ಲಿ ಗಲಾಟೆಯಾಗಿರುವುದು ಅಪರೂಪ. ಪ್ರಜ್ಞಾವಂತರು, ಹಿರಿಯರು ಇರುವ ಸದನಕ್ಕೆ ಕಳಂಕ ತಂದ ಘಟನೆ. ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಪ್ರಜಾತಂತ್ರ‌ ವಿರೋಧಿ ಕ್ರಮ. ಆರ್​.ಅಶೋಕ್, ಸಚಿವ ಸಿಎಂ ಜತೆ ಚರ್ಚಿಸಿದ ಬಳಿಕ ಮುಂದಿನ ನಡೆಯ ತೀರ್ಮಾನ ತೆಗೆದುಕೊಳ್ಳುತ್ತೇವೆ. - ಗೋವಿಂದ ಕಾರಜೋಳ

ಅವಿಶ್ವಾಸ ಮಂಡನೆ ಅರ್ಜಿ ಹದಿನಾಲ್ಕು ದಿನ ಮುಗಿದು, ನಿಯಮದ ಪ್ರಕಾರ ಐದು ದಿನಗಳೊಳಗೆ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಗೆ ನೀಡಬೇಕಿತ್ತು. ಇವತ್ತು ಐದನೇ ದಿನ. ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯದ ವಿಚಾರ ಇರಲಿಲ್ಲ.‌ ನಾವು ಈ ಬಗ್ಗೆ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಸ್ಪಷ್ಟ ಮಾಹಿತಿ ನೀಡಿದರೂ ಬೇರೆ ವಿಷಯವನ್ನು ಅಜೆಂಡಾದಲ್ಲಿ ಸೇರಿಸಿದ್ದರು.

ಹೀಗಾಗಿ, ಸಭಾಪತಿಯವರಿಗೆ ಆ ಸ್ಥಾನದಲ್ಲಿ ಕೂರುವ ಅವಕಾಶ ಸಿಗುವುದಿಲ್ಲ. ಈ ಕಾರಣಕ್ಕೆ ಉಪ ಸಭಾಪತಿಯವರನ್ನು ಸದನ ನಡೆಸಲು ಕೋರಿದೆವು ಅವರು ಕುಳಿತಾಗ ಕಾಂಗ್ರೆಸ್ ನವರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದು, ಸದನಕ್ಕೆ ಕಪ್ಪು ಚುಕ್ಕೆಯಾಗಿದೆ. ಮುಂದೇನು ಮಾಡಬೇಕೆಂದು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net