More

    ರಪೋ ದರ ಯಥಾಸ್ಥಿತಿ ನಿರ್ಧಾರ: 21 ಸಾವಿರ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ನಿಫ್ಟಿ ಸೂಚ್ಯಂಕ

    ನವದೆಹಲಿ: ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇಕಡಾ 6.5ರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಪ್ರಕಟಿಸಿದ ತಕ್ಷಣವೇ ಎನ್​ಎಸ್​ಇ ನಿಫ್ಟಿ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ 21,006.10 ಕ್ಕೆ ಏರಿತು.

    ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿರುವುದು ಮಾತ್ರವಲ್ಲದೆ ಮೊದಲ ಬಾರಿಗೆ 21,000 ಗಡಿ ದಾಟಿರುವುದರಿಂದ ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರಿಗೆ ಶುಕ್ರವಾರ ಶುಭ ದಿನವಾಗಿ ಪರಿಣಮಿಸಿತು.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇಕಡಾ 6.5ರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ ಎಂದು ಘೋಷಿಸಿದ ಕೂಡಲೇ 50-ಷೇರು ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ 21,006.10 ಕ್ಕೆ ಏರಿತು. ಬಲವಾದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ನಿರೀಕ್ಷೆ ಕೂಡ ಸೂಚ್ಯಂಕ ಏರಿಕೆಗೆ ಕಾರಣವಾಯಿತು.

    ನಿಫ್ಟಿ 50 ಮಾತ್ರವಲ್ಲದೆ, ಎಸ್ & ಪಿ ಬಿಎಸ್‌ಇ ಸೂಚ್ಯಂಕ ಕೂಡ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿ 69,888.33 ತಲುಪಿದೆ. ಬೆಳಗ್ಗೆ 10:38 ರ ಹೊತ್ತಿಗೆ, ನಿಫ್ಟಿ ಸೂಚ್ಯಂಕವು 21,000 ಕ್ಕಿಂತ ಸ್ವಲ್ಪ ಕೆಳಗೆ ಕುಸಿದು 20,987 ನಲ್ಲಿ ವಹಿವಾಟು ನಡೆಸಿದರೆ, ಬಿಎಸ್​ಇ ಸೂಚ್ಯಂಕ 69,814.27 ನಲ್ಲಿ ವಹಿವಾಟು ನಡೆಸಿತು.

    ಆರ್‌ಬಿಐ ಎಂಪಿಸಿಯ ನಿರ್ಧಾರವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕೆ ಅನುಗುಣವಾಗಿಯೇ ಇದೆ. ಆದರೆ, ಕೇಂದ್ರ ಬ್ಯಾಂಕ್ ಗವರ್ನರ್ ಅವರ ಹಣಕಾಸು ನೀತಿ ಪ್ರಕಟಣೆಯಲ್ಲಿ ಇದನ್ನು ಅಧಿಕೃತವಾಗಿ ಹೇಳಿದ್ದು ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸಿತು.

    ಪ್ರಸ್ತುತ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ, ಭಾರತೀಯ ಆರ್ಥಿಕತೆಯು “ಸ್ಥಿತಿಸ್ಥಾಪಕತ್ವದ ಚಿತ್ರವನ್ನು ಪ್ರಸ್ತುತಪಡಿಸುವುದನ್ನು” ಮುಂದುವರಿಸಿದೆ ಎಂದು ಗವರ್ನರ್ ದಾಸ್ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.

    2023-24ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು 7.6 ರಷ್ಟು ಆಗಿದೆ. ಇದು “ಎಲ್ಲಾ ಮುನ್ಸೂಚನೆಗಳನ್ನು ಮೀರಿದೆ” ಎಂದು ಅವರು ಹೇಳಿದರು.

    ಬ್ಯಾಂಕ್‌ಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಆರೋಗ್ಯಕರ ಬ್ಯಾಲೆನ್ಸ್ ಶೀಟ್‌ಗಳನ್ನು ಹೊಂದಿರುವುದು, ಉತ್ತಮ ಹಣಕಾಸಿನ ಬಲವರ್ಧನೆ, ನಿರ್ವಹಿಸಬಹುದಾದ ಬಾಹ್ಯ ಸಮತೋಲನ ಮತ್ತು ದೃಢವಾದ ವಿದೇಶೀ ವಿನಿಮಯ ಮೀಸಲುಗಳು ಮುಂತಾದ ಅಂಶಗಳೊಂದಿಗೆ ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ದೃಢವಾಗಿ ಉಳಿದಿವೆ ಎಂದು ದಾಸ್ ಹೇಳಿದರು.

    “ಈ ಅಂಶಗಳು, ಗ್ರಾಹಕ ಮತ್ತು ವ್ಯಾಪಾರದ ಆಶಾವಾದದೊಂದಿಗೆ ಸೇರಿಕೊಂಡು ಭಾರತೀಯ ಆರ್ಥಿಕತೆಯ ನಿರಂತರ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ” ಎಂದು ದಾಸ್ ಹೇಳಿದರು.

    ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧಾರ: ಸಾಲ ಪಡೆದುಕೊಂಡವರಿಗೆ ಒಂದಿಷ್ಟು ನಿರಾಳತೆ

    ಭಾರತದ ಆರ್ಥಿಕತೆ ಪ್ರಕಾಶನಮಾನ: ನೀವು ಲಾಭ ಪಡೆಯಲು ಇಲ್ಲಿದೆ ಯಶೋಮಾರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts