ಸತತ 4 ಸೋಲು..ತಂಡದ ವೈಫಲ್ಯ ಒಪ್ಪಿಕೊಂಡ ರಾಜಸ್ಥಾನ್​ ರಾಯಲ್ಸ್ ನಾಯಕ ಸ್ಯಾಮ್ಸನ್!

blank

ನವದೆಹಲಿ: ಐಪಿಎಲ್ 2024 ರ ಆರಂಭದಲ್ಲಿ ಒಂಬತ್ತು ಪಂದ್ಯಗಳ ಪೈಕಿ ಎಂಟರಲ್ಲಿ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಈಗ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದೆ. ತಂಡದ ಈ ಸೋಲುಗಳಿಗೆ ನಾಯಕ ಸಂಜು ಸ್ಯಾಮ್ಸನ್ ಪ್ರತಿಕ್ರಿಯಿಸಿದ್ದು, ನಾವು ಕೆಲವು ವೈಫಲ್ಯಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ನು ಉಳಿದಿರುವುದು ಕೇವಲ 5 ಪಂದ್ಯಗಳು! 3-4 ಸ್ಥಾನ ಯಾರ ಮುಡಿಗೆ? ಹೀಗಿದೆ ನೋಡಿ ಪ್ಲೇಆಫ್ ಲೆಕ್ಕಾಚಾರ

ಐಪಿಎಲ್ ನಲ್ಲಿ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ರಾಜಸ್ಥಾನ್ ರಾಯಲ್ಸ್ ಸೋಲಿಗೆ ಶರಣಾಗಿದ್ದು ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟು ಮಾಡಿದೆ. ತಂಡ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುತ್ತಿರುವಂತೆ ತೋರುತ್ತಿದೆ. ಪ್ಲೇಆಫ್ ಪಂದ್ಯವನ್ನು ಆಡುವ ಮೊದಲು ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಹೋಗಬೇಕಿದೆ ಎಂದು ಸ್ಯಾಮ್ಸನ್ ವೈಫಲ್ಯಗಳನ್ನು ಒಪ್ಪಿಕೊಂಡರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಹಿಂತಿರುಗಿ ನೋಡಲೇಬೇಕು. ನಾವು ಕೆಲವು ವೈಫಲ್ಯಗಳ ಮೂಲಕ ಸಾಗುತ್ತಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಬೇಕು” ನಾವು ಸತತವಾಗಿ ನಾಲ್ಕು ಪಂದ್ಯ ಸೋತಾಗ, ತಂಡದಲ್ಲಿ ಯಾವುದು ಸರಿಯಿಲ್ಲ ಎಂಬುದು ನನ್ನ ಅರಿವಿಗೆ ಬಂದಿದೆ. ಐಪಿಎಲ್​ 2024ರ ಋತುವಿನ ಅಂತ್ಯಕ್ಕೆ ಹೋಗುತ್ತಿರುವಾಗ, ತಂಡದ ಪ್ರತಿಯೊಬ್ಬ ಆಟಗಾರ ತನ್ನ ಬೆರಳನ್ನು ಮೇಲೆತ್ತಿ, ‘ನಾನು ತಂಡಕ್ಕಾಗಿ ಸಮರ್ಪಣೆ ಮಾಡಿಕೊಂಡು ಪಂದ್ಯವನ್ನು ಗೆಲ್ಲಿಸಲಿದ್ದೇನೆ’ ಎಂದು ಹೇಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದು ಇಡೀ ತಂಡದ ಕ್ರೀಡೆಯಾಗಿದೆ. ನಾವು ತಂಡದಲ್ಲಿ ಸಾಕಷ್ಟು ಪಂದ್ಯ ಗೆಲ್ಲಿಸುವ ತಾಕತ್​ ಇರುವ ಆಟಗಾರರರನ್ನು ಹೊಂದಿದ್ದೇವೆ. ನಾವು ಈಗಲೇ ದೃಢ ಹೆಜ್ಜೆ ಹಾಕಲು ನಿರ್ಧರಿಸಬೇಕಿದೆ. ಉತ್ಸಾಹದಿಂದ ಎಲ್ಲರೂ ಶ್ರಮಹಾಕಿದರೆ, ಒಂದಿಬ್ಬರು ಆಟಗಾರರು ಯಶಸ್ವಿಯಾದರೆ, ಖಂಡಿತಾ ಬದಲಾವಣೆ ತರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಋತುವಿನಲ್ಲಿ ಎಲ್ಲ ತಂಡಗಳು 200 ಅಥವಾ 220 ರನ್ ಗಳಿಸುತ್ತಿರುವಾಗ ನಾವು ಈ ರೀತಿಯ ವಿಕೆಟ್‌ಗಳಲ್ಲಿ ಆಡುವ ಅಭ್ಯಾಸವನ್ನು ಹೊಂದಿಲ್ಲ. ನಾವು ಸ್ಮಾರ್ಟ್ ಕ್ರಿಕೆಟ್ ಅನ್ನು ಆಡಬೇಕಾಗಿತ್ತು. ಮೂಲಭೂತ ವಿಷಯಗಳ ಮೇಲೆ ಕೇಂದ್ರೀಕರಿಸಬೇಕು. ಎಲ್ಲೆಡೆ ಬೌಂಡರಿಗಳನ್ನು ಹೊಡೆಯಲು ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ನಂತರ ರಾಜಸ್ಥಾನ್​ ರಾಯಲ್ಸ್ ಐಪಿಎಲ್ ಪ್ಲೇಆಫ್‌ನಲ್ಲಿ ತನ್ನ ಸ್ಥಾನ ಕಾಯ್ದಿರಿಸಿಕೊಂಡಿದೆ. ಈ ಬೆಳವಣಿಗೆಯು ಸ್ಯಾಮ್ಸನ್‌ಗೆ “ರಿಲೀಫ್” ನೀಡಿದೆ. ರಾಜಸ್ಥಾನ್​ ರಾಯಲ್ಸ್‌ನ ಈ ಋತುವಿನ ಕೊನೆಯ ಲೀಗ್ ಪಂದ್ಯವು ಭಾನುವಾರ ಗುವಾಹಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ.

ರಾಜಸ್ಥಾನ್ ರಾಯಲ್ಸ್ ಐಪಿಎಲ್ 2024 ರ ಆರಂಭದಲ್ಲಿ ಗೆಲುವಿನ ಸರಮಾಲೆಗಳೊಂದಿಗೆ ವೇಗವಾಗಿ ಮುನ್ನುಗ್ಗುತ್ತ ಬಂದಿತ್ತು. ಮೊದಲ ಒಂಬತ್ತು ಪಂದ್ಯಗಳಲ್ಲಿ ಎಂಟನ್ನು ಗೆಲ್ಲುವ ಮೂಲಕ ಆರಂಭಿಕ ವೇಗಿಗಳಾಗಿದ್ದರು. ಆದರೆ ಬುಧವಾರದಂದು ಈಗಾಗಲೇ ಎಲಿಮಿನೇಟ್ ಆಗಿರುವ ಪಿಬಿಕೆಎಸ್ ಸೇರಿದಂತೆ ಸತತ ನಾಲ್ಕು ಸೋಲುಗಳೊಂದಿಗೆ ಆ ವೇಗ ಕಳೆದುಕೊಂಡಂತೆ ತೋರುತ್ತಿದೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ನಂತರ, ಸ್ಯಾಮ್ಸನ್ ಅವರು ಇನ್ನೂ “ಯೋಗ್ಯ ಕ್ರಿಕೆಟ್” ಆಡಬೇಕಿದೆ ಎಂದಿದ್ದರು. ಪಿಬಿಕೆಎಸ್​ ನಿಂದ ಸೋಲುಂಡ ನಂತರ, ಅವರು ಆತ್ಮಾವಲೋಕನ ಮಾಡಿಕೊಳ್ಳುವ ಮಾತುಗಳನ್ನಾಡಿದ್ದಾರೆ.

ಯುವ ನಾಯಕನಿಂದ ಶಾಕ್ ಆದ ಚಿರಂಜೀವಿ.. ಅದೇ ಸಮಯದಲ್ಲಿ ಮೆಗಾಸ್ಟಾರ್ ಗೆ ಮೋಸ ಮಾಡಿದ್ದಾನಾ?

Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…