ಚಂಡೀಗಢದಲ್ಲಿ ಮನೆಯನ್ನು ಉಡುಗೊರೆಯಾಗಿ ನೀಡಿದ ಕಂಗನಾ ರಣಾವತ್​​; ಯಾರಿಗೆ ಅಂಥಾ ಗೊತ್ತಾ?

Untitled-design-2024-06-17T174652.936
Published on

ಮುಂಬೈ: ಲೋಕಸಭೆ ಚುನಾವಣೆ 2024ರಲ್ಲಿ ಭಾರತೀಯ ಜತನಾ ಪಕ್ಷದ ಸಂಸದೆಯಾಗಿ ಅಧಿಕಾರ ವಹಿಸಿಕೊಂಡಿರುವ ನಟಿ ಕಂಗನಾ ರಣಾವತ್​​​ ತಮ್ಮ ಕುಟುಂಬ ಮತ್ತು ಸಂಬಂಧಿಕರೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಸಮಾರಂಭಕ್ಕೆ ಹೋದರೆ ಉಡುಗೊರೆ ಕೊಡುವುದು ಪ್ರಸ್ತುತ ಸರ್ವೆಸಾಮಾನ್ಯವಾಗಿದೆ. ಅಬ್ಬಬ್ಬಾ ಎಂದರೆ ಏನೆಲ್ಲಾ ಗಿಫ್ಟ್​​ ಕೊಡಬಹುದು. ಎಲೆಕ್ಟ್ರಾನಿಕ್​​ ವಸ್ತುಗಳು, ಚಿನ್ನದ ಆಭರಣಗಳು ಹೀಗೆ ಕೆಲವೊಂದು ಉಡುಗೊರೆಯನ್ನು ಪಟ್ಟಿ ಮಾಡಬುಹುದು. ಆದರೆ ನೂತನ ಸಂಸದೆ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಾರಿಗೆ ಗೊತ್ತಾ...

ಇತ್ತೀಚೆಗೆ ಕಂಗನಾ ರಣಾವತ್​ ಅವರ ಸೋದರ ಸಂಬಂಧಿ ವರುಣ್ ರಣಾವತ್ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮದುವೆಯಾಗ ನೂತನ ಜೋಡಿಗೆ ಸಂಸದೆ ಕಂಗನಾ ಚಂಡೀಗಢದಲ್ಲಿ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿರುವ ವರುಣ್ ಅವರ ಪೋಸ್ಟ್‌ಗಳು ಸೇರಿದಂತೆ ಅನೇಕ ಸ್ಕ್ರೀನ್‌ಶಾಟ್‌ಗಳನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನೀವು ಯಾವಾಗಲೂ ನಮ್ಮ ಕನಸುಗಳನ್ನು ನನಸಾಗಿಸುವಿರಿ. ಎಲ್ಲದಕ್ಕೂ (ಹಾರ್ಟ್​​ ಮತ್ತು ಎರಡು ಸ್ಮೈಲಿ ಎಮೋಜಿಗಳ ಜತೆಗೆ) ತುಂಬಾ ಧನ್ಯವಾದಗಳು ಎಂದು ಅವರ ಸಹೋದರ ಪೋಸ್ಟ್​​ ಮಾಡಿದ್ದಾರೆ. ಇದನ್ನು ಹಂಚಿಕೊಂಡಿರುವ ಕಂಗನಾ ಅವರ ಸಹೋದರಿಗೆ ಪ್ರತಿಕ್ರಿಯಿಸಿದ್ದಾರೆ. ನಮ್ಮಲ್ಲಿ ಏನಿದೆಯೋ ಅದನ್ನು ಹಂಚಿಕೊಳ್ಳಬೇಕು. ನಮ್ಮಲ್ಲಿ ಸಾಕಷ್ಟು ಇಲ್ಲ ಎಂದು ಯಾವಾಗಲೂ ಭಾವಿಸುತ್ತೇವೆ, ಆದರೂ ನಾವು ಅದನ್ನು ಹಂಚಿಕೊಳ್ಳಬೇಕು, ಇದಕ್ಕಿಂತ ದೊಡ್ಡ ಸಂತೋಷವಿಲ್ಲ ಎಂದು ಹೇಳಿದ್ದಾರೆ.

ಇನ್ನು ಅವರ ಸಹೋದರ ನೂತನ ಮನೆಯ ಗೃಹಪ್ರವೇಶದ ಫೋಟೋಗಳನ್ನು ಹಂಚಿಕೊಂಡಿದ್ದು, “ಗಣಪತಿ ಜಿಯವರ ಆಶೀರ್ವಾದದೊಂದಿಗೆ ನಮ್ಮ ಹೊಸ ಮನೆಗೆ ಪ್ರವೇಶಿಸುತ್ತಿದ್ದೇನೆ. ಈ ಸುಂದರವಾದ ಮನೆಯು ಸಹೋದರಿಯಿಂದ ಸಹೋದರನಿಗೆ ಸಿಕ್ಕ ಆಶೀರ್ವಾದ ಮತ್ತು ಪ್ರೀತಿಯಾಗಿದೆ ಎಂದು ತಿಳಿಸಿದ್ದಾರೆ. ಈ ಫೋಟೋಗಳ ಸ್ಕ್ರೀನ್​​ಶಾಟ್​ಗಳನ್ನು ನಟಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net