ರಿ-ರಿಲೀಸ್​ಗೆ ಸಜ್ಜಾಯ್ತು ಕಮಲ್​ ಹಾಸನ್​ ನಟನೆಯ ಸೂಪರ್​ ಹಿಟ್​ ಸಿನಿಮಾ!

Untitled design - 2023-09-19T115510.044
Published on

ತಮಿಳುನಾಡು: ಕಾಲಿವುಡ್​ನ ಸೂಪರ್​ ಸ್ಟಾರ್​, ಬಹುಭಾಷಾ ನಟ ಕಮಲ್​ ಹಾಸನ್ ಅಭಿನಯದ ಸೂಪರ್​ ಹಿಟ್​ ಸಿನಿಮಾವೊಂದು ನವೆಂಬರ್​ 03 ರಂದು ಮರು ಬಿಡುಗಡೆಗೊಳ್ಳಲು ಸಜ್ಜಾಗಿದೆ.

ಈ ಸುದ್ದಿ ಕಮಲ್ ಹಾಸನ್​ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದ್ದು, ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್​ನಡಿ ನಿರ್ಮಾಣಗೊಂಡು, 1987 ರಲ್ಲಿ ಬಿಡುಗಡೆಗೊಂಡಿದ್ದ ಕ್ಲಾಸಿಕ್ ಸಿನಿಮಾ 'ಪೆಸುಂ ಪದಂ' ಇದೇ ನವೆಂಬರ್ 3 ರಂದು ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ರಿ-ರಿಲೀಸ್ ಆಗಲು ಸಜ್ಜಾಗಿದೆ.

ಸಿನಿಮಾವನ್ನು ಇಂದಿನ ಡಾಲ್ಬಿ ಅಟ್ಮಾಸ್​ 4K ಆವೃತ್ತಿಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಸಂಗೀತಂ ಶ್ರೀನಿವಾಸ ರಾಂ ನಿರ್ದೇಶನದ ಈ ಚಿತ್ರದ ರಿ-ರಿಲೀಸ್​ಗಾಗಿ ಕಮಲ್ ಹಾಸನ್​ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net