ದೇವಾಲಯಕ್ಕೆ ದೇಣಿಗೆ ನೀಡಿದ ನಟ ಜೂ. ಎನ್​ಟಿಆರ್​! ಕೊಟ್ಟಿದ್ದು ಎಷ್ಟು ಲಕ್ಷ ರೂ. ಗೊತ್ತೇ?

WhatsApp-Image-2024-05-16-at-4.45.05-PM
Published on

ಆಂಧ್ರಪ್ರದೇಶ: ಪ್ಯಾನ್ ಇಂಡಿಯಾ 'ದೇವರ' ಚಿತ್ರದ ಚಿತ್ರೀಕರಣದಲ್ಲಿ ಸದ್ಯ ಸಖತ್ ಬ್ಯುಸಿಯಾಗಿರುವ ತೆಲುಗು ನಟ, ಜೂ. ಎನ್​ಟಿಆರ್​, ಇದೇ ಮೇ.20ರಂದು ತಮ್ಮ ಜನ್ಮದಿನವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಇದಕ್ಕೂ ಮೊದಲೇ ತಮ್ಮ ಇಷ್ಟದ ದೇವರ ದೇಗುಲಕ್ಕೆ ದೇಣಿಗೆ ನೀಡಿದ ನಟನ ಕಾರ್ಯಕ್ಕೆ ಇದೀಗ ಅವರ ಅಭಿಮಾನಿಗಳು ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಚೆಯ್ಯೆರುವಿನ ಶ್ರೀ ಭದ್ರಕಾಳಿ ಮತ್ತು ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ 12.5 ಲಕ್ಷ ರೂ. ಹಣವನ್ನು ಎನ್​ಟಿಆರ್​ ದೇಣಿಗೆಯಾಗಿ ದೇವಸ್ಥಾನದ ಮಂಡಳಿಗೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ. ಫೋಟೋದಲ್ಲಿರುವ ದೇವಸ್ಥಾನದ ಬೋರ್ಡ್​ನಲ್ಲಿ ಎನ್​ಟಿಆರ್​ ಅವರ ಕುಟುಂಬದವರ ಹೆಸರುಗಳಿರುವುದು ಕಂಡುಬಂದಿದೆ.

ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನಟನ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ 'ವಾರ್' ಸಿನಿಮಾದ​ ಶೂಟಿಂಗ್​ಗಾಗಿ ಮುಂಬೈನಲ್ಲಿ ಉಳಿದುಕೊಂಡಿರುವ ಜೂ. ಎನ್​ಟಿಆರ್​, ತಮ್ಮ ಹುಟ್ಟುಹಬ್ಬವನ್ನು ಮುಂಬೈನಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net