ಅಮಿತಾಬ್ ಬಚ್ಚನ್ 81ನೇ ಜನ್ಮದಿನ: ಹೊಸ ಅಪ್ಡೇಟ್​ ಕೊಟ್ಟ​ 'ಕಲ್ಕಿ 2898 AD' ಚಿತ್ರತಂಡ

Untitled design - 2023-10-11T171053.234
Published on

ಮುಂಬೈ: ಪ್ಯಾನ್​ ಇಂಡಿಯಾ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್​ 'ಕಲ್ಕಿ 2898 AD' ಚಿತ್ರದ ಬಗ್ಗೆ ಇದೀಗ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ವ್ಯಕ್ತವಾಗುತ್ತಿದೆ. ಪ್ರಭಾಸ್​ ನಟನೆಯ ಈ ಸೈ-ಫೈ ಚಿತ್ರದಲ್ಲಿ ಬಾಲಿವುಡ್​ ಚಿತ್ರರಂಗದ ಹಿರಿಯ ನಟ, ಅಮಿತಾಬ್​ ಬಚ್ಚನ್​ ಅಭಿನಯಿಸಿದ್ದು, ಇಂದು ಅವರ ಜನ್ಮದಿನದಂದೇ ವಿಶೇಷ ಪೋಸ್ಟರ್​ ರಿಲೀಸ್​ ಮಾಡುವ ಮುಖೇನ ಚಿತ್ರತಂದ ಶುಭಾಶಯ ತಿಳಿಸಿದೆ.

2024 ರಲ್ಲಿ ದೊಡ್ಡ ಪರದೆಯ ಮೇಲೆ ಬರಲು ಸಜ್ಜಾಗಿರುವ 'ಕಲ್ಕಿ 2898 AD' ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದು, ಇತ್ತೀಚೆಗಷ್ಟೇ ಚಿತ್ರದ ಮೊದಲ ಗ್ಲಿಂಪ್ಸ್​ ವಿಡಿಯೋ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ 81ನೇ ವಸಂತಕ್ಕೆ ಕಾಲಿಟ್ಟ ಭಾರತೀಯ ಚಿತ್ರರಂಗದ ಶಾಹೆನ್‌ಶಾ, ಅಮಿತಾಬ್ ಬಚ್ಚನ್ ಅವರ ಆಕರ್ಷಕ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

ಇಂದು ದಿಗ್ಗಜ ನಟನ ಹುಟ್ಟುಹಬ್ಬವನ್ನು ಗುರುತಿಸಿ, ತಯಾರಕರು ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಪೋಸ್ಟರ್‌ನಲ್ಲಿ ಅಮಿತಾಬ್ ಸಾಧುವಿನಂತೆ ಕೋಲು ಹಿಡಿದುಕೊಂಡಿರುವುದನ್ನು ಕಾಣಬಹುದು. ಸದ್ಯದ ಮಟ್ಟಿಗೆ ಬಿಗ್ ಬಿ ಪಾತ್ರದ ಬಗ್ಗೆ ಹೆಚ್ಚು ವಿವರಗಳನ್ನು ಬಹಿರಂಗಪಡಿಸಿಲ್ಲ. ಅಮಿತಾಭ್ ಬಚ್ಚನ್ ಅವರೊಂದಿಗೆ ಒಡನಾಟವಿರುವುದು ತಮ್ಮ ಗೌರವ ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರದಲ್ಲಿ ದಿಗ್ಗಜರು ನಟಿಸುತ್ತಿದ್ದು, ಕಮಲ್ ಹಾಸನ್, ಬಾಲಿವುಡ್​ನ ಹಾಟ್ ಬ್ಯೂಟಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಈ ಸೈನ್ಸ್​-ಫಿಕ್ಷನ್​, ಆಕ್ಷನ್-ಥ್ರಿಲ್ಲರ್ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net