More

    ಬೆಣ್ಣೆ ಹಚ್ಚಿದರೂ ಲಾಭ, ತಿಂದರೂ ಲಾಭ, ಸುಟ್ಟ ಗಾಯಕ್ಕೂ ಬೆಣ್ಣೆ ಸವರಿ ವಾಸಿ ಮಾಡಿಕೊಳ್ಳಬಹುದು..!

    ಸುಟ್ಟ ಗಾಯಗಳಿಗೆ ಬೆಣ್ಣೆ ಹಚ್ಚಿದರೆ ಅದು ಉರಿನ ಕಡಿಮೆಗೊಳಿಸುತ್ತೆ. ಮೈಯಲ್ಲಿ ಕುರ ಮೂಡಿದಾಗ ಬೆಣ್ಣೆ ಮತ್ತು ಸ್ವಲ್ಪ ವಿಭೂತಿ ಮಿಶ್ರಣ ಮಾಡಿ ಹಾಕಿದರೆ ಒಳ್ಳೆಯದು.


    ಬೆಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವ ವಿಟಮನಿನ್ ಎ ಇದೆ. ಇದು ಹಾರ್ಮೋನ್‌ಗಳನ್ನುನಿಯಂತ್ರಿಸಲು ಮತ್ತು ಆರೋಗ್ಯಕರ ಥೈರಾಯ್ಡ್ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 100 ಗ್ರಾಂ ಬೆಣ್ಣೆಯನ್ನು ದಿನವೂ ಸೇವಿಸಿದರೆ ಶೇ. 49ರಷ್ಟು ವಿಟಮಿನ್ ಎ ಅನ್ನು ಪೂರೈಸುತ್ತದೆ ಎಂದು ಅಧ್ಯಯನದಿಂದ ತಿಳಿದಿದೆ.


    ಲೌರಿಕ್ ಆಸಿಡ್ ಎಂಬುದು ಉತ್ತಮವಾದ ಆಂಟಿ ಫಂಗಲ್ ಕಾಂಪೌಡ್. ಇದು ಬೆಣ್ಣೆಯಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದು ಫಂಗಲ್ ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದಲ್ಲದೆ, ಕ್ಯಾಂಡಿಡಾ ಬೆಳವಣಿಗೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.


    ಬೆಣ್ಣೆಯ ನಿಯಮಿತ ಸೇವನೆಯಿಂದ ಕ್ಯಾನ್ಸರ್​ ರೋಗಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಸ್ತ್ರೀಯರು ಗರ್ಭ ಧರಿಸುವುದರಲ್ಲಿ ಬೆಣ್ಣೆ ಸಹಾಯಕ. ಮೂಳೆಗಳಿಗೆ ಕ್ಯಾಲ್ಸಿಯಂ ದೊರೆಯುವಂತೆ ಮಾಡುತ್ತದೆ. ಕೆಲವೊಂದು ಚರ್ಮ ರೋಗಗಳಿಗೆ ಬೆಣ್ಣೆ ಹಚ್ಚಿದಲ್ಲಿ ಉತ್ತಮ ಫಲಿತಾಂಸ ನೀಡುತ್ತದೆ. ಬೆಣ್ಣೆಯಲ್ಲಿ ವಿಟಮಿನ್​ ಎ ಇರೋದ್ರಿಂದ ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ಬುದ್ದಿ ಶಕ್ತಿಯನ್ನೂ ಹೆಚ್ಚಿಸುತ್ತದೆ.


    ಶೀತ ಮತ್ತು ಜ್ವರವನ್ನು ಎದುರಿಸಲು ಗರಿಷ್ಠ ಶಕ್ತಿಯನ್ನು ಬೆಣ್ಣೆ ಸೇವನೆಯಿಂದ ಪಡೆಯಬಹುದು. ಅಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಮೆಗಾ 3(Omega 3) ಕೊಬ್ಬಿನಾಮ್ಲವನ್ನು ಇದು ಪೂರೈಸುತ್ತದೆ.


    ಬೆಣ್ಣೆಯಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಅಂಶಗಳು ಹೇರಳವಾಗಿದೆ. ಇದು ದೇಹದಲ್ಲಿನ ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಕರಿಸುತ್ತದೆ. ವಿಟಮಿನ್ ಡಿ ಕ್ಯಾಲ್ಶಿಯಂ ಹೀರಿಕೊಳ್ಳಲು ಉತ್ತೇಜಿಸುತ್ತದಲ್ಲದೆ, ಮೂಳೆಯನ್ನು ಸರಿಪಡಿಸುವ ಹಾಗೂ ಬಲಿಷ್ಠಗೊಳಿಸಲು ಸಹಕರಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts