ಸೂಪರ್​ ಸ್ಟಾರ್​ ರಜಿನಿಕಾಂತ್​​ ಸಿನಿಮಾದಲ್ಲಿ ಕರ್ನಾಟಕದ ಹುಡುಗ; ಈತ ಯಾರು ಗೊತ್ತಾ?

Rajesh Sanju
Published on

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ಜೈಲರ್​ ಸಿನಿಮಾದ ಮೂಲಕ ಬಾಕ್ಸ್​​ಆಫೀಸ್​ನಲ್ಲಿ ಹಸೊ ಸಂಚಲನವನ್ನೇ ಸೃಷ್ಟಿಸಿದ್ದ ಸೂಪರ್​ಸ್ಟಾರ್​ ರಜಿನಿಕಾಂತ್​ ಲೋಕೇಶ್​ ಕನಗರಾಜ್​ ನಿರ್ದೇಶನದ ಕೂಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ರಜಿನಿ ಜೊತೆಗೆ ಶ್ರುತಿ ಹಾಸನ್​ ಹಾಗೂ ರತ್ನನ್​ ಪ್ರಪಂಚ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ರೆಬಾ ಮೋನಿಕಾ ಜಾನ್​, ಸತ್ಯರಾಜ್​ ಸೇರಿದಂತೆ ಪ್ರಮುಖರು ನಟಿಸುತ್ತಿದ್ದು, ಇದೀಗ ಕರ್ನಾಟಕ ಮೂಲದ ಯುವಕನೋರ್ವನಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆತ್ತಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಸದ್ಯ ವೈರಲ್​ ಆಗಿರುವ ಪೋಸ್ಟ್​ ನೋಡುವುದಾದರೆ ಸೂಪರ್​ಸ್ಟಾರ್​ ರಜಿನಿಕಾಂತ್​ ಜೊತೆಗೆ ಕರ್ನಾಟಕ ಮೂಲದ ಹುಡುಗ ಕೂಲಿ ಸಿನಿಮಾದಲ್ಲಿ ಅವಕಾಶ ದೊರೆತ್ತಿದೆ ಎಂದು ತಿಳಿದು ಬಂದಿದೆ. ರಜಿನಿ​ ಜೊತೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ಚಿತ್ರವನ್ನು ಫ್ಯಾನ್​ ಪೇಜ್​ ಒಂದು ಪೋಸ್ಟ್​ ಮಾಡಿದ್ದು, ಸೆಟ್‌ನಲ್ಲಿ ಅವರು ಕಾಣಿಸಿಕೊಂಡ ಹಿನ್ನಲೆ ಕೂಲಿ ಸಿನಿಮಾದಲ್ಲಿ ನಟಿಸುತ್ತಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಧಿಕೃತ ಮಾಹಿತಿಗಾಗಿ ಕಾದುನೋಡಬೇಕಿದೆ.

ರಜಿನಿಕಾಂತ್​ ಜೊತೆ ಫೋಟೋ ತೆಗೆಸಿಕೊಂಡಿರುವ ಯುವಕನ ಹೆಸರು ರಾಜೇಶ್​ ಸಂಜು ಎಂದು ತಿಳಿದು ಬಂದಿದ್ದು, ಇವರು ಚಿತ್ರದ ಮೇಕಿಂಗ್ ಸೇರಿದಂತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವರು ಬೆಂಗಳೂರು ಮೂಲದವರಾಗಿದ್ದು, ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಇವರು ಶಾವೊಲಿನ್​ ಕುಂಗ್​ ಫೂ ಕೂಡ ಕಲಿತಿದ್ದಾರೆ ಎಂಬ ವಿಚಾರ ಅವರ ಸಾಮಾಜಿಕ ಜಾಲತಾಣ ಖಾತೆಯಿಂದ ತಿಳಿದು ಬಂದಿದೆ.

ಟೀಸರ್​ ಮೂಲಕ ಸಾಕಷ್ಟು ಹೈಪ್​ ಕ್ರಿಯೇಟ್​ ಮಾಡಿರುವ ಕೂಲಿ ಸಿನಿಮಾವು ಬಿಡುಗಡೆಗೂ ಮುನ್ನ ಕ್ರೇಜ್​ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ. ಸನ್​ ಪಿಕ್ಚರ್ಸ್​ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಚಿತ್ರಕ್ಕೆ ಅನಿರುದ್ಧ್​ ರವಿಚಂದರ್​ ಸಂಗೀತ ಸಂಯೋಜಿಸುತ್ತಿದ್ದಾರೆ. ಗಿರೀಶ್​ ಗಂಗಾಧರನ್​ ಕ್ಯಾಮರಾಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದು, ಫಿಲೋಮಿನ್​ ರಾಜ್​ ಅವರ ಸಂಕಲನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net