More

    ಗ್ರಾಪಂಗೆ ಬೀಗ ಹಾಕಿ ಆಕ್ರೋಶ

    ಕವಿತಾಳ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪಾಮನಕಲ್ಲೂರಿನ ದುರ್ಗಾದೇವಿ ಗುಡಿ ಹತ್ತಿರದ ಎಸ್ಸಿ ಕಾಲನಿಯ ಮಹಿಳೆಯರು ಖಾಲಿ ಕೊಡ ಹಿಡಿದುಕೊಂಡು ಶನಿವಾರ ಗ್ರಾಪಂಗೆ ಮುತ್ತಿಗೆ ಹಾಕಿದರು.

    ಪಂಚಾಯಿತಿಯಲ್ಲಿ ಅಧಿಕಾರಿಗಳು ಇಲ್ಲದಿರುವುದನ್ನು ಕಂಡ ಮಹಿಳೆಯರು ಸಿಟ್ಟಿಗೆದ್ದು ಕಚೇರಿಗೆ ಬೀಗ ಹಾಗೂ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾಪಂ ಸದಸ್ಯರು ಪಿಡಿಒಗೆ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸಿಲ್ಲ. ನವಜೀವನ ಒಕ್ಕೂಟದ ಶಾಂಭವಿ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಕುಡಿಯುವ ನೀರಿನ ತೊಂದರೆಯಿದ್ದು, ನಾಲ್ಕು ತಿಂಗಳಿಂದ ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂಗೆ ಕೀಲಿ ಹಾಗೂ ಬೇಲಿ ಹಾಕಿದ್ದೇವೆ ಎಂದರು.

    ನೀರಿನ ಸಮಸ್ಯೆ ಬಗೆಹರಿಯುವ ತನಕ ಗ್ರಾಪಂಗೆ ಹಾಕಿರುವ ಕೀಲಿಯನ್ನು ತೆಗೆಯಲು ಅವಕಾಶ ನೀಡುವುದಿಲ್ಲ. ಗ್ರಾಪಂನಲ್ಲಿ ಏ.14ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಬರುವ ಅಧಿಕಾರಿಗಳು ಹಾಗೂ ಪ್ರಮುಖರಿಗೆ ಸಮಸ್ಯೆಯ ಮಾಹಿತಿ ನೀಡುತ್ತೇವೆ. ಸಮಸ್ಯೆ ಬಗೆಹರಿಸಿ ಕೀಲಿ ತೆಗೆಯಲಿ ಎಂದು ಶಾಂಭವಿ ತಿಳಿಸಿದರು. ದುರುಗಮ್ಮ, ನೀಲಮ್ಮ, ಗಂಗಮ್ಮ, ದೇವಮ್ಮ, ಲಕ್ಷ್ಮೀ, ಮಲ್ಲಮ್ಮ, ಪಾರ್ವತಮ್ಮ, ಸಿದ್ದಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts