ಬಿಯರ್​ ಪ್ರಿಯರಿಗೊಂದು ಕಹಿ ಸುದ್ದಿ… ಕರ್ನಾಟಕದಲ್ಲಿ ನ್ಯೂ ಇಯರ್​ ಸಂದರ್ಭ ಪಾನೀಯದ ಕೊರತೆ!

beer
Published on

ಬೆಂಗಳೂರು: ಹೊಸ ವರ್ಷ 2024 ಸಮೀಪಿಸುತ್ತಿದೆ. ನೂತನ ವರ್ಷ ಸ್ವಾಗತಕ್ಕೆ, ಸಂಭ್ರಮಾಚರಣೆಗೆ ತಯಾರಿಯೂ ನಡೆಯುತ್ತಿದೆ. ನ್ಯೂ ಇಯರ್ ಪಾರ್ಟಿ ಹೇಗೆ ಮಾಡಬೇಕೆಂದು ಪ್ಲ್ಯಾನ್​ ಮಾಡಲಾಗುತ್ತಿದೆ. ಪಾನೀಯಪ್ರಿಯರಂತೂ ವಿಸ್ಕಿ ಕುಡಿಯಬೇಕೋ, ಬಿಯರ್ ಕುಡಿಯಬೇಕೋ ಎಂದು ಲೆಕ್ಕ ಹಾಕುತ್ತಿರುತ್ತಾರೆ. ಬಿಯರ್​ ಪ್ರಿಯರಿಗೊಂದು ಇಲ್ಲೊಂದು ಕಹಿ ಸುದ್ದಿ ಇದೆ. ಹೊಸ ವರ್ಷಕ್ಕೆ ಮುನ್ನ ಕರ್ನಾಟಕವು ಬಿಯರ್ ಕೊರತೆಯನ್ನು ಎದುರಿಸುತ್ತಿದೆ,

ಹೊಸ ವರ್ಷಾಚರಣೆಗಾಗಿ ರಾಜ್ಯಾದ್ಯಂತ ಬಿಯರ್‌ಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ನಾಲ್ಕು ಪ್ರಮುಖ ಬಿಯರ್ ಉತ್ಪಾದನಾ ಕಂಪನಿಗಳಲ್ಲಿ ಒಂದು ಪಾಳಿಯಲ್ಲಿ ಉತ್ಪಾದನೆ ಸ್ಥಗಿತಗೊಳಿಸುವಂತೆ ಅಬಕಾರಿ ಇಲಾಖೆ ಆದೇಶಿಸಿದೆ.

ಒಂದೆಡೆ, ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸಲು ಸರ್ಕಾರವು ಹೆಚ್ಚಿನ ಆದಾಯಕ್ಕಾಗಿ ಒತ್ತಾಯಿಸುತ್ತಿದೆ. ಮತ್ತೊಂದೆಡೆ ಅಬಕಾರಿ ಇಲಾಖೆಯು ಸಿಬ್ಬಂದಿ ಕೊರತೆ ಕಾರಣಕ್ಕಾಗಿ ಬಿಯರ್ ಉತ್ಪಾದನೆ ಸ್ಥಗಿತಗೊಳಿಸಲು ಆದೇಶಿಸಿದೆ.

ಹೊಸ ವರ್ಷದ ಸಂದರ್ಭದಲ್ಲಿ ಬಿಯರ್ ಕೊರತೆ ಮಾತ್ರವಲ್ಲದೆ, ಸರ್ಕಾರದ ಕೋಟ್ಯಂತರ ಆದಾಯಕ್ಕೆ ಇದರಿಂದ ಹೊಡೆತ ಬೀಳುತ್ತದೆ ಎಂದು ಮದ್ಯ ಮಾರಾಟಗಾರರು ಮತ್ತು ಬಿಯರ್ ತಯಾರಕರು ಎಚ್ಚರಿಸಿದ್ದಾರೆ.

ನಂಜನಗೂಡು ತಾಲೂಕಿನಲ್ಲಿ ಯುನೈಟೆಡ್ ಬ್ರೂವರೀಸ್, ಕಾರ್ಲ್ಸ್‌ಬರ್ಗ್ ಇಂಡಿಯಾ ಪ್ರೈ. ಲಿಮಿಟೆಡ್​, B9 ಬ್ರೂವರೀಸ್ ಪ್ರೈ. ಲಿಮಿಟೆಡ್​ ಹಾಗೂ ತಿ.ನರಸೀಪುರ ತಾಲೂಕಿನಲ್ಲಿ ಬೆವ್ ಇಂಡಿಯಾ ಲಿಮಿಟೆಡ್‌ನಲ್ಲಿರುವ ಅನ್ಹೆಸೂರ್ ಬುಸಾಚ್ ಘಟಕಗಳಿಗೆ ಒಂದು ಪಾಳಿಯಲ್ಲಿ ಬಿಯರ್ ಉತ್ಪಾದನೆ ನಿಲ್ಲಿಸಲು ಆದೇಶಿಸಲಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ, ಮಾನವ ಸಂಪನ್ಮೂಲ, ಉತ್ತಮ ಹವಾಮಾನ ಮತ್ತಿತರ ಕಾರಣಗಳಿಂದಾಗಿ ಕಿಂಗ್‌ಫಿಶರ್ ಮತ್ತು ಬಡ್‌ವೈಸರ್ ಸೇರಿದಂತೆ ಅನೇಕ ಬಿಯರ್-ಉತ್ಪಾದಿಸುವ ಕಂಪನಿಗಳು ಮೈಸೂರು ಜಿಲ್ಲೆಯಲ್ಲಿ ಉತ್ಪಾದನೆ ಘಟಕಗಳನ್ನು ಸ್ಥಾಪಿಸಿವೆ. ಇವು ರಾಜ್ಯದಲ್ಲಿ ಬಿಯರ್ ಬೇಡಿಕೆ ಪೂರೈಸುವುದಲ್ಲದೆ; ಇತರ ರಾಜ್ಯಗಳಿಗೂ ಸರಬರಾಜು ಮಾಡುತ್ತವೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ್ತು ಹೊರ ರಾಜ್ಯಗಳಿಂದ ಬಿಯರ್‌ಗೆ ಸಾಕಷ್ಟು ಬೇಡಿಕೆ ಇದ್ದು, ಈಗ ಕೊರತೆಯಾಗುವ ಸ್ಥಿತಿ ತಲೆದೋರಿದೆ.

ಕರ್ನಾಟಕದಲ್ಲಿ ಬಿಯರ್ ಮಾರಾಟ

2023 ಸೆಪ್ಟೆಂಬರ್ 31.27 ಲಕ್ಷ ಕೇಸ್​2023 ಅಕ್ಟೋಬರ್ 36.28 ಲಕ್ಷ ಕೇಸ್​2023 ನವೆಂಬರ್. 35 ಲಕ್ಷ ಕೇಸ್2023 ಡಿಸೆಂಬರ್ (ನಿರೀಕ್ಷಿತ) 45 ಲಕ್ಷ ಕೇಸ್​(ಗಮನಿಸಿ: 1 ಕೇಸ್​ನಲ್ಲಿ 12 ಬಾಟಲಿ ಇರುತ್ತವೆ. ಪ್ರತಿ ಬಾಟಲಿಯಲ್ಲಿ 650 ಎಂ.ಎಲ್​)

f

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net