More

    ರಾಜ್ಯ ಬಜೆಟ್​ನಲ್ಲಿ ಮದ್ಯದ ದರ ಪರಿಷ್ಕರಣೆ; ಇಂದಿನಿಂದ ಮದ್ಯ ಪ್ರಿಯರಿಗೆ ತಟ್ಟುತ್ತೆ ಬೆಲೆ ಏರಿಕೆ ಬಿಸಿ!

    ಬೆಂಗಳೂರು: ಇಂದಿನಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇಂದಿನಿಂದ ಮದ್ಯ ತುಟ್ಟಿಯಾಗಲಿದ್ದು , ಶೇ. 20 ರಷ್ಟು ದರ ಹೆಚ್ಚಳ ಆಗಲಿದೆ.

    ಇದನ್ನೂ ಓದಿ: ಕುಡುಕರಿಗೆ ಬೆಲೆ ಹೆಚ್ಚಳದ ಕಿಕ್​ ಏರಿಸಲಿದೆ ರಾಜ್ಯ ಸರ್ಕಾರ! ಮದ್ಯ ದರ ಏರಿಕೆ ಎಷ್ಟಾಗುತ್ತೆ?

    ಇದೀಗ ಬಿಯರ್ ಬೆಲೆಯನ್ನು 10% ಏರಿಕೆ ಮಾಡಲಾಗಿದ್ದು ಇತರ ಮದ್ಯಗಳ ಬೆಲೆ 20%ನಷ್ಟು ಏರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಿಸಿದ್ದಂತೆ ಮದ್ಯದ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಸಂಪನ್ಮೂಲ ಕ್ರೋಢ್ರೀಕರಣ ಮಾಡುವ ದೃಷ್ಟಿಯಿಂದ ಮದ್ಯದ ಬೆಲೆ ಏರಿಕೆ ಮಾಡುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ಉಚಿತ ಮದ್ಯ ನೀಡುವಂತೆ ಆಗ್ರಹಿಸಿ ವಿನೂತನ ಪ್ರತಿಭಟನೆ!

    ಯಾವ ಮದ್ಯಕ್ಕೆ ಎಷ್ಟೆಷ್ಟು ದರ ಏರಿಕೆ ಆಗಬಹುದು?

    1. ಬಿಯರ್- ಸದ್ಯದ ದರ 230ರೂ. ಇದ್ದು 253 ರೂ. ಆಗಬಹುದು 
    2. ರಾಯಲ್ ಸ್ಟಾಗ್ 450 ರೂ. ಇದೆ 500. ರೂ ಆಗಬಹುದು
    3. Imperial blue-300 ರೂ. ಇದ್ದು 360 ರೂ. ಆಗಬಹುದು
    4. ರಾಯಲ್ ಚ್ಯಾಲೆಂಜ್- ಸದ್ಯದ ದರ 450 ರೂ ಇದ್ದು 500 ರೂ. ಆಗಬಹುದು
    5. Mc ವಿಸ್ಕಿ-300 ರೂ. ಇದೆ 360 ರೂ ಆಗಬಹುದು
    6. ಬ್ರಾಂಡಿ- mansion house-300‌ ರೂ. ಇದ್ದು 350 ರೂ. ಆಗಬಹುದು
    7. ವೋಡ್ಕಾ- 300 ರೂ. ಇದೆ 350 ರೂ. ಆಗಬಹುದು
    8. Black dog full-3360 ರೂ. ಇದೆ 4000 ರೂ. ಆಗಬಹುದು
    9. Vat69-3300 ಇದೆ ರೂ. 4000 ರೂ. ಆಗಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts