More

    ವಿಧಾನಪರಿಷತ್ ಹೈಡ್ರಾಮಾ : ಕೈ-ಕೈ ಮಿಲಾಯಿಸಿದ್ರು, ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿಯನ್ನು ದರ ದರನೆ ಎಳೆದೊಯ್ದರು ಕಾಂಗ್ರೆಸ್​ ಸದಸ್ಯರು

    ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ವಿಧಾನ ಪರಿಷತ್​ನಲ್ಲಿ ಇಂದು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಪರಿಷತ್ ಕಲಾಪವನ್ನು ಶುಕ್ರವಾರ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ದಿಢೀರ್ ಮುಂದೂಡಿದ್ದರು. ಇಂದು ಕಲಾಪ ಆರಂಭವಾಗುತ್ತಲೇ ಗದ್ದಲವನ್ನು ನಿರೀಕ್ಷಿಸಲಾಗಿತ್ತು. ಆದರೆ, ಸಭಾಪತಿಗಳ ಮೇಲಿನ ಅವಿಶ್ವಾಸ ವಿಚಾರ ಹೈಡ್ರಾಮಾಕ್ಕೆ ಕಾರಣವಾಯಿತು. ಪ್ರಜಾತಂತ್ರ ವ್ಯವಸ್ಥೆ, ವಿಧಾನಪರಿಷತ್ತಿನ ಘನತೆ, ಗೌರವಗಳನ್ನು ಸದಸ್ಯರು ಕಡೆಗಣಿಸಿದ್ದು ಕಂಡುಬಂತು.

    ಸಭಾಪತಿ ಅಚ್ಚರಿಯ ನಡೆ

    ಪರಿಷತ್ತಿನೊಳಗೆ ಗೊಂದಲ, ಗದ್ದಲ ಏರ್ಪಟ್ಟಂತೆಯೇ ಸದ್ದಿಲ್ಲದೇ ಪೀಠದ ಬಳಿ ಆಗಮಿಸಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಶುರುವಾಗದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಹೊರನಡೆದರು. ಸಭೆ ಆರ್ಡರ್ ನಲ್ಲಿ ಇಲ್ಲದ ಸಂದರ್ಭದಲ್ಲಿ ಕಲಾಪಕ್ಕೆ ಆಗಮಿಸಿ ಅನಿರ್ದಿಷ್ಟಾವಧಿಗೆ ಮುಂದೂಡಿದ ಸಭಾಪತಿಯವರ ಕ್ರಮದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.

    ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿಧಾನಪರಿಷತ್​ ಪೀಠಕ್ಕೆ ಆಗಮಿಸುವುದಕ್ಕೂ ಮೊದಲೇ ಉಪಸಭಾಪತಿ ಜೆಡಿಎಸ್​ನ ಧರ್ಮೇಗೌಡರನ್ನು ಆಡಳಿತ ಪಕ್ಷದವರು ಕೂರಿಸಿ ಕಲಾಪ ಆರಂಭಿಸಲು ಮುಂದಾಗಿದ್ದರು. ಅಲ್ಲದೆ, ಸಭಾಪತಿಯವರು ಪರಿಷತ್​ನ ಒಳಕ್ಕೆ ಬಾರದಂತೆ ಆಡಳಿತ ಪಕ್ಷದವರು ಬಾಗಿಲು ಹಾಕಿದ ಘಟನೆಯೂ ನಡೆಯಿತು. ಇನ್ನೊಂದೆಡೆ ಬಾಗಿಲು ಮುರಿದು ಸಭಾಪತಿಯವರನ್ನು ಒಳಕ್ಕೆ ಕರೆಯಿಸಲು ಕಾಂಗ್ರೆಸ್ ಸದಸ್ಯರು ಪ್ರಯತ್ನಿಸಿದ್ದೂ ಆಯಿತು.

    ಇದನ್ನೂ ಓದಿ: ಪರಿಷತ್ ಸಭಾಪತಿಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ

    ಈ ನಡುವೆ, ಸಭಾಪತಿ ಸ್ಥಾನದಲ್ಲಿ ಕುಳಿತ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಹಿಡಿದೆಳೆದು ಪೀಠದಿಂದ ಕಳಕ್ಕಿಳಿಸಿದ್ದು, ಸಭಾಪತಿ ಸ್ಥಾನದಲ್ಲಿ ಅಳವಡಿಸಲಾಗಿದ್ದ ಗಾಜಿನ ತಡೆಯನ್ನು ಕಿತ್ತೆಸೆದರು. ತಡೆಯಲು ಬಂದ ಮಾರ್ಷಲ್​ಗಳ ಮೇಲೂ ಸದಸ್ಯರು ಹಲ್ಲೆ ನಡೆಸಿದ್ದು ಕಂಡುಬಂತು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ದಿಕ್ಕಾರ ಘೋಷಣೆ ಕೂಗಿಕೊಂಡರು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಬಿಜೆಪಿಗೆ ಇಕ್ಕಟ್ಟು ತಂದ ಸಭಾಪತಿ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts