More

    ಜನರಿಗೆ ಬಿಸಿ ಮುಟ್ಟಿಸಿದ ಎಳ ನೀರಿನ ಬೆಲೆ

    ಸಿಂಧನೂರು: ಉಷ್ಣಾಂಶ ಹೆಚ್ಚುತ್ತಿದ್ದಂತೆ ನಗರದಲ್ಲಿ ಎಳನೀರಿಗೆ ಬೇಡಿಕೆಯೂ ಹೆಚ್ಚಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರಿಗಳು ಎಳನೀರನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಎಳನೀರಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಆದರೆ, ಬೇಸಿಗೆಯಲ್ಲಿ ಹೆಚ್ಚು ಎನ್ನುವ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಒಂದು ಎಳ ನೀರಿನ ದರ 50 ರೂ.ಗೆ ಏರಿಕೆಯಾಗಿದೆ.

    ಗ್ರಾಹಕರು ಬೆಲೆ ಇಷ್ಟು ಯಾಕೆ ಎಂದು ಕೇಳಿದರೆ, ಬೇಕಿದ್ದರೆ ಖರೀದಿಸಬಹುದು ಇಲ್ಲದಿದ್ದರೆ ಇಲ್ಲ ಎಂದು ವ್ಯಾಪಾರಿಗಳು ಮುಖಕ್ಕೆ ಹೊಡೆದಂತೆ ಹೇಳುತ್ತಿರುವುದು ಸಾಮಾನ್ಯವಾಗಿದೆ. ತಂಪು ಪಾನೀಯಗಳ ಬದಲಿಗೆ ಜನರು, ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕಾಳಜಿಯಿಂದಾಗಿ ಎಳ ನೀರು ಕುಡಿಯುತ್ತಿದ್ದಾರೆ. ಆದರೆ ಎಳ ನೀರಿನ ದರ ಗಗನಮುಖಿಯಾಗುತ್ತಿರುವುದು ಎಲ್ಲರನ್ನೂ ದಂಗುಬಡಿಸಿದೆ.

    ಮೂರು ವರ್ಷ ಹಿಂದೆ 30 ರೂಪಾಯಿ ಇದ್ದ ಎಳನೀರಿನ ದರ 35, 40 ರೂಪಾಯಿಗೆ ಏರಿಕೆಯಾಗಿ ಇದೀಗ 50 ರೂಪಾಯಿಗೆ ತಲುಪಿದೆ. ಮಂಡ್ಯ, ಮೈಸೂರು ಭಾಗದಿಂದ ಎಳನೀರನ್ನು ತರಿಸಲಾಗುತ್ತಿದೆ. ಪ್ರತಿ ಎಳ ನೀರಿಗೆ 10 ರಿಂದ 15 ರೂ. ಲಾಭ ಪಡೆಯಲಾಗುತ್ತಿದೆ. ಅನಾರೋಗ್ಯ ಪೀಡಿತರಿಗೆ ಎಳನೀರು ಕುಡಿಯಬೇಕೆಂದು ವೈದ್ಯರು ಸಲಹೆ ನೀಡಿದರೆ, ಬಡ ಜನರು ದರ ಕೇಳಿ ಅಚ್ಚರಿಗೆ ಒಳಗಾಗುತ್ತಿದ್ದಾರೆ.

    ತಾಪಮಾನ ದಿನೇದಿನೆ ಏರಿಕೆಯಾಗುತ್ತಿರುವುದರಿಂದ ತಂಪು ಪಾನೀಯಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಆದರೆ, ಜನರಿಗೆ ಎಳ ನೀರಿನ ಮೇಲೆ ವ್ಯಾಮೋಹ. ದರ ಹೆಚ್ಚಳದಿಂದಾಗಿ ಕುಡಿಯುವವರು ಚಿಂತಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts