More

    ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧಾರ: ಸಾಲ ಪಡೆದುಕೊಂಡವರಿಗೆ ಒಂದಿಷ್ಟು ನಿರಾಳತೆ

    ಆರ್‌ಬಿಐನ ದ್ವೈವಾರ್ಷಿಕ ಹಣಕಾಸು ನೀತಿ ಪ್ರಕಟಣೆಯ ಮುಖ್ಯಾಂಶಗಳು

    * ಶೇಕಡಾ 6.5ರಲ್ಲಿ ಆರ್‌ಬಿಐ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಕೆ
    * ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.5ರಿಂದ 7ಕ್ಕೆ ಹೆಚ್ಚಳ
    * ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಲು ಯುಪಿಯ ವಹಿವಾಟು ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ಪ್ರಸ್ತಾಪ.
    * 2023-24 ಕ್ಕೆ ಸರಾಸರಿ ಚಿಲ್ಲರೆ ಹಣದುಬ್ಬರ ಮುನ್ಸೂಚನೆ ಶೇಕಡಾ 5.4 ರಲ್ಲಿ ಮುಂದುವರಿಕೆ.
    * ಹಣದುಬ್ಬರದ ದೃಷ್ಟಿಕೋನವು ಅನಿಶ್ಚಿತ ಆಹಾರ ಬೆಲೆಗಳಿಂದ ಗಣನೀಯವಾಗಿ ಪ್ರಭಾವಿತ
    * ಮಧ್ಯಂತರ ತರಕಾರಿ ಬೆಲೆ ಆಘಾತಗಳು ಮತ್ತೊಮ್ಮೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮುಖ್ಯ ಹಣದುಬ್ಬರವನ್ನು ಹೆಚ್ಚಿಸಬಹುದು.
    * 2023 ರಲ್ಲಿ ಉದಯೋನ್ಮುಖ ಮಾರುಕಟ್ಟೆಯ ಸ್ನೇಹಿತರಿಗೆ ಹೋಲಿಸಿದರೆ ರೂಪಾಯಿಯು ಕಡಿಮೆ ಚಂಚಲತೆಯನ್ನು ಪ್ರದರ್ಶಿಸಿತು.
    * ವಿದೇಶೀ ವಿನಿಮಯ ಮೀಸಲುಗಳು ಡಿಸೆಂಬರ್ 1 ಕ್ಕೆ 604 ಶತಕೋಟಿ ಡಾಲರ್, ಬಾಹ್ಯ ಹಣಕಾಸು ಅಗತ್ಯತೆಗಳನ್ನು ಆರಾಮದಾಯಕವಾಗಿ ಪೂರೈಸುವ ವಿಶ್ವಾಸ.
    * ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತವು ಆರ್ಥಿಕ ಅನಿಶ್ಚಿತತೆ ತಡೆದುಕೊಳ್ಳುವಲ್ಲಿ ಉತ್ತಮ ಸ್ಥಾನದಲ್ಲಿದೆ
    * ರೆಕರಿಂಗ್​ ಪಾವತಿಗಳಿಗೆ ಇ-ಮ್ಯಾಂಡೇಟ್ ಅನ್ನು ಪ್ರಸ್ತುತ ರೂ 15,000 ದಿಂದ ರೂ 1 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪ.
    * ಡೇಟಾ ಭದ್ರತೆ, ಗೌಪ್ಯತೆಯನ್ನು ಹೆಚ್ಚಿಸಲು ಆರ್‌ಬಿಐ ಹಣಕಾಸು ವಲಯಕ್ಕೆ ಕ್ಲೌಡ್ ಸೌಲಭ್ಯವನ್ನು ಸ್ಥಾಪಿಸಲು ಸಜ್ಜು.
    *2024ರ ಫೆಬ್ರವರಿ 6-8 ರಲ್ಲಿ ಮುಂದಿನ ಹಣಕಾಸು ನೀತಿ ಸಮಿತಿ ಸಭೆ.

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (ಆರ್​ಬಿಐ ಎಂಪಿಸಿ) ಶುಕ್ರವಾರ ಸತತ ಐದನೇ ಬಾರಿಗೆ ರೆಪೊ ದರವನ್ನು ಶೇ 6.5ರಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಹೀಗಾಗಿ, ಸಾಲ ಪಡೆದುಕೊಂಡವರು ಒಂದಿಷ್ಟು ನಿರಾಳರಾಗಹುದಾಗಿದೆ. ಈ ನಿರ್ಧಾರದಿಂದಾಗಿ, ಗೃಹ, ಕಟ್ಟಡ, ವಾಹನ ಸೇರಿದಂತೆ ಬಹುತೇಕ ಸಾಲದ ಮೇಲಿನ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

    ಆರ್​ಬಿಐ ಹಣಕಾಸು ನೀತಿ ಸಮಿತಿಯು ತನ್ನ ದ್ವೈ-ವಾರ್ಷಿಕ ನೀತಿ ಪ್ರಕಟಣೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ಕೈಗೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

    ಕಳೆದ ಏಪ್ರಿಲ್‌ನಿಂದ ರೆಪೊ ದರವನ್ನು ಆರ್​ಬಿಐ ಯಥಾಸ್ಥಿತಿಯಲ್ಲಿ ಇರಿಸಿದೆ. ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2022ರ ಮೇ ಮತ್ತು 2023ರ ಫೆಬ್ರವರಿ ಅವಧಿಯ ನಡುವೆ ಒಟ್ಟು 250 ಅಂಕಗಳಷ್ಟು ರೆಪೊ ದರವನ್ನು ಹೆಚ್ಚಿಸಿತ್ತು. ಅಂದರೆ, ಶೇಕಡಾ 2.5 ಬಡ್ಡಿ ದರವನ್ನು ಹೆಚ್ಚಿಸಿತ್ತು.

    ಜಿಡಿಪಿ ವೃದ್ಧಿ ಸಂಭಾವ್ಯ 7:

    ಶಕ್ತಿಕಾಂತ ದಾಸ್ ಅವರು 2023-24ನೇ ಸಾಲಿನ ಬೆಳವಣಿಗೆಯ ಸಂಭವನೀಯತೆಯನ್ನು ಶೇಕಡಾ 7ಕ್ಕೆ ಹೆಚ್ಚಿಸುವ ಮೂಲಕ ಮಾರುಕಟ್ಟೆಯನ್ನು ಅಚ್ಚರಿಗೊಳಿಸಿದ್ದಾರೆ. ಅಂದರೆ, ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) ವೃದ್ಧಿ ದರವು ಶೇಕಡಾ 7ರಷ್ಟು ಆಗಲಿದೆ ಎಂದು ಅವರು ಅಂದಾಜಿಸಿದ್ದಾರೆ. ಬೆಳವಣಿಗೆ ಮತ್ತು ಹಣದುಬ್ಬರ ನಿಯಂತ್ರಣಸುವಲ್ಲಿ ಆರ್‌ಬಿಐನ ಕ್ರಮಗಳ ಬಗ್ಗೆ ದಾಸ್​ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ದಾಸ್ ಅವರು 2023-24 ಹಣಕಾಸು ವರ್ಷಕ್ಕೆ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.5 ರಿಂದ ಶೇಕಡಾ 7 ಕ್ಕೆ ಹೆಚ್ಚಿಸಿದ್ದಾರೆ. ಅಂದರೆ, ದೇಶದ ಆರ್ಥಿಕತೆಯು (ಜಿಡಿಪಿ) ಈ ಮೊದಲಿನ ಅಂದಾಜಿಗಿಂತಲೂ ಶೇ. 0.5ರಷ್ಟು ಹೆಚ್ಚಾಗಲಿದೆ ಎಂಬುದು ಅವರ ಸದ್ಯದ ಲೆಕ್ಕಾಚಾರವಾಗಿದೆ.

    ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈ ಮುನ್ಸೂಚನೆಯು ಶೇಕಡಾ 6 ರಿಂದ 6.5ಕ್ಕೆ ಹೆಚ್ಚಿಸಲಾಗಿದೆ. ಈ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕಾಗಿ ಜಿಡಿಪಿ ಮುನ್ಸೂಚನೆಯನ್ನು ಹಿಂದಿನ ಶೇಕಡಾ 5.7 ರಿಂದ 6 ಶೇಕಡಾಕ್ಕೆ ಹೆಚ್ಚಿಸಲಾಗಿದೆ.

    2024-24ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.6 ರಿಂದ 6.7 ಕ್ಕೆ ಹೆಚ್ಚಿಸಲಾಗಿದ್ದರೆ, ಎರಡನೇ ತ್ರೈಮಾಸಿಕದಲ್ಲಿ ಮತ್ತು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಮುನ್ಸೂಚನೆಗಳನ್ನು ಕ್ರಮವಾಗಿ 6.5 ಶೇಕಡಾ ಮತ್ತು 6.4 ಶೇಕಡಾದಲ್ಲಿ ಇರಿಸಲಾಗಿದೆ.

    ಹಣದುಬ್ಬರ (ಬೆಲೆ ಏರಿಕೆ) ದರ:

    ಹಣದುಬ್ಬರದ (ಬೆಲೆ ಏರಿಕೆ) ಮೇಲೆ ವಿತ್ತೀಯ ನೀತಿ ಸಮಿತಿಯು ಮುನ್ಸೂಚನೆಯನ್ನು ಬದಲಾವಣೆ ಮಾಡದೆ ಹಾಗೆಯೇ ಇರಿಸಿದೆ. 2023-24ನೇ ಹಣಕಾಸು ವರ್ಷದಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.4ರಲ್ಲಿ ಇರಿಸಲಾಗಿದೆ. 2023-24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.2ರಲ್ಲಿ ಇರಿಸಲಾಗಿದೆ.

    ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವು 5.2 ಶೇಕಡಾ ಎಂದು ಅಂದಾಜಿಸಲಾಗಿದ್ದರೆ, ಎರಡು ಮತ್ತು ಮೂರನೇ ಹಣಕಾಸು ತ್ರೈಮಾಸಿಕದಲ್ಲಿ ಹಣದುಬ್ಬರವು ಕ್ರಮವಾಗಿ 4 ಶೇಕಡಾ ಮತ್ತು 4.7 ಶೇಕಡಾ ಇರಲಿದೆ ಎಂದು ಊಹಿಸಲಾಗಿದೆ.

    ಆಹಾರ ಹಣದುಬ್ಬರದಿಂದಾಗಿ ಸಮೀಪದ ಅವಧಿಯ ಮುನ್ಸೂಚನೆಯು ಅನಿಶ್ಚಿತವಾಗಿ ಉಳಿದಿದೆ ಎಂದು ದಾಸ್​ ಎಚ್ಚರಿಸಿದ್ದಾರೆ, ಇದು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮುಖ್ಯ ಹಣದುಬ್ಬರ ಅಂಕಿ-ಅಂಶಗಳಲ್ಲಿ ಏರಿಕೆಗೆ ಕಾರಣವಾಗಬಹುದು.

    ಭಾರತದ ಆರ್ಥಿಕತೆ ಪ್ರಕಾಶನಮಾನ: ನೀವು ಲಾಭ ಪಡೆಯಲು ಇಲ್ಲಿದೆ ಯಶೋಮಾರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts