More

    ಕೃಷಿ ಪೂರಕ ಪ್ರಣಾಳಿಕೆ ಈಡೇರದಿದ್ದರೆ ಹೋರಾಟ

    ಶಿವಮೊಗ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೃಷಿಗೆ ಪೂರಕ, ಪರಿಸರಕ್ಕೆ ಸೂಕ್ತವಾದ, ರೈತರಿಗೆ ಅನುಕೂಲವಾಗುವ ರೈತರ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದ ರೈತ ನಾಯಕ ಕೆ.ಟಿ.ಗಂಗಾಧರ್ ರೈತರ ಹಕ್ಕೊತ್ತಾಯಗಳನ್ನು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಮುಂದಿರಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೃದ್ಧ ಮತ್ತು ಸುಸ್ಥಿರ ಕೃಷಿ ಕ್ಷೇತ್ರದ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ಮನುಕುಲದ ಒಳಿತಿಗಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಈ ಒತ್ತಾಯಗಳು ನೆರವೇರುವವರೆಗೂ ರೈತ ಚಳವಳಿ ಸದಾ ಗಮನಿಸುತ್ತಿರುತ್ತದೆ. ಅಗತ್ಯ ಎನಿಸಿದರೆ ಹೋರಾಟಕ್ಕೂ ಸಿದ್ಧ ಎಂದರು.
    ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಬೇಕು. ಭೂಸ್ವಾಧೀನ ಕಾಯ್ದೆಯನ್ನು ರೈತಪರವಾಗಿಸಬೇಕು. ಸರ್ಕಾರದ ನೀತಿಗಳಿಂದ ಹಾಗೂ ಹವಾಮಾನ ವೈಪರೀತ್ಯ ಕಾರಣಗಳಿಂದ ಬಿಕ್ಕಟ್ಟಿಗೆ ಸಿಲುಕಿರುವ ರೈತ ಸಮುದಾಯದ ಒಟ್ಟು ಸಾಲ ಮನ್ನಾ ಮಾಡಬೇಕು. ಸರ್ವಾಧಿಕಾರಿ ಧೋರಣೆ ನಿಲ್ಲಿಸಿ ಪ್ರಜಾಸತ್ತಾತ್ಮಕವಾಗಿ ವರ್ತಿಸಬೇಕು. ಪರಿಸರ ಪೂರಕ ಕೃಷಿಗೆ ಪ್ರೋತ್ಸಾಹಧನ ನೀಡಬೇಕು. ಸಂವಿಧಾನದ ಆಶಯದಂತೆ ನೀತಿ ನಿರೂಪಣೆ ಮಾಡಬೇಕು ಎಂದು ಒತ್ತಾಯಿಸಿದರು.
    ಕೃಷಿ ಕೈಗಾರಿಕೆ ಆಧಾರಿತ ಉದ್ಯೋಗ ಸೃಷ್ಟಿಯಾಗಬೇಕು. ಕೃಷಿ ಉತ್ಪನ್ನಗಳ ಮಾರುಕಟ್ಟೆ ಸುಧಾರಣೆ ಆಗಬೇಕು. ಕೃಷಿ ಉತ್ಪಾದಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
    ರೈತ ಸಂಘದ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಸಣ್ಣರಂಗಪ್ಪ, ಕೆ.ಸಿ.ಗಂಗಾಧರ್, ಜಗದೀಶ್ ನಾಯ್ಕ, ಕೃಷ್ಣಮೂರ್ತಿ, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts