More

    ವಸ್ತು ಪ್ರದರ್ಶನಗಳಿಂದ ಕಲಿಕಾ ಸಾಮರ್ಥ್ಯ ಹೆಚ್ಚಳ

    ಧಾರವಾಡ: ವಸ್ತು ಪ್ರದರ್ಶನಗಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನ ಬೆಳೆಸಿ, ಅವರ ಪ್ರತಿಭೆಯ ಬಗ್ಗೆ ಹೆಮ್ಮೆಯ ಭಾವನೆಯನ್ನು ಮೂಡಿಸುತ್ತವೆ. ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು ವಸ್ತು ಪ್ರದರ್ಶನಗಳ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
    ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕನ್ನಡ ಮಾಧ್ಯಮ ಫ್ರೌಡಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ಹಾಗೂ ಕರಕುಶಲ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರತಿಯೊಬ್ಬರಲ್ಲೂ ಹೊಸತನವನ್ನು ಮಾಡುವ ಸಾಮರ್ಥ್ಯ ಇರುತ್ತದೆ. ಹಿಂಜರಿಕೆ ಇಲ್ಲದೆ ಇಂತಹ ವಸ್ತು ಪ್ರದರ್ಶನಗಳಲ್ಲಿ ಪಾಲ್ಗೊಳ್ಳಬೇಕು. ತಯಾರಿಸುವ ಮಾದರಿಗಳು ದಿನನಿತ್ಯ ಬಳಕೆಗೆ ಅನುಕೂಲವಾಗುವಂಥ, ಸಾಮಾಜಿಕ ಕಳಕಳಿ ತೊರುವಂಥÀ, ಬುದ್ಧಿ ಸಾಮರ್ಥ್ಯ ಹೆಚ್ಚಿಸುವಂತಿರಬೇಕು ಎಂದರು.
    ವಸ್ತು ಪ್ರದರ್ಶನದಲ್ಲಿ ವಿಜ್ಞಾನ ವಿಷಯದ ೫೦, ಗಣಿತ ೨೫ ಹಾಗೂ ಸಮಾಜ ವಿಜ್ಞಾನದ ೫೦ಕ್ಕೂ ಹೆಚ್ಚು ಮಾದರಿಗಳಿದ್ದವು. ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ವೇಷಭೂಷಣ ಧರಿಸಿ, ವಿವಿಧತೆಯಲ್ಲಿ ಏಕತೆಯನ್ನು ಮೆರೆದರು.
    ಧರ್ಮಸ್ಥಳ ಧರ್ಮಾಽಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ೭೫ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಗಳು, ಕಾರಿನ ಚಿತ್ರಗಳು, ನುಡುಮುತ್ತುಗಳು ಹಾಗೂ ವಿವಿಧ ವಿಷಯಗಳನ್ನೊಳಗೊಂಡು ರಚಿಸಲಾದ ಕೈಪಿಡಿಯನ್ನು ಡಾ. ಅಜಿತ ಪ್ರಸಾದ್ ಬಿಡುಗಡೆಗೊಳಿಸಿದರು.
    ಮಹಾವೀರ ಉಪಾಧ್ಯೆ, ಸುನಿತಾ ಪಾಟೀಲ ಅತಿಥಿಯಾಗಿ ಪಾಲ್ಗೊಂಡಿದ್ದರು. ಸುಧಾಮಣಿ ರಾವ್, ಮೈನಾವತಿ ದಿವಟೆ ಹಾಗೂ ಶಿಕ್ಷಕಕರಿದ್ದರು. ಮಂಜುಳಾ ಯಾಳಗಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts