More

    ಉಕ್ಕೇರಿದ ಕಾಗಿಣಾ-ಮುಲ್ಲಾಮಾರಿ ; ಮಳಖೇಡ ಸೇತುವೆ ಮುಳುಗಿ ಕಲಬುರಗಿ -ಸೇಡಂ ಸಂಚಾರ ಬಂದ್

    ವರಣ‌ ಕೃಪೆ ಉಕ್ಕೇರಿದ ಕಾಗಿಣಾ-ಮುಲ್ಲಾಮಾರಿ ; ಮಳಖೇಡ ಸೇತುವೆ ಮುಳುಗಿ ಕಲಬುರಗಿ -ಸೇಡಂ ಸಂಚಾರ ಬಂದ್
    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಮುಲ್ಲಾಮಾರಿ ಮತ್ತು ಕಾಗಿಣಾ ನದಿಗಳು ತುಂಬಿ ಹರಿಯುತ್ತಿವೆ. ಮಳಖೇಡ ಮತ್ತು ಇವಣಿ ಸೇತುವೆ ಮುಳುಗಿವೆ.

    ಚಿಂಚೋಳಿ ತಾಲೂಕಿನ ಕೆಲ ಗ್ರಾಮಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಚಿಂಚೋಳಿ, ಚಿತ್ತಾಪುರ, ಕಲಬುರಗಿ ತಾಲೂಕಿನಲ್ಲಿ ಸುಮಾರು ೩೦ ಮನೆಗಳು ಸ್ವಲ್ಪ ಕುಸಿದು ಹಾನಿಯಾಗಿವೆ.

    ಸೇಡಂ ತಾಲೂಕಿನಲ್ಲಿ ಕಾಗಿಣಾ ನದಿ ಉಕ್ಕೇರಿ ಹರಿಯುತ್ತಿದೆ. ಮಳಖೇಡ ಬಳಿಯ ಕಾಗಿಣಾ ಸೇತುವೆ ಮೇಲೆ ನೀರು ಹರಿಯುತ್ತಿದೆ. ಅಲ್ಲದೆ ಇವಣಿ ಸೇತುವೆ ಸಹ ಮುಳುಗಿ ಸುತ್ತಲಿನ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

    ಮಳಖೇಡ ಸೇತುವೆ ಮೇಲೆ ಶುಕ್ರವಾರ ನಸುಕಿನ ಜಾವ ೨ ಗಂಟೆ ಸುಮಾರಿಗೆ ನೀರು ಸೇತುವೆ ಮೇಲೆ ತುಂಬಿ ಹರಿಯುತ್ತಿದ್ದರಿಂದ ಕಲಬುರಗಿ- ಸೇಡಂ ಹೆದ್ದಾರಿಯಲ್ಲಿ ಸುಮಾರು 6 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರು ಪರದಾಡುವಂತಾಗಿದೆ. ಎರಡು ಕಡೆಗಳಲ್ಲಿ ಅನೇಕ ವಾಹನಗಳು ನಿಂತುಕೊಂಡಿವೆ. ಇನ್ನೂ ಕೆಲವು ಕಡೆಗಳಲ್ಲಿ ಮಾರ್ಗ ಬದಲಿಸಿ ಸಂಚರಿಸುತ್ತಿವೆ.
    ಈಗ ಮಳೆ‌‌ ಕಡಿಮೆ ಆಗಿದ್ದು ಪ್ರವಾಹ ಇಳಿದು ಕೆಲಹೊತ್ತಿನಲ್ಲಿ ಸಂಚಾರ ಶುರು ಆಗಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts