ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತು ಭೂತದ ಕಥೆ; ಸ್ಪರ್ಧಿಗಳು ಹೇಳುತ್ತಿರುವುದೇ ಬೇರೆ!

Untitled design - 2023-10-11T163432.273
Published on

ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಇದೀಗ ತನ್ನ 10ನೇ ಆವೃತ್ತಿಯನ್ನು ಅದ್ದೂರಿಯಾಗಿ, ವಿಶೇಷವಾಗಿ ಪ್ರಾರಂಭಿಸಿದ್ದು, ವಿವಿಧ ಕ್ಷೇತ್ರ ಸೇರಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದ ವ್ಯಕ್ತಿಗಳು ಈ ಬಾರಿ ಸೀಸನ್​ 10ರ ಟಾಪ್​ ಕಂಟೆಸ್ಟೆಂಟ್​ಗಳಾಗಿ ಎಂಟ್ರಿ ಕೊಟ್ಟಿದ್ದಾರೆ.

ಸದ್ಯ ಬಿಗ್​ಬಾಸ್​ ಪ್ರಾರಂಭಗೊಂಡ ಮೊದಲ ದಿನವೇ ಮನೆಯಲ್ಲಿ ಬಿಸಿ ಬಿಸಿ ಚರ್ಚೆಗಳು ಬುಗಿಲೆದ್ದಿದ್ದು, ಒಬ್ಬರ ಮೇಲೋಬ್ಬರಿಗೆ ಮನಸ್ತಾಪಗಳು ಹುಟ್ಟಿಕೊಂಡಿವೆ. ಈ ಮಧ್ಯೆ ಇಂದಿನ ಸಂಚಿಕೆಯಲ್ಲಿ ದೊಡ್ಡ ಅರಮನೆಯೊಳಗೆ ಪಾಳು ಮನೆಯಲ್ಲಿ ಕೇಳಿಬರುವ ದೆವ್ವದ ಕಥೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಗ್‌ಬಾಸ್‌ ಮನೆಯೊಳಗೆ ಭೂತದ ಕಥೆ ಪ್ರಾರಂಭವಾಗಿದ್ದು, ಮನೆಯೊಳಗೆ ಕುಳಿತು ದೆವ್ವದ ಬಂಗ್ಲೆ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಕಂಟೆಸ್ಟೆಂಟ್‌ಗಳು! ಎಲ್ಲೋ ಒಂದು ಆಲೋಚನೆಯಿಂದ ಶುರುವಾದ ಕಥೆಗೆ ಒಬ್ಬೊಬ್ಬರೂ ಒಂದೊಂದು ಸಾಲು ಸೇರಿಸಿ ಹೆಣೆದು ಭಯದ ಭೀತಿ ಸೃಷ್ಟಿಸಿದ್ದಾರೆ. ಇದು ಎಷ್ಟು ಹಾರರ್ ಆಗಿದೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಕರು ನೋಡಿ ತಿಳಿಯಬೇಕಿದೆ.

ಸದ್ಯ ಈ ಕುರಿತಂತೆ ಈಗಾಗಲೇ ಫೇಸ್​ಬುಕ್​ನಲ್ಲಿ ಒಂದು ಪ್ರೋಮೋ ಕೂಡ ಪೋಸ್ಟ್​ ಆಗಿದ್ದು, ನೆಟ್ಟಿಗರು ಮತ್ತು ವೀಕ್ಷಕರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ನಮ್ರತಾ ಗೌಡ, ಡ್ರೋನ್​ ಪ್ರತಾಪ್, ಅಭಿನವ್​ ವಿಶ್ವನಾಥನ್​, ವಿನಯ್​ ಗೌಡ, ಗೌರೀಶ್​ ಅಕ್ಕಿ, ರಕ್ಷಕ್​ ಬುಲ್ಲೆಟ್​, ಸಂಗೀತಾ ಶೃಂಗೇರಿ, ಸ್ನೇಕ್​ ಶ್ಯಾಮ್, ಕೋಮಲ್, ನೀತು ವನಜಾಕ್ಷಿ ಬಿಗ್​ ಮನೆಗೆ ಬಿಗ್​ ಆಗಿ ಎಂಟ್ರಿ ಕೊಟ್ಟ ಕಂಟೆಸ್ಟೆಂಟ್​ಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net