

ಬೆಂಗಳೂರು: ಕೇರಳದಲ್ಲಿ ನಿಪಾ ವೈರಸ್ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆ ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡುವ ಮುಖೇನ ಎಚ್ಚರಿಸಿದೆ.
ಅಸ್ಸಾಂ, ಒಡಿಶಾ, ರಾಜಸ್ಥಾನ, ತಮಿಳುನಾಡಿನ ಕೆಲ ಭಾಗದಲ್ಲಿ ಸ್ಕ್ರಬ್ ಟೈಫಸ್ ಹಾವಳಿ ಉಂಟಾಗಿದ್ದು, ಕಳೆದ ಕೆಲವು ದಿನಗಳಿಂದ
ರಾಜಧಾನಿ ಬೆಂಗಳೂರಿನ ಮಕ್ಕಳಲ್ಲಿ ಕೆಮ್ಮು, ಹೊಟ್ಟೆ ನೋವು, ಚಳಿ ಜ್ವರ, ವೈರಲ್ ಫೀವರ್, ಮೈ-ಕೈ ನೋವು, ತಲೆನೋವು, ನ್ಯೂಮೋನಿಯಾ ಸೇರಿದಂತೆ ಇತರ ರೋಗಲಕ್ಷಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಪೋಷಕರಿಗೆ ಸೂಚನೆ ನೀಡಿದೆ.
ಮಕ್ಕಳಲ್ಲಿ ತೀವ್ರ ಜ್ವರ, ಕೆಮ್ಮು-ನೆಗಡಿ ಕಾಣಿಸಿಕೊಂಡರೆ ಶಾಲೆಗೆ ಕಳುಹಿಸದಂತೆ ಇಲಾಖೆ ಎಚ್ಚರಿಕೆ ನೀಡಿದೆ. ಡೆಂಘೀ ವೈರಸ್ನಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಅವರಿಗೆ ಕೈ-ಕಾಲು ಮುಚ್ಚುವ ಬಟ್ಟೆ ಧರಿಸಿ, ದೇಹದ ಹಲವು ಭಾಗಗಳಿಗೆ ಲೋಶನ್ ಕ್ರೀಮ್ಗಳ ಬಳಕೆ ಮಾಡುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ,(ಏಜೆನ್ಸೀಸ್).