More

    ಭಾರತದ ಆರ್ಥಿಕತೆ ಪ್ರಕಾಶನಮಾನ: ನೀವು ಲಾಭ ಪಡೆಯಲು ಇಲ್ಲಿದೆ ಯಶೋಮಾರ್ಗ

    ಲೇಖಕರು: ದಿವಾಕರ ಜೋಶಿ, ಮ್ಯೂಚುಯಲ್ ಫಂಡ್ ಡಿಸ್ಟ್ರಿಬ್ಯೂಟರ್​

    ‘ಬೆಂಗಳೂರು: ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳಿಗೆ ಸಂಬಂಧಿಸಿದ ಜಾಗತಿಕ ಸವಾಲುಗಳ ನಡುವೆ ಪ್ರಸ್ತುತ ಆರ್ಥಿಕ ಅನಿಶ್ಚಿತತೆಗಳನ್ನು ಗಮನಿಸಿದರೆ, ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆಗಳು ತೀವ್ರ ಚಂಚಲತೆಗೆ ಸಾಕ್ಷಿಯಾಗಿದೆ. ಇದರ ನಿರಂತರತೆಯನ್ನು ಅಲ್ಪಾವಧಿಯಿಂದ ಮಧ್ಯಾವಧಿಯಲ್ಲಿ ನಿರೀಕ್ಷಿಸಲಾಗಿದೆ. ಆದರೆ, ಜಾಗತಿಕ ಆರ್ಥಿಕತೆಯಲ್ಲಿ ಭಾರತವು ಪ್ರಕಾಶಮಾನವಾದ ತಾಣಗಳಲ್ಲಿ ಒಂದಾಗಿದೆ. ಅಲ್ಲದೆ, ದೇಶದ ಬೆಳವಣಿಗೆಯ ಕಥೆಯಲ್ಲಿ ಭಾಗವಹಿಸುವ ಅತ್ಯುತ್ತಮ ಮಾರ್ಗವೆಂದರೆ ಭಾರತೀಯ ಷೇರುಗಳಲ್ಲಿ ಹೂಡಿಕೆ ಮಾಡುವುದು.

    ಈಕ್ವಿಟಿ ಮ್ಯೂಚುಯಲ್ ಫಂಡ್‌ನ ಹಲವಾರು ವರ್ಗಗಳಿದ್ದರೂ, ಇವುಗಳಲ್ಲಿ ಆಸಕ್ತಿದಾಯಕವಾದವು ಎಂದರೆ ಲಾರ್ಜ್​ ಮತ್ತು ಮಿಡ್‌ಕ್ಯಾಪ್ ಫಂಡ್‌ಗಳು. ಲಾರ್ಜ್​ ಮತ್ತು ಮಿಡ್‌ಕ್ಯಾಪ್ ಫಂಡ್‌ಗಳು ಈಕ್ವಿಟಿ ಮ್ಯೂಚುಯಲ್ ಫಂಡ್ ಯೋಜನೆಯಾಗಿದ್ದು, ಇದು ಪ್ರಾಥಮಿಕವಾಗಿ ದೊಡ್ಡ ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಏಣಿಯಲ್ಲಿ ಎರಡನೆಯದು ಎಂದರೆ ಮಧ್ಯಮ ಗಾತ್ರದ ಕಂಪನಿಗಳು. ವೈವಿಧ್ಯಮಯವಾಗಿರುವುದರಿಂದ, ಇಂತಹ ನಿಧಿಗಳು ಸೂಕ್ತವಾದ ಇಕ್ವಿಟಿ ಹಂಚಿಕೆ ಕಾರ್ಯವಿಧಾನವನ್ನು ಪ್ರಸ್ತುತಪಡಿಸುತ್ತವೆ, ಇದರಲ್ಲಿ ಹೂಡಿಕೆದಾರರು ಸ್ಥಾಪಿತ ವ್ಯವಹಾರಗಳ ಸ್ಥಿರ ಬೆಳವಣಿಗೆಯಿಂದ (ಲಾರ್ಜ್​ ಕ್ಯಾಪ್ ಘಟಕ) ಮತ್ತು ನಾಳಿನ ದೊಡ್ಡ ವ್ಯವಹಾರಗಳಲ್ಲಿ (ಮಿಡ್‌ಕ್ಯಾಪ್ ಘಟಕ) ಹೆಚ್ಚಿನ ಬೆಳವಣಿಗೆಯ ನಿರೀಕ್ಷೆಗಳಿಂದ ಪ್ರಯೋಜನ ಪಡೆಯಬಹುದು. ಇದು ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಹೂಡಿಕೆದಾರರು ತಮ್ಮ ಹಣಕಾಸಿನ ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ.

    ಮೂಲಭೂತವಾಗಿ, ಲಾರ್ಜ್​ ಮತ್ತು ಮಿಡ್ ಕ್ಯಾಪ್ ಸ್ಕೀಮ್‌ಗಳು ನಿರ್ವಹಣೆಯಡಿಯಲ್ಲಿನ ಒಟ್ಟು ಸ್ವತ್ತುಗಳ ಕನಿಷ್ಠ ಶೇಕಡಾ 35ರಷ್ಟನ್ನು ಲಾರ್ಜ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಮಾರುಕಟ್ಟೆಯ ಸನ್ನಿವೇಶಗಳು ಮತ್ತು ಮೌಲ್ಯಮಾಪನಗಳನ್ನು ಅವಲಂಬಿಸಿ, ಇಂತಹ ಯೋಜನೆಗಳು ಶೇಕಡಾ 60ರವರೆಗೆ ದೊಡ್ಡ ವ್ಯವಹಾರಗಳಿಗೆ ಒಡ್ಡಿಕೊಳ್ಳಬಹುದು. ಆದರೆ, ಮಧ್ಯಮ ಗಾತ್ರದ ಕಂಪನಿಗಳಲ್ಲಿ ಇವುಗಳ ಗರಿಷ್ಠ ಹಂಚಿಕೆಯು ಶೇಕಡಾ 45ವರೆಗೆ ವಿಸ್ತರಿಸಬಹುದು. ಇದಲ್ಲದೆ, ಮೌಲ್ಯಮಾಪನವು ಆಕರ್ಷಕವಾಗಿ ಕಂಡುಬಂದರೆ, ಸ್ಮಾಲ್-ಕ್ಯಾಪ್ ಕಂಪನಿಗಳಲ್ಲಿ ಚಾಣಾಕ್ಷ ಹೂಡಿಕೆಗಳನ್ನು ಕೂಡ ಮಾಡಬಹುದು. ಇಂತಹ ಹೂಡಿಕೆಗಳು ಪೋರ್ಟ್ಫೋಲಿಯೊದ ರಿಟರ್ನ್ ಪ್ರೊಫೈಲ್ ಅನ್ನು ಹೆಚ್ಚಿಸುತ್ತವೆ. ಅಂದರೆ, ಹೂಡಿಕೆದಾರರಿಗೆ ಹೆಚ್ಚಿನ ಪ್ರಮಾಣದ ಲಾಭ ತಂದುಕೊಡುತ್ತವೆ.

    ಟ್ರ್ಯಾಕಿಂಗ್‌ನಲ್ಲಿ ಸಮಯದ ಕೊರತೆ ಅಥವಾ ಮಾರುಕಟ್ಟೆ ಡೈನಾಮಿಕ್ಸ್‌ನ ಅಸಮರ್ಪಕ ತಿಳಿವಳಿಕೆಯಿಂದಾಗಿ ಹೆಚ್ಚಿನ ಹೂಡಿಕೆದಾರರಿಗೆ ‘ಇದನ್ನು ತಾವೇ ಮಾಡಲು’ ಸಾಧ್ಯವಾಗುವುದಿಲ್ಲವಾದ್ದರಿಂದ ಇವರಿಗೆ ನೆರವಾಗಲು ವೃತ್ತಿಪರ ಹೂಡಿಕೆ ವ್ಯವಸ್ಥಾಪಕರ ಅಗತ್ಯವಿದೆ. ಹೀಗಾಗಿ, ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಸ್ಮಾರ್ಟ್ ಹಂಚಿಕೆ ತಂತ್ರದೊಂದಿಗೆ ಸೂಕ್ತವಾದ ವೈವಿಧ್ಯೀಕರಣದ ಮೂಲಕ ಲಾರ್ಜ್ ಮತ್ತು ಮಿಡ್ ಕ್ಯಾಪ್ ಫಂಡ್‌ನಂತಹ ಯೋಜನೆಗಳು ಈಕ್ವಿಟಿ ಹೂಡಿಕೆದಾರರ ರಕ್ಷಣೆಗೆ ಬರುತ್ತವೆ.

    ಈ ವರ್ಗದಲ್ಲಿನ ವಿವಿಧ ಫಂಡ್​ಗಳ ಪೈಕಿ, ಐಸಿಐಸಿಐ ಪ್ರುಡೆನ್ಶಿಯಲ್ ಲಾರ್ಜ್ ಮತ್ತು ಮಿಡ್‌ಕ್ಯಾಪ್ ಫಂಡ್ ಮಾರುಕಟ್ಟೆಯಲ್ಲಿ ಸ್ಥಿರವಾದ ಪ್ರದರ್ಶನ ನೀಡುವುದರಲ್ಲಿ ಪ್ರಮುಖವಾಗಿದೆ. ಪ್ರಸ್ತುತ, ಈ ಯೋಜನೆಯು ಟಾಪ್-ಡೌನ್ ಮತ್ತು ಬಾಟಮ್-ಅಪ್ ವಿಧಾನದ ಸಂಯೋಜನೆಯ ಮೂಲಕ ಆರ್ಥಿಕ ಚೇತರಿಕೆಯ ಲಾಭವನ್ನು ಪಡೆಯುವ ಷೇರುಗಳು ಮತ್ತು ವಲಯಗಳಲ್ಲಿ ಆಯ್ದ ಹೂಡಿಕೆ ಮಾಡಿದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಬಯಸುವ ಹೂಡಿಕೆದಾರರು ಈ ಯೋಜನೆ ಪರಿಗಣಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts