ಚಿತ್ರೀಕರಣದ ದೃಶ್ಯಗಳು ಸೋರಿಕೆ!; ಪಬ್ಲಿಕ್​ಗೆ ಎಚ್ಚರಿಸಿದ 'ಕಲ್ಕಿ 2898 AD' ಚಿತ್ರತಂಡ

Untitled design - 2023-09-21T154959.647
Published on

ಹೈದ್ರಾಬಾದ್​: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ನಟನೆಯ ಬಹುನಿರೀಕ್ಷಿತ 'ಕಲ್ಕಿ 2898 AD' ಚಿತ್ರತಂಡ ಇದೀಗ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ರವಾನಿಸಿದ್ದು, ಚಿತ್ರದ ಚಿತ್ರೀಕರಣದ ಕೆಲ ದೃಶ್ಯಗಳನ್ನು ಕಿಡಿಗೇಡಿಗಳು ಆನ್​ಲೈನ್​ನಲ್ಲಿ ಸೋರಿಕೆ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಭಾಸ್​ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ 'ಕಲ್ಕಿ 2898 AD' ಸಿನಿಮಾದ ಒಳಾಂಗಣ ಚಿತ್ರೀಕರಣದ ಕೆಲವು ದೃಶ್ಯಗಳನ್ನು ಕಿಡಿಗೇಡಿಗಳು ಆನ್​ಲೈನ್​ನಲ್ಲಿ ಸೋರಿಕೆ ಮಾಡಿದ್ದಾರೆ. ಈ ಘಟನೆಯಿಂದ ತೀವ್ರ ಬೇಸರಗೊಂಡಿರುವ ಚಿತ್ರತಂಡ, ಸಾರ್ವಜನಿಕ ಸೂಚನೆಯೊಂದನ್ನು ಪೋಸ್ಟರ್​ ಮುಖೇನ ರವಾನಿಸಿದೆ.

ವೈಜಯಂತಿ ಮೂವೀಸ್​ ಬ್ಯಾನರ್​​ನ 'ಕಲ್ಕಿ 2898 AD ಚಲನಚಿತ್ರದ ಹಕ್ಕುಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪ್ರತ್ಯೇಕವಾಗಿ ಹೊಂದಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ಬಯಸುತ್ತೇವೆ.

ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ವಿಧಾನದ ಮೂಲಕ ಹಂಚಿಕೊಳ್ಳುವುದು ಹಕ್ಕುಸ್ವಾಮ್ಯದ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ.

1957ರ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳು, ಯಾವುದೇ ವ್ಯಕ್ತಿ ಚಲನಚಿತ್ರಕ್ಕೆ ಸಂಬಂಧಿಸಿದ ಮಾಹಿತಿ, ಸುದ್ದಿ ಅಥವಾ ವಸ್ತುಗಳನ್ನು ಹಂಚಿಕೊಳ್ಳುವಲ್ಲಿ ಅಥವಾ ಸೋರಿಕೆ ಮಾಡುವಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದರೆ ಅವರ ವಿರುದ್ಧ ಸೈಬರ್ ಪೊಲೀಸರ ಸಹಾಯದಿಂದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net