

ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಅವರ ಮುಂಬರುವ ಚಿತ್ರ ʻಲಿಯೋʼ (Leo poster) ಸೆ.17ರಂದು ಚಿತ್ರದ ತೆಲುಗು ಪೋಸ್ಟರ್ ಹಂಚಿಕೊಂಡಿತ್ತು. ಇದೀಗ ಕನ್ನಡ ಪೋಸ್ಟರ್ ಶೇರ್ ಮಾಡಿಕೊಂಡಿದೆ. ʼಶಾಂತವಾಗಿರಿ ಮತ್ತು ಯುದ್ಧವನ್ನು ತಪ್ಪಿಸಿʼ ಎಂಬ ಶೀರ್ಷಿಕೆ ತೆಲುಗು ಫೋಸ್ಟರ್‌ನಲ್ಲಿ ಇತ್ತು. ಇದೀಗ ಕನ್ನಡ ಪೋಸ್ಟರ್‌ನಲ್ಲಿ 'ಶಾಂತವಾಗಿರಿ ಮತ್ತು ತಪ್ಪಿಸಿಕೊಳ್ಳಲು ಸಂಚು ಮಾಡಿ' ಎಂದು ಬರೆದಿದೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ‘ಲಿಯೋ’ ಸಿನಿಮಾದ (Leo Movie) ಕನ್ನಡ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಚಿತ್ರ ಕನ್ನಡದಲ್ಲೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ತಯಾರಿ ನಡೆದಿದೆ ಎನ್ನುವ ಸೂಚನೆ ಸಿಕ್ಕಿದೆ.
ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿವೆ. ಆದರೆ, ಈ ರೀತಿ ರಿಲೀಸ್ ಆಗುವ ಸಿನಿಮಾಗಳು ಕನ್ನಡ ಹಾಗೂ ಮಲಯಾಳಂ ಭಾಷೆಯನ್ನು ಕಡೆಗಣಿಸುತ್ತವೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಆದರೆ, ‘ಲಿಯೋ’ ತಂಡದವರು ಆ ರೀತಿ ಅಲ್ಲ. ಈ ಚಿತ್ರವನ್ನು ಕನ್ನಡದಲ್ಲೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ಇದಕ್ಕೆ ವಿಶೇಷ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ.
‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರ ನಿರ್ದೇಶನ ಇದೆ. ಅವರು ಈ ಮೊದಲು ‘ಕೈದಿ’, ‘ವಿಕ್ರಮ್’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಇವೆರಡೂ ಸಿನಿಮಾಗಳು ‘ಲಿಯೋ’ ಜೊತೆ ಕನೆಕ್ಷನ್ ಹೊಂದಿರಲಿದೆ ಎನ್ನಲಾಗಿದೆ. ದಳಪತಿ ವಿಜಯ್ಗೆ ಜೊತೆಯಾಗಿ ತ್ರಿಷಾ ನಟಿಸಿದ್ದಾರೆ.
ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಲಿಯೋ ಚಿತ್ರಕ್ಕೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳ ಲೋಕೇಶ್ ಅವರು ಹೇಳಿಕೊಂಡಿದ್ದರು. ʻʻಚಿತ್ರಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅದಕ್ಕಾಗಿಯೇ ನಾವು ಯಾವುದೇ ಅಪ್‌ಡೇಟ್‌ಗಳನ್ನು ನೀಡಿಲ್ಲ. ಕ್ರಮೇಣ ಹೊಸ ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಚಿತ್ರ ಬಿಡುಗಡೆಗೆ 30 ದಿನಗಳ ಮುಂಚೆಯೇ ಚಿತ್ರದ ಬಗ್ಗೆ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲು ನಾವು ಯೋಜಿಸಿದ್ದೇವೆʼʼ ಎಂದಿದ್ದರು. ಹೇಳಿದಂತೆ ಸೆ. 17ರಂದು ಚಿತ್ರದ ತೆಲುಗು ಪೋಸ್ಟರ್ ಬಿಡುಗಡೆಯಾಗಿದೆ.