More

    ಜಲಜೀವನ್ ಮಿಷನ್ ಪ್ರಥಮ ಹಂತದ ಎಲ್ಲ 458 ಕಾಮಗಾರಿ ಪೂರ್ಣ: ದಕ ಜಿಪಂ ಸಿಇಓ ಡಾ.ಆನಂದ್ ಮಾಹಿತಿ

    ವಿಜಯವಾಣಿ ಸುದ್ದಿಜಾಲ ಮಂಗಳೂರು
    ಗ್ರಾಮೀಣ ಬಾಗದ ಎಲ್ಲ ಮನೆಗಳಿಗೆ ನಳ್ಳಿ ಮೂಲಕ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಜಲಜೀವನ್ ಮಿಷನ್ ಯೋಜನೆ ದ್ವಿತೀಯ ಹಂತದ ಪ್ರಮುಖ ಕಾಮಗಾರಿ ಮುಂದಿನ 7- 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹನಾಕಾರಿ ಡಾ.ಆನಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಜಲಜೀವನ್ ಮಿಷನ್ ಯೋಜನೆಯಲ್ಲಿ ಮೂರು ಹಂತಗಳಲ್ಲಿ ಒಟ್ಟು ಸುಮಾರು 700 ಕಾಮಗಾಋಇಗಳು ಇವೆ. ಇವುಗಳಲ್ಲಿ ಪ್ರಥಮ ಹಂತದಲ್ಲಿ ಇರುವ ಎಲ್ಲ 458 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.
    ದ್ವಿತೀಯ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 134 ಕಾಮಗಾರಿಗಳು ಇದ್ದು, 25 ಪೂರ್ಣಗೊಂಡಿವೆ. 109 ಪ್ರಗತಿಯಲ್ಲಿದೆ. ತೃತೀಯ ಹಂತದಲ್ಲಿ ಒಟ್ಟು 108 ಕಾಮಗಾರಿಗಳಿದ್ದು, 10 ಪೂರ್ಣಗೊಂಡಿವೆ. 97 ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.
    ಯೋಜನಾ ವೆಚ್ಚಕ್ಕಿಂತ ಅಕ ವೆಚ್ಚ ತಗುಲಿದ ಹಾಗೂ ಜಿಲ್ಲಾ ಮಟ್ಟದಲ್ಲಿ ಅನುಮತಿ ಒದಗಿಸಲು ಅವಕಾಶವಿರುವ ಯೋಜನೆಯ ಪ್ರಥಮ ಹಂತದ 13 ಹಾಗೂ ದ್ವಿತೀಯ ಹಂತದ 15 ಯೋಜನೆಗಳಿಗೆ ಸಭೆಯಲ್ಲಿ ಆರ್ಥಿಕ ಮಂಜೂರಾತಿ ಒದಗಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಅನುಮತಿ ಒದಗಿಸಲು ಅವಕಾಶ ಇಲ್ಲದ ಐದು ಕಾಮಗಾರಿಗಳು ಅನುಮತಿ ಒದಗಿಸಲು ಅರ್ಹವಾಗಿದೆ ಎಂದು ಶಿಫಾರಸು ಮಾಡಿ ಅನುಮೋದನೆಗಾಗಿ ರಾಜ್ಯ ಮಟ್ಟದ ಸಮಿತಿಗೆ (ಸ್ಟೇಟ್ ಲೆವೆಲ್ ಸ್ಕೀಂ ಸ್ಯಾಂಕ್ಷನಿಂಗ್ ಕಮಿಟಿ- ಎಸ್‌ಎಲ್‌ಎಸ್‌ಎಸ್‌ಸಿ) ಕಳುಹಿಸಲು ತೀರ್ಮಾನಿಸಲಾಯಿತು.
    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರಘುನಾಥ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇ ಗೌಡ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts