More

    ಕಲಿಕಾ ಅಭಿರುಚಿ ವೃದ್ಧಿಸಲು ಸರ್ಕಾರ ಸೂಚನೆ

    ಲಿಂಗಸುಗೂರು: ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಏರ್ಪಡಿಸಿದ್ದ ಹಳ್ಳಿ ಸೊಗಡು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಂಪ್ರದಾಯಿಕ ಉಡುಪು ಧರಿಸಿ ಕಂಗೊಳಿಸಿದರು.

    ಇದನ್ನೂ ಓದಿ: ವಸ್ತು ಪ್ರದರ್ಶನಗಳಿಂದ ಕಲಿಕಾ ಸಾಮರ್ಥ್ಯ ಹೆಚ್ಚಳ

    ಸರ್ಕಾರಿ ಶಾಲೆಗಳಲ್ಲಿ ಗಣಿತ ಕಲಿಕಾ ಆಂದೋಲನ, ಕಲಿಕಾ ಬಲವರ್ದನೆ, ಪ್ರತಿಭಾ ಕಾರಂಜಿ, ಸ್ಪರ್ಧಾತ್ಮಕ ಶಿಬಿರ, ಹಳ್ಳಿ ಸೊಗಡು ಹಾಗೂ ಬ್ಯಾಗ್ ಲೆಸ್ ಡೇ ಸೇರಿ ವಿವಿಧ ಕಾರ್ಯಕ್ರಮ ರೂಪಿಸುವ ಮೂಲಕ ಮಕ್ಕಳಲ್ಲಿ ಕಲಿಕಾ ಅಭಿರುಚಿ ವೃದ್ಧಿಸಲು ಹಾಗೂ ಜ್ಞಾನ ಮತ್ತು ಅನುಭವ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಸೂಚಿಸಿದೆ.

    ಸಾಂಪ್ರದಾಯಿಕ ಉಡುಪು ಧರಿಸಿ ಕಂಗೊಳಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು

    ಬಾಲಕರು ರಂಟೆ-ಕುಂಟೆ ಹೊಡೆದು ಬಿತ್ತನೆ ಮತ್ತು ಉಳುಮೆ ಮಾಡುವುದು, ಬಾಲಕಿಯರು ಒಲೆ ಹೊತ್ತಿಸಿ ಸಜ್ಜೆ, ಜೋಳದ ರೊಟ್ಟಿ ಮತ್ತು ತರಕಾರಿ ಪಲ್ಯೆ, ಚಟ್ನಿ ಪುಡಿ ಹೀಗೆ ಉತ್ತರ ಕರ್ನಾಟಕ ಭಾಗದ ನಾನಾ ಬಗೆಯ ಭಕ್ಷ ಭೋಜನಗಳನ್ನು ತಯಾರಿಸಿ ಸವಿದು ಖುಷಿ ಪಡುವ ಮೂಲಕ ಚಿಣ್ಣರ ಮೊಗದಲ್ಲಿ ಹೊಸತನದ ಅನುಭವ ಮೂಡಿತು.

    ಬಿಇಒ ಹುಂಬಣ್ಣ ರಾಠೋಡ್, ಇಸಿಒ ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಕರಡಿ, ಸಿಆರ್‌ಪಿ ಮೌನೇಶ, ಮುಖ್ಯಗುರು ವಿಜಯಲಕ್ಷ್ಮೀ, ಸಹ ಶಿಕ್ಷಕಿಯರಾದ ಸುಲೋಚನಾ, ಗೀತಾ, ಈರಮ್ಮ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts