ಪೊಲೀಸರ ಕಾರನೇ ಕದ್ದ ಬಂಧಿತ ವ್ಯಕ್ತಿ; ಸಿಗಲಿಲ್ಲ ವಾಹನದ ಕೀ!

Untitled design - 2023-10-11T160538.216
Published on

ಹರಿಯಾಣ: ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿಯೊಬ್ಬ ಪೊಲೀಸರಿಗೆ ನೀಡಲಾಗಿದ್ದ ತುರ್ತು ಪ್ರತಿಕ್ರಿಯೆ ವಾಹನವನ್ನು (ERV) ಚಲಾಯಿಸಿಕೊಂಡು ನಾಪತ್ತೆಯಾದ ಘಟನೆ ಹರಿಯಾಣದ ಯುಮುನಾ ನಗರದಲ್ಲಿ ವರದಿಯಾಗಿದೆ.

ಘಟನೆಯ ವಿವರ: ರಸ್ತೆ ಬದಿಯಲ್ಲಿ ಜಗಳವಾಡುತ್ತಿದ್ದ ಗುಂಪನ್ನು ನೋಡಿದ ಪೊಲೀಸರು ಮಧ್ಯಪ್ರವೇಶಿಸಿ, ಘಟನೆಯಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿ, ಕಾರಿನಲ್ಲಿ ಕರೆದುಕೊಂಡು ಹೋದರು. ದಾರಿ ಮಧ್ಯೆ ಒಂದು ಪ್ರಕರಣದ ಕುರಿತು ಖುರ್ದಿ ಗ್ರಾಮಕ್ಕೆ ತೆರಳಿದ ಪೊಲೀಸರು, ವಾಹನದ ಕೀ ಅನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದಾರೆ.

ದೂರು ಸ್ವೀಕರಿಸಿದ ಸ್ಥಳಕ್ಕೆ ತಲುಪಿದ ಪೊಲೀಸ್ ಅಧಿಕಾರಿಗಳು ಮನೆಯೊಳಗೆ ಹೋಗಿದ್ದಾರೆ. ಈ ಸಮಯದಲ್ಲಿ ಕಾರಿನಲ್ಲೇ ಕುಳಿತ್ತಿದ್ದ ವ್ಯಕ್ತಿ, ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಕೂಡಲೇ ಬೈಕ್​ನಲ್ಲಿ ಚೇಸ್​ ಮಾಡಿದ ಪೊಲೀಸರ ಕಣ್ತಪ್ಪಿಸಿದ ವ್ಯಕ್ತಿ, ಕಾರನ್ನು ಘಟನಾ ಸ್ಥಳದಿಂದ 10 ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ, ಪರಾರಿಯಾಗಿದ್ದಾನೆ. ಕಾರು ಪತ್ತೆಯಾದರು, ಕಾರಿನ ಕೀ ಕಾಣೆಯಾಗಿದೆ.

ಸ್ಥಳಕ್ಕೆ ಬಂದ ಪೊಲೀಸರು ವಾಹನವನ್ನು ವಶಪಡಿಸಿಕೊಂಡರೂ ಕೂಡ ಅದರ ಕೀ ಪತ್ತೆಹಚ್ಚಲು ಸಾಧ್ಯವಾಗಿಲ್ಲ. "ಪೊಲೀಸ್ ಅಧಿಕಾರಿಗಳು ಕಾಡಿನಲ್ಲಿ ಕಾರಿನ ಕೀಗಳನ್ನು ಹುಡುಕುತ್ತಿರುವುದನ್ನು ವೀಡಿಯೊ ತೋರಿಸಿದೆ. ಶಂಕಿತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ" ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net