ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದ ದೆಹಲಿ ಮೂಲದ ಯುವಕ, ಆಕೆಯ ಮನೆಗೇ ಕನ್ನ ಹಾಕಿ ಪರಾರಿಯಾಗಿದ್ದಾನೆ. ಕನ್ನಮಂಗಲದ ಸಂದೀಪ್​ ವಿಹಾರ ಅಪಾರ್ಟ್​ಮೆಂಟ್​ ನಿವಾಸಿ 32 ವರ್ಷದ ಯುವತಿ ವಂಚನೆಗೊಳಗಾದವರು. ಕೋರಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವ ಸಂತ್ರಸ್ತ ಯುವತಿ, ಸಹೋದರಿ ಜತೆ ಕನ್ನಮಂಗಲದಲ್ಲಿ ನೆಲೆಸಿದ್ದಾರೆ. ಮದುವೆ ಮಾಡಿಕೊಳ್ಳಲು ವರನ ಹುಡುಕಲು ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಖಾತೆ ತೆರೆದು ಸ್ವವಿವರ ಅಪ್​ಲೋಡ್​ ಮಾಡಿದ್ದರು. ಇದನ್ನು ಗಮನಿಸಿದ್ದ ದಿಲೀಪ್​ ಕುಮಾರ್​ ದಾಸ್​ ಎಂಬಾತ ಸಂದೇಶ ಕಳುಹಿಸಿದ್ದ. ನನ್ನ … Continue reading ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!