More

    ನೀರು ಕುಡಿಯುವಾಗ ಜೇನು ನೊಣ ದೇಹದೊಳಕ್ಕೆ ಸೇರಿತು… ಮುಂದೆ ಸಂಭವಿಸಿದ್ದು ದುರಂತ…

    ಭೋಪಾಲ್: ಜೇನು ರುಚಿ ಅದ್ಭುತ. ಇಂತಹ ಸ್ವಾದಿಷ್ಟ ಸಿಹಿ ತಯಾರಿಸುವ ಜೇನು ನೊಣ ಕಚ್ಚಿದರೆ ಗಾಯ ಖಚಿತ. ಆದರೆ, ಆಕಸ್ಮಿಕವಾಗಿ ಜೇನು ನೊಣವನ್ನು ನುಂಗಿದ ವ್ಯಕ್ತಿಯೊಬ್ಬರು ಇಹಲೋಕವನ್ನೇ ತ್ಯಜಿಸಿದ್ದಾರೆ.

    ಈ ದುರ್ಘಟನೆ ಜರುಗಿದ್ದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ. ಇಲ್ಲಿನ 22 ವರ್ಷದ ವ್ಯಕ್ತಿಯೊಬ್ಬರು ನೀರು ಕುಡಿಯುವಾಗ ಆಕಸ್ಮಿಕವಾಗಿ ಜೇನುನೊಣವನ್ನು ನುಂಗಿದ್ದಾರೆ. ಅವರ ನಾಲಿಗೆ ಮತ್ತು ಆಹಾರದ ಕೊಳವೆಗೆ ಈ ಕೀಟವು ಕಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

    ಜಿಲ್ಲಾ ಕೇಂದ್ರದಿಂದ ಅಂದಾಜು 40 ಕಿ.ಮೀ ದೂರದಲ್ಲಿರುವ ಬೆರಾಸಿಯಾ ಪ್ರದೇಶದಲ್ಲಿ ಬುಧವಾರ ರಾತ್ರಿ ಕೂಲಿ ಕಾರ್ಮಿಕ ಹಿರೇಂದ್ರ ಸಿಂಗ್ ತಮ್ಮ ಮನೆಯಲ್ಲಿ ಒಂದು ಲೋಟ ನೀರು ಕುಡಿಯುವಾಗ ಆಕಸ್ಮಿಕವಾಗಿ ಕೀಟವನ್ನು ನುಂಗಿದ್ದು ಸಾವಿನಲ್ಲಿ ಪರ್ಯಾವಸನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಹಾರ ಪೈಪ್ ಉರಿತದ ಕಾರಣ ಸಿಂಗ್ ಅವರಿಗೆ ಉಸಿರಾಟದ ತೊಂದರೆ ಮತ್ತು ಅಸ್ವಸ್ಥತೆ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆ ಕರೆತರಲಾಗಿದೆ. ಅವರ ಸ್ಥಿತಿ ಸುಧಾರಿಸದ ಕಾರಣ, ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಚಿಕಿತ್ಸೆ ವೇಳೆ ಸತ್ತ ಜೇನುನೊಣವನ್ನು ಸಿಂಗ್ ವಾಂತಿ ಮಾಡಿದ್ದರು. ಆಸ್ಪತ್ರೆಯಲ್ಲಿ ಅವರು ಗುರುವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾಸ್​ಪೋರ್ಟ್​ ವೆರಿಫಿಕೇಶನ್​ಗಾಗಿ ಸ್ಟೇಶನ್​ಗೆ ತೆರಳಿದ ಮಹಿಳೆ ಮೇಲೆ ಪೊಲೀಸರು ಗುಂಡು ಹಾರಿಸಿದ್ದೇಕೆ?: ಕ್ಯಾಮರಾದಲ್ಲಿ ನಿಜಾಂಶ ಸೆರೆ…

    ಕೆನಾಡದ 4 ಆಸ್ತಿಗಳಿಂದಲೇ ತಿಂಗಳಿಗೆ 11 ಲಕ್ಷ ಆದಾಯ: ಹೀಗಿದೆ ಭಾರತೀಯ ಮೂಲದ ವ್ಯಕ್ತಿಯ ಲೆಕ್ಕಾಚಾರ

    ರಪೋ ದರ ಯಥಾಸ್ಥಿತಿ ನಿರ್ಧಾರ: 21 ಸಾವಿರ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ನಿಫ್ಟಿ ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts