ಈ ಮಹಿಳೆ, ಅಧ್ಯಕ್ಷರಾದದ್ದು ಪ್ರಧಾನಿ ಮೋದಿಯಂತೆ ಚಹಾ ಮಾರಿ!

tea
Published on

ತುಮಕೂರು: ಈ ಎರಡು ಘಟನೆಗಳನ್ನು ನೋಡಿದಾಗ ದೇಶದಲ್ಲಿ ಟೀ ಮಾರುವವರಿಗೆ ಶುಕ್ರದೆಸೆ ಶುರುವಾಗಿದೆಯಾ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿಕೊಳ್ಳುವುದು ಸುಳ್ಳಲ್ಲ. ಅಂದು ಪ್ರಧಾನಿ ಮೋದಿ ಚಹಾ ಮಾರಿ ಬದುಕಿನ ಬಂಡಿ ಸಾಗಿಸಿ ಕಡೆಗೆ ದೇಶದ ಚುಕ್ಕಾಣಿ ಹಿಡಿದಿದ್ದರು. ಈ ಗ್ರಾಮ ಪಂಚಾಯತ್​ ಅಧ್ಯಕ್ಷೆಯೂ ಹೊಟ್ಟೆಪಾಡಿಗಾಗಿ ಚಹಾ ಮಾರುತ್ತಿದ್ದಾರೆ.

ತುಮಕೂರು ಜಿಲ್ಲೆಯ ಉರ್ಡಿಗೆರೆ ಗ್ರಾಮದ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದ ಅನ್ನಪೂರ್ಣಮ್ಮ, ಅವಿರೋಧವಾಗಿ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. ಆದರೆ ಗ್ರಾ.ಪಂ ಅಧ್ಯಕ್ಷೆಯಾದರೂ ಇವರು ಮಾತ್ರ ಚಹ ಮಾರುವುದನ್ನು ಇನ್ನೂ ಬಿಟ್ಟಿಲ್ಲ.

ಇವರು ದೇವರಾಯನದುರ್ಗದ ದೇವಸ್ಥಾನದ ಎದುರು ಅಂಗಡಿಯಲ್ಲಿ ಟೀ ಮಾರುತ್ತಾರೆ. ಅವರು ಕಳೆದ ಬಾರಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ನಿನ್ನೆ ನಡೆದ ಗ್ರಾ.ಪಂ‌ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ತುಮಕೂರಿನ ಉರ್ಡಿಗೆರೆ ಅವಿರೋಧವಾಗಿ ಅಧ್ಯಕ್ಷೆಯಾಗಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net