More

    ಪರಿಷತ್ ಸಭಾಪತಿಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ

    ಬೆಂಗಳೂರು: ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್ ಜತೆ ಬಿಜೆಪಿ ಹೆಜ್ಜೆಹಾಕಲು ಆರಂಭಿಸಿದೆ. ಈ ಪರಿಣಾಮ ವಿಧಾನಪರಿಷತ್ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ ಕೆಳಗಿಳಿಸುವ ಪ್ರಕ್ರಿಯೆ ಶುರುವಾಗಿದೆ. ಡಿ.7ರಿಂದ ಆರಂಭವಾಗಲಿರುವ ಅಧಿವೇಶನ ದಲ್ಲಿ ಪ್ರತಾಪ್​ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಪರಿಷತ್ ಕಾರ್ಯದರ್ಶಿಗೆ ಬಿಜೆಪಿ ನೋಟಿಸ್ ನೀಡಿದೆ.

    ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ ಬಗ್ಗೆ ಸದಸ್ಯರಲ್ಲಿ ವಿಶ್ವಾಸವಿಲ್ಲ. ಅವರು ಸದನದಲ್ಲಿ ನಿಷ್ಪಕ್ಷವಾಗಿ ವರ್ತಿಸದೆ ಕಾಂಗ್ರೆಸ್ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಿದೆ. ಶಾಸಕಾಂಗ ಕರ್ತವ್ಯ ನಿರ್ವಹಣೆಯಲ್ಲಿ ಪಕ್ಷಪಾತಿಯಾಗಿ ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ನೋಟಿಸ್​ನಲ್ಲಿ ಬಿಜೆಪಿ ಪ್ರಸ್ತಾಪಿಸಿದೆ. ಕಳೆದ ಅಧಿವೇಶನ ಸಂದರ್ಭದಲ್ಲಿ ಎರಡು ಮಸೂದೆಗಳ ಮಂಡನೆಗೆ ಸಭಾಪತಿ ಅವಕಾಶ ನೀಡಲಿಲ್ಲ. ಏಕಾಏಕಿ ಅನಿರ್ದಿಷ್ಟ ಕಾಲ ಸದನವನ್ನು ಮುಂದೂಡಿದರು. ಈ ರೀತಿ ರಾಜ್ಯಸಭೆಯಲ್ಲೂ ನಡೆಯು ವುದಿಲ್ಲ ಎಂಬುದು ಬಿಜೆಪಿಯ ಅಸಮಾಧಾನ ಆಗಿದೆ.

    75 ಸದಸ್ಯ ಬಲದ ಪರಿಷತ್​ನಲ್ಲಿ ಬಿಜೆಪಿಗೆ ಬಹುಮತಕ್ಕೆ 6 ಸ್ಥಾನಗಳ ಕೊರತೆ ಇದೆ. ಸದ್ಯ ಬಿಜೆಪಿ 31, ಕಾಂಗ್ರೆಸ್ 28 ಮತ್ತು ಜೆಡಿಎಸ್ 14 ಸದಸ್ಯರ ಬಲ ಹೊಂದಿವೆ. ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಜೆಡಿಎಸ್ ಬೆಂಬಲ ಯಾಚಿಸಲು ಬಿಜೆಪಿ ನಿರ್ಧರಿಸಿದೆ. ಒಂದು ವೇಳೆ ಮತದಾನ ನಡೆದರೆ, ಬಿಜೆಪಿಗೆ ಇತರ ಪಕ್ಷಗಳ 7 ಸದಸ್ಯರ ಬೆಂಬಲ ಬೇಕಾಗುತ್ತದೆ.

    ಯಾರು ಹೊಸ ಸಭಾಪತಿ?

    ಒಂದೊಮ್ಮೆ ಅವಿಶ್ವಾಸ ಮಂಡನೆಗೆ ಮುನ್ನವೇ ಪ್ರತಾಪ್​ಚಂದ್ರ ಶೆಟ್ಟಿ ರಾಜೀನಾಮೆ ಕೊಟ್ಟರೆ ಅಥವಾ ಚುನಾವಣೆ ನಡೆದು ಬಿಜೆಪಿ-ಜೆಡಿಎಸ್ ಮೇಲುಗೈ ಸಾಧಿಸಿದರೆ ಯಾರು ಸಭಾಪತಿಯಾಗುತ್ತಾರೆಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಬಿಜೆಪಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೆಸರು ಮುನ್ನೆಲೆಯಲ್ಲಿದೆ. ಅವರನ್ನು ಸಂಪುಟದಿಂದ ಕೈಬಿಟ್ಟರೆ ಸಂಪುಟ ಪೈಪೋಟಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ. ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಾಗದಿದ್ದರೆ ಸಭಾಪತಿ ಸ್ಥಾನ ಕೊಡಬಹುದು, ಹಿರಿತನವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts