More

    ಕುಡುಕರಿಗೆ ಬೆಲೆ ಹೆಚ್ಚಳದ ಕಿಕ್​ ಏರಿಸಲಿದೆ ರಾಜ್ಯ ಸರ್ಕಾರ! ಮದ್ಯ ದರ ಏರಿಕೆ ಎಷ್ಟಾಗುತ್ತೆ?

    ಬೆಂಗಳೂರು: ಮಾರ್ಚ್​ ಮೊದಲ ವಾರದಲ್ಲಿ ರಾಜ್ಯ ಬಜೆಟ್​ ಮಂಡನೆಯಾಗಲಿದ್ದು, ಕರೊನಾದಿಂದ ಕಂಗೆಟ್ಟಿರುವ ಜನತೆ ಹಲವು ಯೋಜನೆಗಳ ನಿರೀಕ್ಷೆಯಲ್ಲಿದ್ದಾರೆ. ಹೆಚ್ಚುತ್ತಿರುವ ಬೆಲೆ ಏರಿಕೆ, ಕುಸಿಯುತ್ತಿರುವ ಸಂಪಾದನೆ ಮಟ್ಟ ಈ ಎರಡನ್ನೂ ಬ್ಯಾಲೆನ್ಸ್​ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುವುದೇ ಜನಸಾಮಾನ್ಯರಿಗೆ ದುಸ್ತರ ಎನಿಸಿದೆ. ಇದೇ ಪರಿಸ್ಥಿತಿ ರಾಜ್ಯ ಸರ್ಕಾರದ್ದೂ ಕೂಡ.

    ಕರೊನಾ ಪರಿಣಾಮ ರಾಜ್ಯದ ಆಥಿರ್ಕತೆ ಉತ್ತಮವಾಗಿಲ್ಲ. ಹಣಕಾಸಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಆರ್ಥಿಕತೆಯನ್ನ ಪುನಶ್ಚೇತನಗೊಳಿಸಲು ಸಜ್ಜಾಗಿರುವ ರಾಜ್ಯ ಸರ್ಕಾರ, ಮುಂಬರುವ ಬಜೆಟ್​ನಲ್ಲಿ ಕುಡುಕರಿಗೆ ಬೆಲೆ ಏರಿಕೆಯ ಕಿಕ್ ಕೊಡಲಿದೆ! ಇದನ್ನೂ ಓದಿರಿ ಮನೆಯಲ್ಲೇ ನಕಲಿ ಡಿಡಿ ತಯಾರು! ದಂಪತಿ ಸೇರಿ ನಾಲ್ವರ ಬಂಧನ: 7.18 ಕೋಟಿ ಡಿಡಿಗಳು ಜಪ್ತಿ

    ಇಂಡಿಯನ್​ ಮೇಡ್​ ಲಿಕ್ಕರ್​ (ಐಎಂಎಲ್​) ಹಾಗೂ ಬಿಯರ್​ ಮೇಲೆ ಶೇ.5ರಿಂದ ಶೇ.10ರವರೆಗೆ ಅಬಕಾರಿ ಸುಂಕ ವಿಧಿಸಲು ಚಿಂತಿಸಿರುವ ಸರ್ಕಾರ, ಶೀಘ್ರದಲ್ಲೇ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

    ಕುಡುಕರಿಗೆ ಬೆಲೆ ಹೆಚ್ಚಳದ ಕಿಕ್​ ಏರಿಸಲಿದೆ ರಾಜ್ಯ ಸರ್ಕಾರ! ಮದ್ಯ ದರ ಏರಿಕೆ ಎಷ್ಟಾಗುತ್ತೆ?ಕಳೆದ ಬಜೆಟ್​ನಲ್ಲಿ ಸರ್ಕಾರ ಮದ್ಯದ ಮೇಲೆ ಶೇ.6 ಹೆಚ್ಚುವರಿ ಅಬಕಾರಿ ಸುಂಕ ಹೇರಿತ್ತು. ಕಳೆದ ಏಪ್ರಿಲ್​ನಲ್ಲಿ ಜಾರಿ ಆಗಬೇಕಿದ್ದರೂ ಕರೊನಾ ನಿಯಂತ್ರಿಸಲು ಲಾಕ್​ಡೌನ್​ ಹೇರಿದ್ದರಿಂದ ಸಾಧ್ಯವಾಗಿರಲಿಲ್ಲ. ಬಳಿಕ ಮೇನಲ್ಲಿ ಬಿಯರ್​ ಹಾಗೂ ವೈನ್​ ಹೊರತುಪಡಿಸಿ ಐಎಂಎಲ್​ ಮೇಲೆ ಶೇ.17 ಅಬಕಾರಿ ಸುಂಕ ಹೆಚ್ಚಿಸಿತ್ತು. ಇದರಿಂದ 180 ಎಂಎಲ್​ ಬಾಟಲಿ​ ಮದ್ಯಕ್ಕೆ ಇರುವ ದರಕ್ಕಿಂತ ಆಂದಾಜು 16 ರೂ. ಹೆಚ್ಚಳವಾಗಿತ್ತು. ಅಲ್ಲದೆ, ಪ್ರತಿ ಬಲ್ಕ್​ ಲೀಟರ್​ಗೆ 153 ರೂ.ನಿಂದ 179 ರೂ.ಗೆ ಏರಿಕೆ ಆಗಿತ್ತು. ಎಂಟು ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಅಬಕಾರಿ ಸುಂಕ ವಿಧಿಸಲು ಸರ್ಕಾರ ಮುಂದಾಗಿದ್ದು, ಮದ್ಯ ಪ್ರಿಯರಲ್ಲಿ ಆತಂಕ ಶುರುವಾಗಿದೆ. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ಮುಂಬರುವ ಬಜೆಟ್​ನಲ್ಲಿ ಸರ್ಕಾರ, ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಿದರೆ ಐಎಂಎಲ್​ ಲಿಕ್ಕರ್​ ಹಾಗೂ ಬಿಯರ್​ ಬಾಟಲಿ​ ಬೆಲೆ 5ರಿಂದ 10 ರೂ. ಏರಿಕೆ ಆಗಲಿದೆ.

    ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಬಹುದು ಅಥವಾ ಇಲ್ಲದಿರಬಹುದು. ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ಸರ್ಕಾರ ಸುಂಕ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ನೀರಿಗಾಗಿ ಕೂಡಲಸಂಗಮದಿಂದ ರಾಜಭವನಕ್ಕೆ ರೈತರ ಪಾದಯಾತ್ರೆ: ವೈಎಸ್​ವಿ ದತ್ತಾ ಘೋಷಣೆ

    ಮನೆಯಲ್ಲೇ ನಕಲಿ ಡಿಡಿ ತಯಾರು! ದಂಪತಿ ಸೇರಿ ನಾಲ್ವರ ಬಂಧನ: 7.18 ಕೋಟಿ ಡಿಡಿಗಳು ಜಪ್ತಿ

    ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

    ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts