ಪ್ರಾಜೆಕ್ಟ್​ ಕೆ ಇದೀಗ 'ಕಲ್ಕಿ 2898 AD'; ರಿಲೀಸ್​​ ದಿನಾಂಕದಲ್ಲಿ ಬದಲಾವಣೆ?

Untitled design - 2023-07-21T102157.054 (1)
Published on

ಆಂಧ್ರಪ್ರದೇಶ: ರೆಬಲ್​ ಸ್ಟಾರ್​​, ಡಾರ್ಲಿಂಗ್​ ಪ್ರಭಾಸ್​ ಮತ್ತು ನಾಗ್​ ಅಶ್ವಿನ್​​ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ಪ್ರಾಜೆಕ್ಟ್​​ ಕೆ ಚಿತ್ರದ ಶೀರ್ಷಿಕೆ ಇದೀಗ 'ಕಲ್ಕಿ 2898 AD' ಎಂದು ಬದಲಾವಣೆಗೊಂಡಿದ್ದು, ಟೈಟಲ್​​ ರೀತಿಯೇ ಸಿನಿಮಾದ ಬಿಡುಗಡೆ ದಿನಾಂಕವು ಬದಲಾಗಲಿದೆ ಎಂದು ವರದಿ ಹೇಳಿದೆ!

ಸ್ಯಾನ್​​ ಡಿಯಾಗೋ ಕಾಮಿಕ್​-ಕಾನ್​ ಕಾರ್ಯಕ್ರಮದಲ್ಲಿ ಪ್ರಭಾಸ್-ನಾಗ್ ಅಶ್ವಿನ್ ಸೇರಿದಂತೆ ಚಿತ್ರತಂಡ ಪ್ರಾಜೆಕ್ಟ್​​ ಕೆ ಶೀರ್ಷಿಕೆಯನ್ನು 'ಕಲ್ಕಿ 2898 AD' ಎಂದು ಅನಾವರಣಗೊಳಿಸಿದೆ. ಸೈನ್ಸ್​-ಫಿಕ್ಷನ್​ ಆಧರಿತವಾದ ಈ ಚಿತ್ರದ ಕಿರು ವಿಡಿಯೋ ಝಲಕ್​ ಅನ್ನು ಪ್ರಭಾಸ್​​ ರಿಲೀಸ್​ ಮಾಡಿದರು. ಗ್ಲಿಂಪ್ಸ್​ ದೃಶ್ಯವನ್ನು ನೋಡಿದ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಸದ್ಯ ಸಿನಿಮಾದ ಕಿರು ವಿಡಿಯೋ ಯುಟ್ಯೂಬ್​​ನಲ್ಲಿ ಟ್ರೆಂಡ್​​ ಆಗಲು ಪ್ರಾರಂಭಿಸಿದೆ.

ಈ ಮಧ್ಯೆ ಚಿತ್ರತಂಡ ಇತ್ತೀಚೆಗೆ ಬಿಡುಗಡೆಗೊಳಿಸಿದ ಕಿರು ವಿಡಿಯೋ ಮತ್ತು ಪೋಸ್ಟರ್​​ನಲ್ಲಿ ಬಿಡುಗಡೆ ದಿನಾಂಕವನ್ನು ತೆಗೆದುಹಾಕಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಉದ್ಭವಗೊಂಡಿದ್ದು, ಈ ಹಿಂದೆ ಚಿತ್ರತಂಡ ಜನವರಿ 12, 2024 ರಂದು ರಿಲೀಸ್​ ಮಾಡಲಿದ್ದೇವೆ ಎಂದು ತಿಳಿಸಿತ್ತು. ಆದ್ರೆ, ಇದೀಗ ಡೇಟ್​​ ಕಣ್ಮರೆಯಾಗಿರುವುದು ಫ್ಯಾನ್ಸ್​ಗಳಲ್ಲಿ ತೀವ್ರ ಗೊಂದಲವನ್ನು ಸೃಷ್ಟಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆರಂಭಗೊಂಡಿದ್ದು, ಯೋಜಿಸಿದಂತೆ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವುದಿಲ್ಲ ಎಂಬ ವದಂತಿಗಳು ಈಗ ವ್ಯಾಪಕವಾಗಿ ಹರಿದಾಡುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net