'ಅವರು ಪೀಠದಲ್ಲಿ ಕೂರಿಸಿದ್ರು, ಇವರು ಪೀಠದಿಂದ ಎಳೆದೊಯ್ದರು-ನಾನೇನು ಮಾಡಲಿ?'

S L dharme gowda
Published on

ಬೆಂಗಳೂರು: ಸಭಾಪತಿ ಸ್ಥಾನದಲ್ಲಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಅವರನ್ನು ಹೊರಗಿಟ್ಟು ವಿಧಾನಪರಿಷತ್ ಕಲಾಪ ನಡೆಸಲು ಮುಂದಾಗಿದ್ದರು. ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್​ ಸದಸ್ಯರು ಇದಕ್ಕೆ ಪ್ರತಿರೋಧ ತೋರಿ ಕೈ-ಕೈ ಮಿಲಾಯಿಸಿದ ಕಾರಣ ಪರಿಷತ್ತಿನ ಇತಿಹಾಸದಲ್ಲಿ ಕಪ್ಪುಚುಕ್ಕೆಯೊಂದು ದಾಖಲಾಯಿತು.

ಉಪಸಭಾಪತಿಯಾಗಿರುವ ಜೆಡಿಎಸ್​ನ ಎಸ್​.ಎಲ್.ಧರ್ಮೇಗೌಡ ಅವರನ್ನು ಸಭಾಪತಿ ಸ್ಥಾನದಲ್ಲಿ ಕುಳ್ಳಿರಿಸಿದ ಆಡಳಿತ ಪಕ್ಷದ ಸದಸ್ಯರು ಕಲಾಪ ಶುರುಮಾಡುವಂತೆ ಆಗ್ರಹಿಸಿದರು. ಇದೇ ವೇಳೆ, ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದತ್ತ ನುಗ್ಗಿ ಧರ್ಮೇಗೌಡರನ್ನು ಸಭಾಪತಿ ಸ್ಥಾನದಿಂದ ಎಬ್ಬಿಸಿ ಹಿಡಿದೆಳೆದುಕೊಂಡು ಅಲ್ಲಿಂದ ಕೆಳಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಕೈ - ಕೈ ಮಿಲಾಯಿಸಿ ಘಟನೆಯೂ ನಡೆಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪಸಭಾಪತಿ ಧರ್ಮೇಗೌಡರು ಅಸಹಾಯಕರಾಗಿ ಹೇಳಿದ್ದಿಷ್ಟು - ಒಬ್ಬರು ಪೀಠದಲ್ಲಿ ತಂದು ಕೂರಿಸಿದರು. ಮತ್ತೊಬ್ಬರು ಪೀಠದಿಂದ ಎಳೆದೊಯ್ದರು. ನಾನೊಬ್ಬನೇ ಇರುವುದರಿಂದ ಏನು ಮಾಡುವುದು?

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net