ಇದೇನಾ ಹೊಸ ಭಾರತ?, ಬ್ರಿಜ್ ಭೂಷಣ್​ಗೆ ಶೀಘ್ರ ಬಂಧನ ಯಾಕಿಲ್ಲ: ಕಪಿಲ್ ಸಿಬಲ್

kapil sibal
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಕಳೆದ ಒಂದು ತಿಂಗಳಿನಿಂದಲೂ ಭಾರತದ ಕುಸ್ತಿಪಟುಗಳು ದೆಹಲಿಯಲ್ಲಿ ಬಿಜೆಪಿ ಸಂಸದ, ಡಬ್ಲ್ಯೂಎಫ್​ಐ ಮುಖ್ಯಸ್ಥ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯಸಭಾ ಸದಸ್ಯ, ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಕಪಿಲ್ ಸಿಬಲ್ ಆಡಳಿತರೂಢ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇದು ಎಲ್ಲಾ ಆರೋಪಿಗಳಿಗೂ ಅನ್ವಯವಾಗುತ್ತದೆ. ಆದ್ರೆ, ಬ್ರಿಜ್ ಭೂಷಣ್ ಸಿಂಗ್​ಗೆ ಮಾತ್ರ ಅನ್ವಯವಾಗುವುದಿಲ್ಲವೇ?, ಯಾಕೆ ಅವರು ಕೇಸರಿ ಪಕ್ಷಕ್ಕೆ ಸೇರುತ್ತಾರೆ ಎಂಬ ಕಾರಣವಾ?" ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಕಪಿಲ್ ಸಿಬಲ್, "ಪೋಕ್ಸೋ ಕಾಯ್ದೆ ಅರ್ಜಿ ಸೇರಿದಂತೆ 164 ಹೇಳಿಕೆಗಳು ಬ್ರಿಜ್ ಭೂಷಣ್ ಸಿಂಗ್ ಹೊರತುಪಡಿಸಿ, ಎಲ್ಲಾ ಆರೋಪಿಗಳಿಗೂ ಅನ್ವಯವಾಗುತ್ತದೆ. ಕಾರಣ, ಅವರು ಬಿಜೆಪಿಗೆ ಸೇರುತ್ತಾರೆ, ಮಹಿಳಾ ಕುಸ್ತಿಪಟುಗಳು ಲೆಕ್ಕಕ್ಕಿಲ್ಲ, ಮತಗಳು ಮಾತ್ರ!, ಸರ್ಕಾರದ ಕಾಳಜಿ ವಹಿಸುವುದಿಲ್ಲ. ಇದೇನಾ ನನ್ನ ಹೊಸ ಭಾರತ? ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net